Blog

ಸರಕಾರಿ ನೌಕರರ ಸಂಘದ ಮಹಾ ಸಭೆ

🔴ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಆಲೂರು ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

🔴ಸರ್ಕಾರಿ ನೌಕರರ ಕುಂದು ಕೊರತೆಗಳನ್ನು ಹೋಗಲಾಡಿಸಲು ಸಂಘ ಹಗಲಿರಳು ಶ್ರಮಿಸುತ್ತಿದೆ : ತಾಲೂಕು ಅಧ್ಯಕ್ಷ ಡಿ.ಎಂ. ವರದರಾಜು*

ಆಲೂರು : ರಾಜ್ಯ ಸರ್ಕಾರಿ ನೌಕರರ ಸಂಘ ವಿವಿಧ ಇಲಾಖೆಗಳ ನೌಕರರ ಹಿತರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಸರ್ಕಾರದೊಂದಿಗೆ ಚರ್ಚಿಸಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಯೋನ್ಮುಖವಾಗಿದೆ ಎಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿಎಂ ವರದರಾಜು ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ತಾಲೂಕು ಸಂಘದ ವತಿಯಿಂದ ಕರೆಯಲಾಗಿದ್ದ 2026 – 27 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನೌಕರರ ಸಂಘದ ಕಟ್ಟಡ ಸಂಘದ ಸದಸ್ಯತ್ವದ ವಾರ್ಷಿಕ ಸಂದಾಯ ಹಾಗೂ ನೌಕರರ ಬಗ್ಗೆ ಆಸಕ್ತಿ ಇರುವ ಸಮಾಜ ಸೇವಕರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಟ್ಟಡದ ರಿಪೇರಿ, ಬಣ್ಣ, ಮುಂತಾದ ದುರಸ್ತಿಯನ್ನು ನೌಕರರ ಹಾಗೂ ಸಮಾಜಸೇವಕರ ಸಹಕಾರದಿಂದ ವ್ಯವಸ್ಥಿತವಾಗಿ ಮಾಡಲಾಗಿದೆ. ಸಂಘದ ಅಭಿವೃದ್ಧಿಗಾಗಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದ್ದಾರೆ ಎಂದರು.

ತಾಲೂಕು ಕಾರ್ಯದರ್ಶಿ ಹೇಮಂತ್ ಕುಮಾರ್ 2025 – 26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು. ಖಜಾಂಚಿ ಡಾ. ಅನಿಲ್ ಕುಮಾರ್ ಅನುಮೋದಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ನಯನ, ನಿರ್ದೇಶಕ ವೈ. ಆರ್. ರವಿ, ಹಾಲಿ ಗೌರವಾಧ್ಯಕ್ಷ ಬಿ. ಆರ್. ಧರ್ಮ, ಆರೋಗ್ಯ ಇಲಾಖೆಯ ಮಂಜಣ್ಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಆರ್. ಶ್ರೀನಿವಾಸ್, ಉಪಾಧ್ಯಕ್ಷ ಎಂ.ಆರ್. ವೇಣುಗೋಪಾಲ್, ಶಿಕ್ಷಕರಾದ ಸಿ. ಎಸ್. ಅಣ್ಣಪ್ಪ, ಎಚ್.ಪಿ. ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ಉಪ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕಾರ

Bimba Prakashana

ಕುನಿಗನ ಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಗಿರೀಶ್

Bimba Prakashana

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More