ಬಂಡವಾಳಶಾಹಿಗಳಿಂದ ಹೋರಾಟಗಾರರನ್ನು ಹತ್ತಿಕ್ಕಲು ಹುನ್ನಾರ: ದಲಿತ ಮುಖಂಡ ರಾಮೇನಹಳ್ಳಿ ವೆಂಕಟೇಶ್ ಕಿಡಿ.
ಬೇಲೂರು.
ಹಾಸನ- ಬೇಲೂರು ಹೆದ್ದಾರಿಯ ರಾಮಚಂದ್ರಪುರ ಗ್ರಾಮದ ಸರ್ವೆ ನಂ 16/1,16/2,16/3,16/4 ರಲ್ಲಿ ಲತಾಕಮಾರಿ ಎಂಬುವರು ಸಮಾರು 1.22 ಗುಂಟೆ ಸರ್ಕಾರಿ ಜಾಗವನ್ನು ಮತ್ತು ಸರ್ಕಾರಿ ಸ್ವಾಮ್ಯದ ರಾಜಕಾಲುವೆ ಜಾಗವನ್ನ ಕಬಳಿಕೆ ಮಾಡುವ ಜೊತೆಗೆ ರಾಜಕಾಲುವೆಯನ್ನು ಮುಚ್ಚಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದರೂ ಕೂಡ ಅವರ ವಿರುದ್ದ ತಾಲ್ಲೂಕು ಆಡಳಿತ ಯಾವುದೆ ಕ್ರಮ ಕೈಗೊಂಡಿಲ್ಲ ಮತ್ತು ಸರ್ಕಾರದಿಂದ ರಾಜಕಾಲುವೆಗೆ ಸುಮಾರು 66 ಅಡಿ ಜಾಗ ಕಳೆದಿದ್ದಾರೆ.
ಅದರಲ್ಲಿರುವಂತಹ ನೂರಾರು ಮರಗಳನ್ನು ಕಡಿದು,ಕಾಲುವೆಗೆ ಹಾಕಿ ಮಣ್ಣಿನಿಂದ ಮಚ್ಚಿ ಅಕ್ರಮವಾಗಿ ಜಮೀನು ಒತ್ತುವರಿ ಮಾಡಿದ್ದಾರೆ ಕಳೆದ 15 ದಿನಗಳ ಹಿಂದೆಯಷ್ಟೆ ದಲಿತಪರ ಸಂಘಟನೆಗಳು ಹಾಗೂ ಚಿಂತಕರು ಸ್ಥಳಕ್ಕೆ ತೆರಳ ತಹಸೀಲ್ದಾರ್ ಹಾಗೂ ಜಿಲ್ಲದಿಕಾರಿಗಳ ಗಮನಕ್ಕೆ ತ ರುವದಾಗಿ ಹೋರಾಟ ಮಾಡದ್ದೆವು. ಮತ್ತು ಪತ್ರಿಕೆ ಮಾಧ್ಯಮದಲ್ಲಿ ಸುದ್ದಿಯಾಗಿತ್ತು ಆದರೆ ಇಲ್ಲಿಯವರೆಗೂ ತಾಲ್ಲೂಕು ಆಡಳಿತ ಭೂಗಳ್ಳರ ವಿರದ್ದ ಯಾವುದೆ ಕ್ರಮ ಕೈಗೊಂಡಿಲ್ಲ ಕೂಡಲೆ ಅವರ ವಿರುದ್ದ FIR ದಾಖಲು ಮಾಡಬೇಕು ಮತ್ತು ಕಾಲುವೆಗೆ ಮುಚ್ಚಿರುವ ಮಣ್ಣನ್ನು ತೆರವುಗೊಳಿಸಬೇಕು ಅರಣ್ಯ ಇಲಾಖೆ ಸ್ಥಳ ಪರಿಶೀಲಿಸಿ ಮರಗಳನ್ನು ನಾಶ ಮಾಡಿರುವವರ ವಿರುದ್ದ ಕೇಸ್ ಹಾಕಬೇಕು. ಮತ್ತು ತಹಸೀಲ್ದಾರ್ ಎಚ್ಚೆತ್ತುಕೊಂಡು ಅಕ್ರಮವಾಗಿ ಸರ್ಕಾರಿ ಜಾಗ ನುಂಗಲು ಹೊರಟಿರುವ ಭೂಗಳ್ಳರಿಗೆ 50 ಲಕ್ಷ ದಂಡ ವಿಧಿಸಬೇಕು ಇಲ್ಲವಾದರೆ ಸೋಮವಾರದಿಂದ ತಾಲ್ಲೂಕಿನ ಎಲ್ಲಾ ದಲಿತಪರ ಹೋರಾಟಗಾರು ತಹಸೀಲ್ದಾರ್ ಕಛೇರಿ ಮುಂದೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಗೆ ಎಚ್ಚರಿಕೆ ನೀಡಿದರು.
ದಲಿತಪರ ಹೋರಾಟಗಾರ ತಿರುಮಲನ ಹಳ್ಳಿ ಶಿವಕುಮಾರ್ ಮಾತನಾಡಿ,ತಾಲ್ಲೂಕಿನಲ್ಲಿ ಎಸ್ಸಿ ಎಸ್ಟಿ ಸಮುದಾಯದ ಕೆಲ ಕುಟುಂಬಗಳಿಗೆ ಒಂದು ಗುಂಟೆಯಷ್ಟು ಜಾಗ ಇಲ್ಲದೆ ಪರದಾಡುತ್ತಿದ್ದಾರೆ.ಈಗಾಗಲೆ ಅಕ್ರಮ ಭೂ ಮಂಜೂರಾತಿ ಹಗರಣ,ರಾಜ್ಯದಲ್ಲಿ ಸುದ್ದಿಯಾಗಿದೆ. ಹಿಂದಿನಿಂದಲೂ ಬೇಲೂರು ಸುತ್ತ ಮುತ್ತಲಿನ ರಾಜಕಾಲುವೆಗಳನ್ನು ಕೆಲ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪವೂ ಇದೆ.ಅದೇ ರೀತಿ ಹಾಸನ ಬೇಲೂರು ಹೆದ್ದಾರಿಗೆ ಹೊಂದಿಕೊಂಡಿರುವ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ರಾಮಚಂದ್ರಪುರ ಗ್ರಾಮದ ಸರ್ವೆ ನಂ ಜಾಗದಲ್ಲಿ ಕೆಲ ಭೂಗಳ್ಳರು ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಕೆ ಮಾಡಿದ್ದಾರೆ ಹದಿನೈದು ದಿನದ ಹಿಂದೆ ಜಾಗದಲ್ಲಿ ಪ್ರತಿಭಟನೆ ಮಾಡದ್ದೆವು.ಪತ್ರಿಕೆ ಮಾದ್ಯಮಗಳ ಮೂಲಕ ತಹಸೀಲ್ದಾರ್ ಗಮನಕ್ಕೂ ಬಂದಿದೆ ಆದರೂ ಭೂಗಳ್ಳರ ವಿರುದ್ದ ಕ್ರಮವಹಿಸದೆ ಇರುವುದನ್ನು ನೋಡಿದರೆ ಭೋಗಳ್ಳರ ಜೊತೆ ತಹಸೀಲ್ದಾರ್ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ ಕೂಡಲೆ ಶಾಸಕರು ಇದರ ಬಗ್ಗೆ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ರಾಜಕಾಲುವೆ ತೆರವುಗೊಳಿದಿದ್ದರೆ ಮುಂದಿನ ಎಸ್ಸಿ ಎಸ್ಟಿ ಸಭೆಯನ್ನು ಬಹಿಷ್ಕಾರ ಮಾಡುತ್ತೇವೆ.ನಾವು ಯಾರಿಗೂ ಮಾರಾಟ ವಾಗಿಲ್ಲ.ಹೋರಾಟಗಾರರನ್ನುಹತ್ತಿಕ್ಕಲು ಕೆಲ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದಾರೆ ಕೂಡಲೆ FIR ಮಾಡಬೇಕು ಇಲ್ಲವಾದರೆ ತಹಸೀಲ್ದಾರ್ ಕಛೇರಿ ಎದುರು ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ರಾಮೇನಹಳ್ಳಿ ವೆಂಕಟೇಶ್ ಮಾತನಾಡಿ,ಬ್ರಿಟಿಷ್ ರ ಕಾಲದಲ್ಲಿ ರಣಘಟ್ಟ ಒಡ್ಡು ವಿನಿಂದ ಹಳೇಬೀಡು ದ್ವಾರಸಮುದ್ರ ಕೆರೆಗೆ ನೀರು ಪೂರೈಸುವ ರಾಜಕಾಲುವೆಯನ್ನು ಕೆಲ ಭೂಗಳ್ಳರು ಅಕ್ರಮವಾಗಿ ಕಬಳಿಕೆ ಮಾಡುತ್ತಿದ್ದಾರೆ.ಸರ್ವೇ ನಂ 16/1,02,03 ಮತ್ತು 04ರಲ್ಲಿ ಸುಮಾರು ಒಂದು ಎಕರೆ ಜಾಗ ಖರೀದಿಸಿ ಪಕ್ಕದಲ್ಲಿರುವ ಎರಡು ಎಕರೆ ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದಾರೆ ಹಿಂದಿನಿಂದಲೂ ಕೆಲ ಭೂಮಾಫಿಯಾ ಗ್ಯಾಂಗ್ ನವರು ಅಧಿಕಾರಿಗಳು ಮತ್ತು ರಾಜಕಾರಣಿಗಳ ಜೊತೆ ಶಾಮಿಲಾಗಿ ಎಲ್ಲಿ ಸರ್ಕಾರಿ ಜಾಗ,ಅಥವಾ ರಾಜಕಾಲುವೆಗಳು ಇವೆ ಅಂತಹ ಜಾಗಗಳನ್ನೆ ಗುರಿಯಾಗಿಸಿಕೊಂಡು ಕಬಳಿಕೆ ಮಾಡುವ ಹುನ್ನಾರ ಮಾಡಿ ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಗಮನಹರಿಸಿ ಮತ್ತು ಒತ್ತುವರಿಗೆ ಮುಂದಾಗಿರುವ ಭೂ ಗಳ್ಳರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮವಾಗಿ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಬೇಕು ಇಲ್ಲವಾದರೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು
ಒತ್ತಾಯ ಮಾಡಿದ್ದಾರೆ.
