ವರದಿ : ನಾಗೇಶ್ ಎಂ ಎಚ್. ಮಾಗೇರಿ
ಸಕಲೇಶಪುರ: ಕರ್ನಾಟಕ ಕಾರ್ಯನಿರತ – ಪತ್ರಕರ್ತರ ಸಂಘದ ಅಧ್ಯಕ್ಷರಾದ ಬೈರಪ್ಪ ಸಕಲೇಶ್ವರ್ – ಸಂಘದ ಅಭಿವೃದ್ಧಿಗಾಗಿ ದಿನಾಂಕ: 19/09/2026 ರಂದು ನಡೆದ ಪ್ರಜಾ ಸೇವೆ ಸಭೆಯಲ್ಲಿ ಹಾಸನ – ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಿಗೆ ಮನವಿ ನೀಡಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಯೂನಿಯನ್ ವರ್ಕಿಂಗ್ ಜರ್ನಲಿಸ್ಟ್ (ರಿ) ಅಧ್ಯಕ್ಷರಾದ ಕಾಂತ ರಾಜು ಎಂಬವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಮ್ಮದು ಎಂದು ಹೇಳಿ ಇನ್ನೊಂದು ಸಂಘಕ್ಕೆ ಸೌಲಭ್ಯ ನೀಡಬಾರದು ಸಭೆಯಲ್ಲಿ ಹೇಳಿದ್ದಾರೆನ್ನಲಾಗಿದೆ.
ಆದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಬೆಂಗಳೂರಿನಲ್ಲಿ ನೊoದಣಿಯಾಗಿದ್ದು reg ನಂ = BRb 2/SoR/92/2021-22 ಅಧಿಕೃತವಾಗಿರುತ್ತದೆ.
ಕಾರ್ಯನಿರತ ಪತ್ರಕರ್ತರ ಸಂಘದ ಅಭಿವೃದ್ಧಿ ಬಗ್ಗೆ – ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ
ಕರ್ನಾಟಕ ಯೂನಿಯನ್ ವರ್ಕಿಂಗ್ ಜರ್ನಲಿಸ್ಟ್ (ರಿ)
ಅಧ್ಯಕ್ಷರಾದ ಕಾಂತರಾಜ್ ಮೇಲೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಿ ಆರ್ ದಾಖಲಾಗಿದೆ.
ಮಾಧ್ಯಮಗಳ ಎರಡು ಸಂಘಗಳ ನೋಂದಣಿ ಬಗ್ಗೆ ಈಗಾಗಲೇ ಹಲವಾರು ಬಾರಿ ಕಾನೂನು ಸಮರ ಆಗುತ್ತಿದ್ದು,ಪತ್ರಕರ್ತರಿಗೆ ಸವಲತ್ತು ನೀಡದಂತೆ ಪತ್ರಕರ್ತರೇ ಅಡ್ಡಗಾಲು ಹಾಕುತ್ತಿದ್ದಾರೆ.
ಸರಕಾರ ನೀಡುವ ಸವಲತ್ತು ತಮ್ಮ ಸಂಘದ ಮೂಲಕ ಸಂಘದ ಸದಸ್ಯರಿಗೆ ಬಿಟ್ಟು ಬೇರೆ ಪತ್ರಕರ್ತರಿಗೆ ದೊರಕದಂತೆ ತಡೆ ಒಡ್ದುತ್ತಿದ್ದಾರೆ.
ಮುಂದೊಂದು ದಿನ ಸವಲತ್ತುಗಳ ವಿಚಾರದಲ್ಲಿ ಸರಕಾರಕ್ಕೆ ಕೂಡಾ ಪತ್ರಕರ್ತರಿಗೆ ಸವಲತ್ತು ನೀಡುವುದು ಹೇಗೆ ಎಂಬ ಬಗ್ಗೆ ಸವಾಲು ಆಗಬಹುದು.
ರಾಜಧಾನಿಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ರಾಜಕಾರಣಿಗಳ ಜೊತೆಯಲ್ಲಿರುವ ಪತ್ರಕರ್ತರ ಓಲೈಕೆ ಮೇರೆಗೆ ಅವರ ಜೊತೆಗೆ ಇರುವವರಿಗೆ ಮಾತ್ರ ಸರಕಾರ ಸವಲತ್ತು ನೀಡ ಹೊರಟರೆ, ಪ್ರಾದೇಶಿಕ ಹಾಗೂ ಗ್ರಾಮೀಣ ಪತ್ರಕರ್ತರ ಬದುಕು ಹೇಗೆ ಎಂಬ ಬಗ್ಗೆ ಹಲವಾರು ಗೊಂದಲಗಳು ಮೂಡ ತೊಡಗಿದೆ.
