Blog

ಆಲೂರುನಲ್ಲಿ ರೈಲು ನಿಲುಗಡೆಗೆ ಸತತವಾಗಿ ಹೇಮಂತ್ ಪ್ರಯತ್ನ

ಆಲೂರು ರೈಲ್ವೆ ನಿಲ್ದಾಣ ರೈಲು ನಿಲುಗಡೆಗೆ ಶಾಶ್ವತವಾಗಿ ಆದೇಶ ನೀಡಬೇಕು ಎಂದು ಇತ್ತೀಚಿಗೆ ಜುಲೈ 20ರಂದು ದೆಹಲಿಯ ರೈಲ್ವೆ ಬೋರ್ಡ್ ಗೆ ಮನವಿ ಸಲ್ಲಿಸಿ ಜೊತೆಗೆ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣನವರನ್ನ ಭೇಟಿಯಾಗಿ  ಹೇಮಂತ್ ಕುಮಾರ್ ಅಧ್ಯಕ್ಷರು ರಾಧಮ್ಮ ಜನಸ್ಪಂದನ ವತಿಯಿಂದ ಮನವಿ ಸಲ್ಲಿಸಿ ಬಂದಿದ್ದರು.

ಈ ಮನವಿ ಪರಿಣಾಮಕಾರಿಯಾಗಿ ದೆಹಲಿಯ ರೈಲ್ವೆ ಬೋರ್ಡ್ ನಿಂದ ಮೈಸೂರು ರೈಲ್ವೆ ವಿಭಾಗಕ್ಕೆ ಆಲೂರು ನಿಲ್ದಾಣದ ಬಗ್ಗೆ ಸಮರ್ಪಕವಾಗಿ ಮಾಹಿತಿಯನ್ನು ಸಲ್ಲಿಸಿ ಎಂದು ವರದಿಗಾಗಿ ಆದೇಶಿಸಲಾಗಿದೆ..

ಈ ಆದೇಶವನ್ನು ಗಮನಿಸಿದ ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ಅವರು ಮೈಸೂರಿನಲ್ಲಿರುವ ಮುದಿತ್ ಮಿತ್ತಲ್
ಮಂಡಲ ರೈಲ್ವೆ ವ್ಯವಸ್ಥಾಪಕರನ್ನು ಭೇಟಿಯಾಗಿ ಆಲೂರು ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಇಲಾಖೆಯಿಂದ ಸರಿಯಾದ ರೀತಿಯಲ್ಲಿ ಅಂಕಿ ಅಂಶಗಳನ್ನು ಕೊಡದೆ ಸರಿಯಾದ ಆದಾಯದ ಹಣ ಸಂಗ್ರಹವಾಗಿರುವ ಅಂಕಿ ಅಂಶವನ್ನು ಪರಿಗಣಿಸದೆ ದೆಹಲಿ ರೈಲ್ವೆ ಬೋರ್ಡ್ ಗೆ ತಪ್ಪು ಮಾಹಿತಿ ಕೊಟ್ಟಿರದ ಬಗ್ಗೆ ಮಾಹಿತಿ ಹಕ್ಕಿನಿಂದ ಪಡೆದಿರುವ ದಾಖಲಾತಿಗಳ ಸಮೇತ ಲಗತಿಸಿ ಮನವಿ ಪತ್ರವನ್ನು ನೀಡಿ ಸಮರ್ಪಕವಾಗಿ ವಿವರಿಸಿದ್ದಾರೆ.

ಹೇಮಂತ್ ಕುಮಾರ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಂತಹ ಹಾಸನ ಜಿಲ್ಲೆಯ ಕೆಲವು ರೈಲ್ವೆ ನಿಲ್ದಾಣಗಳ ಟಿಕೆಟ್ ಹಣದ ಸಂಗ್ರಹದ ಅಂಕಿ ಅಂಶಗಳನ್ನು ತಮಗೆ ಒದಗಿಸಿ ಕೊಡುತ್ತಿದ್ದೇವೆ.


1) ಹಾಸನ ಜಿಲ್ಲೆಯ ಬಾಗೇಶಪುರ ರೈಲ್ವೆ ನಿಲ್ದಾಣ ಟಿಕೆಟ್ ಹಣದ ತಿಂಗಳಾನುಸಾರ ಮಾಹಿತಿ ಮತ್ತು ಒಟ್ಟು ಪ್ರತಿನಿತ್ಯ ನಿಲುಗಡೆಯಾಗುವ ರೈಲುಗಳ ಸಂಖ್ಯೆ
ಬಾಗೆಶಪುರ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ 6 ರೈಲುಗಳು ನಿಲುಗಡೆಯಾಗುತ್ತಿವೆ ಮೇ ತಿಂಗಳು 2026ನೇ ವರ್ಷದಲ್ಲಿ ರೈಲ್ವೆ ಟಿಕೆಟ್ ನಿಂದ ಸಂಗ್ರಹವಾದ ಮೊತ್ತ 20880 ರೂಪಾಯಿ ಹಾಗೂ ಬಾಗೇಶಪುರ ರೈಲ್ವೆ ನಿಲ್ದಾಣದಲ್ಲಿ 4 ಎಕ್ಸ್ಪ್ರೆಸ್ ರೈಲುಗಳು ಮತ್ತು ಎರಡು ಪ್ಯಾಸೆಂಜರ್ ರೈಲುಗಳು ನಿಲಗಡೆಯಾಗುತ್ತವೆ
2) ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರೈಲ್ವೆ ನಿಲ್ದಾಣದ ಟಿಕೆಟ್ ಹಣದ ತಿಂಗಳಾನುಸಾರ ಮಾಹಿತಿ ಮತ್ತು ಒಟ್ಟು ಪ್ರತಿನಿತ್ಯ ನೀಲುಗಡೆಯಾಗುವ ರೈಲುಗಳ ಸಂಖ್ಯೆ
ಮಾವಿನಕೆರೆ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಒಟ್ಟು 8 ರೈಲುಗಳು ನಿಲುಗಡೆಯಾಗುತ್ತಿವೆ ಈ 8 ರೈಲುಗಳಿಂದ ಏಪ್ರಿಲ್ ತಿಂಗಳು 2026 ವರ್ಷದಲ್ಲಿ 33065 ಹಣ ಸಂಗ್ರಹವಾಗಿರುತ್ತದೆ
3) ಆಲೂರು ತಾಲೂಕು ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ರೈಲು ನಿಲುಗಡೆ ಆದೇಶ 2024 ಫೆಬ್ರವರಿ ತಿಂಗಳಲ್ಲಿ ಬಂದಾಗ ನಂತರ 2024 ಅಕ್ಟೋಬರ್ ತಿಂಗಳ ರೈಲ್ವೆ ಟಿಕೆಟ್ ನಿಂದ ಸಂಗ್ರಹವಾದ ಮೊತ್ತ ರೂ.22,800 ರೂಪಾಯಿ ಮತ್ತು 2024 ನವೆಂಬರ್ ತಿಂಗಳಲ್ಲಿ ಸಂಗ್ರಹವಾದ ಮೊತ್ತ 18,200 ರೂಪಾಯಿ 2024 ಡಿಸೆಂಬರ್ 4 ನೇ ತಾರೀಖಿನಿಂದ ರೈಲು ನಿಲುಗಡೆ ಆದೇಶವನ್ನು ರದ್ದುಪಡಿಸಲಾಯಿತು
ಆಲೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಒಂದು ರೈಲು ನಿಲುಗಡೆಯಾಗುತ್ತಿದ್ದು ಕಾರವಾರ ಎಕ್ಸ್ಪ್ರೆಸ್ ಆಗಿರುತ್ತದೆ
ಮೇಲೆ ನಮೂದಿಸಿರುವ ಪ್ರತಿಯೊಂದು ಅಂಕಿ ಅಂಶಗಳನ್ನು ರೈಲ್ವೆ ಇಲಾಖೆಯಿಂದ ಮಾಹಿತಿ ಹಕ್ಕಿನ ಮುಖಾಂತರ ಪಡೆಯಲಾಗಿದೆ.


ಹಾಸನ ಜಿಲ್ಲೆಗೆ ಆಲೂರು ತಾಲೂಕು ಪ್ರಮುಖ ನಗರವಾಗಿದ್ದು ಈ ನಗರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಸಿಬ್ಬಂದಿಗಳು ಮತ್ತು ರೈಲ್ವೆ ಸ್ಟೇಷನ್ ಮಾಸ್ಟರ್ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಯಾಣಿಕರಿಗೆ ಅನುಕೂಲವಾಗಲು ಪ್ಲ್ಯಾಟ್ ಫಾರ್ಮ್ ವ್ಯವಸ್ಥೆಯು ಇದ್ದು ಪ್ರತಿನಿತ್ಯ ಈ ನಿಲ್ದಾಣದ ಮಾರ್ಗವಾಗಿ ನಾಲ್ಕು ರೈಲುಗಳು ಸಂಚರಿಸುತ್ತಿದ್ದರು ಕೂಡ ರೈಲುಗಳ ನಿಲುಗಡೆ ಮಾತ್ರ ಸಾಧ್ಯವಾಗುತ್ತಿಲ್ಲ ತಮ್ಮ ಗಮನಕ್ಕೆ ಈಗಾಗಲೇ ತಂದಿರುವ ಬಾಗೇಶಪುರ ಮತ್ತು ಮಾವಿನಕೆರೆ ಈ ರೈಲು ನಿಲ್ದಾಣಗಳು ಹೋಬಳಿ  ಮಟ್ಟದಲ್ಲಿರುತ್ತವೆ ಈ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ರೈಲ್ವೆ ಇಲಾಖೆಯಿಂದ ಆಲೂರು ತಾಲೂಕಿಗೆ ಆಗಿರುವ ತಾರತಮ್ಯವನ್ನು ತಾವುಗಳು ಸರಿಪಡಿಸಿ ಆಲೂರು ರೈಲ್ವೆ ನಿಲ್ದಾಣಕ್ಕೆ ಶಾಶ್ವತವಾಗಿ ರೈಲು ನಿಲುಗಡೆ ಭಾಗ್ಯವನ್ನು ಒದಗಿಸಿಕೊಡಬೇಕೆಂದು ಮೈಸೂರಿನ ಡಿವಿಜನಲ್ ರೈಲ್ವೆ ಮ್ಯಾನೇಜರ್ ಬಳಿ ಮಾಹಿತಿ ದಾಖಲಾತಿಗಳೊಂದಿಗೆ ವಿವರಿಸಿದ್ದಾರೆ..

ಈ ಬಗ್ಗೆ ಪ್ರತಿಕ್ರಿಯಿಸಿದ ಹೇಮಂತ್ ಕುಮಾರ್ ಅವರು ಮೈಸೂರಿನ ರೈಲ್ವೆ ಇಲಾಖೆಯಿಂದ ಆಲೂರು ರೈಲ್ವೆ ನಿಲ್ದಾಣದ ಆದಾಯದ ಟಿಕೆಟ್ ಸಂಗ್ರಹದ ಬಗ್ಗೆ ಸಮರ್ಪಕವಾಗಿ ಸಕರಾತ್ಮಕವಾಗಿ ದೆಹಲಿಯ ರೈಲ್ವೆ ಬೋರ್ಡ್ ಗೆ ವರದಿಯನ್ನು ಕಳಿಸಿಕೊಟ್ಟರೆ ಕೆಲವು ತಿಂಗಳು ಒಳಗೆ ಅಧಿಕೃತವಾಗಿ ಆಲೂರು ರೈಲ್ವೆ ನಿಲ್ದಾಣಕ್ಕೆ ಶಾಶ್ವತ ನಿಲುಗಡೆ ಆದೇಶ ಬರುತ್ತದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ…

Related posts

ಗಣಪತಿ ಸಮಿತಿ ಸಭೆ

Bimba Prakashana

ಉಚಿತ ಕಣ್ಣಿನ ತಪಾಸಣೆ

Bimba Prakashana

ತಾಯಿ ಮಗು ಆತ್ಮಹತ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More