🔴ಗ್ರಾಮದ ಅಭಿವೃದ್ದಿಗೆ ಮೀಸಲಿಟ್ಟ ಜಾಗವನ್ನು ಕಬಳಿಸಲು ಯತ್ನ:ಗ್ರಾಮಸ್ಥರ ಆಕ್ರೋಶ.
ಆಲೂರು:ತಾಲ್ಲೂಕಿನ ಭೈರಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಧರ್ಮಪುರಿ ಗ್ರಾಮದಲ್ಲಿ ಅಭಿವೃದ್ದಿಗೆ ಮಿಸಲಿಟ್ಟಿದ್ದ ಜಾಗವನ್ನು ಕೃಷ್ಣೇಗೌಡ ಬಿನ್ ಸಣ್ಣೇಗೌಡ ಅವರ ಹೆಸರಿಗೆ ಮುಂಜೂರು ಮಾಡಿರುವುದು ಕಾನೂನು ಬಾಹೀರ ಎಂದು ಗ್ರಾಮಸ್ಥರ ಪರವಾಗಿ ಗಣೇಶ್ ಅವರ ತಾಲ್ಲೂಕು ಕಚೇರಿ ಎದುರು ಮೌನವಾಗಿ ಪ್ರತಿಭಟಿಸುವ ಮೂಲಕ ಉಪತಹಸಿಲ್ಧಾರ್ ಅಂಕೇಗೌಡ ಅವರಿಗೆ ಮನವಿ ಮಾಡಿದರು.
ಸುಮಾರು 50 ವರ್ಷದ ಹಿಂದೆ ಹೇಮಾವತಿ ಜಲಾಶೆಯಕ್ಕೆ ತಮ್ಮ ಗ್ರಾಮಗಳು ಹಾಗೂ ಮುಳುಗಡೆಯಾದುದರಿಂದ ಸರ್ಕಾರದಿಂದ ಮುಳಗಡೆ ಸಂತಸ್ರರಿಗೆ ಗ್ರಾಮವಾಗಿ ಸದರಿ ಗ್ರಾಮವು ನಿರ್ಮಾಣಗೊಂಡು ತಮ್ಮ ತಮ್ಮ ನಿವೇಶನಗಳಾಗಿ ಹೊಂದಿ ಮನೆ ಮಾಡಿಕೊಂಡು ಸುಮಾರು 50 ವರ್ಷದಿಂದ ವಾಸಮಾಡಿಕೊಂಡು ಬಂದಿರುತ್ತೇವೆ.
ಗ್ರಾಮದ ಅಭಿವೃದ್ಧಿಗಾಗಿ ಸ್ವಲ್ಪ ವಿಸ್ತೀರ್ಣವನ್ನು ಬಿಟ್ಟುಕೊಂಡಿದ್ದೇವು. ಹಾಗೂ ಈ ಜಾಗದಲ್ಲಿ ಗ್ರಾಮದ ಅವಶ್ಯಕತೆಗಾಗಿ ಬಳಸಿಕೊಳ್ಳುತ್ತಿದ್ದೇವು. ಹೀಗಿರುವಾಗ ಸದರಿ ವಿಸ್ತೀರ್ಣದ ಪೈಕಿ 1 ಎಕರೆ 30 ಗುಂಟೆ ವಿಸ್ತೀರ್ಣವನ್ನು ಕೃಷ್ಣಗೌಡ ಬಿನ್ ಸಣೇಗೌಡ ಮಂಜೂರಾಗಿದ್ದು ತದನಂತರ ನಾರಾಯಣಗೌಡ ರವರ ಹೆಸರಿನಲ್ಲಿ ಇವರಿಗೆ ನಮೂದಾಗಿರುವ ವಿಷಯವು ಇತ್ತೀಚೆಗೆ ದಾಖಲಾತಿ ತೆಗಿಸಿ ನೋಡಿದಾಗ ತಿಳಿದುಬಂದಿರುತ್ತದೆ. ತಮ್ಮ ಗ್ರಾಮದಲ್ಲಿ ಹೆಚ್ಚುವರಿ ಜನ ಸಂಖ್ಯೆಯಾಗಿದ್ದು ಗ್ರಾಮದ ಅಭಿವೃದ್ಧಿಗೆ ಅತ್ಯವಶ್ಯಕವಾಗಿರುತ್ತದೆ. ಈ ಮೇಲ್ಕಂಡ ವಿಚಾರಕ್ಕೆ ಸಂಬಂದಿಸಿದಂತೆ 1998 ರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಸರ್ವೆ ಇಸ್ಪೆಟ್ಕರ್‌ಗೆ ಮತ್ತು ತಾಲ್ಲೂಕು ತಹಶಿಲ್ದಾರ್‌ರವರಿಗೆ ತಡೆ ಹಿಡಿಯುವುದಕ್ಕಾಗಿ ಮನವಿ ಪತ್ರ ನೀಡಲಾಗಿತ್ತು ಅದರ ನಕಲು ಪ್ರತಿಗಳು ಗ್ರಾಮಸ್ಥರ ಬಳಿ ಇರುತ್ತದೆ. ಆದರೆ ಈವರೆಗೂ ಈ ವಿಚಾರವಾಗಿ ತಹಶಿಲ್ದಾರ್ ಅಥವಾ ಮಾನ್ಯ ಜಿಲ್ಲಾಧಿಕಾರಿಗಳೇ ಆಗಲಿ ಯಾವುದೆ ಕ್ರಮ ಕೈಗೊಂಡಿರುವುದಿಲ್ಲ. ಒಂದು ವೇಳೆ ಸದರಿ ಜಾಗವನ್ನು ಬಿಡಿಸಿಕೊಡದಿದ್ದರೆ ನಮ್ಮಗಳಿಗೆ ತುಂಬ ತೊಂದರೆಯಾಗಿ ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದುದ್ದರಿಂದ ತದನಂತರ ತಾವುಗಳು ಕೃಷ್ಣಗೌಡರವರಿಗೆ ಫಾರಾಯಣಗೌಡರವರಿಗೆ ನಮೂದು ಮಾಡಿರುವ ವಿಸ್ತೀರ್ಣವನ್ನು ರದ್ದುಗೊಳಿಸಿ,ದಯಮಾಡಿ ಮಂಜೂರು ನಾರಾಯಣಗೌಡ ಹಾಗೂ ಕೃಷ್ಣಗೌಡರವರಿಂದ ಸದರಿ ವಿಸ್ತೀರ್ಣಕ್ಕೆ ಯಾವುದೇ ಅಡ್ಡಿ ಅಡಚಣೆ ಪಡಿಸಿದಂತೆ ಕಾನೂನು ಕ್ರಮ ಜರುಗಿಸಿಕೊಡಬೇಕೆಂದು ಹಾಗೂ ಸದರಿ ವಿಸ್ತೀರ್ಣವನ್ನು ಗ್ರಾಮದ ಶ್ರೇಯೋಭಿವೃದ್ಧಿ ದೃಷ್ಟಿಗಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಗಣೇಶ್ ಮಾಧ್ಯಮದ ಮೂಲಕ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು,ಯುವ ಮುಖಂಡರು,ಮಹಿಳೆಯರು ಭಾಗವಹಿಸಿದ್ದರು.
