Blog

ತಾಯಿ ಮಗು ಆತ್ಮಹತ್ಯೆ

ವರದಿ : ನವೀನ್ ಬೈರಾ ಪುರ

ಆಲೂರು. ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ತನ್ನ ಎರಡು ವರ್ಷದ ಗಂಡು ಮಗುವಿನ ಸಾವಿಗೆ ಕಾರಣವಾಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ಪಟ್ಟಣದ ಹೌಸಿಂಗ್‌ ಬೋರ್ಡ್‌ನಲ್ಲಿ ನಡೆದಿದೆ.

ಮೃತರನ್ನು 27 ವರ್ಷದ ಅನುಶ್ರೀ ಹಾಗೂ ಅವರ ಎರಡು ವರ್ಷದ ಪುತ್ರ ಆರ್ಯನ್ ಎಂದು ಗುರುತಿಸಲಾಗಿದೆ.

ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಅನುಶ್ರೀ ಹಾಗೂ ಶ್ರೀನಿವಾಸ್‌ ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು.

ದಂಪತಿ ತಮ್ಮ ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಎರಡು ತಿಂಗಳ ಹಿಂದೆ ಆಲೂರಿಗೆ ಬಂದು ಹೌಸಿಂಗ್ ಬೋರ್ಡ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಶ್ರೀನಿವಾಸ್‌ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇಂದು ಮನೆಯಲ್ಲಿ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ಅನುಶ್ರೀ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ತಿಳಿದು ಪೊಲೀಸರ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಆಲೂರು ಅಭಿವೃದ್ಧಿಗೆ ಮೀಸಲಿಟ್ಟ ಜಾಗ ಕಬಳಿಕೆ

Bimba Prakashana

ಕು. ಮಾನಸಿ ತಾಲೂಕಿಗೆ ಪ್ರಥಮ

Bimba Prakashana

ಬೇಲೂರು ಜಾತ್ರೆಯ ಸಿದ್ಧತೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More