Blog

ಯಲಹಂಕ ಗ್ರಾಮ ಪಂಚಾಯತ್ ನಲ್ಲಿ ಗ್ಯಾರಂಟಿ ಯೋಜನೆ ಶಿಬಿರ

🔴ಯಲಹಂಕ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆ ಶಿಬಿರ:ಇಲ್ಲ ಸಲ್ಲದ ಆರೋಪಗಳಿಗೆ ಕಿವಿಗೊಡಬೇಡಿ. ದೇಶಾಣಿ ಆನಂದ್

ಬೇಲೂರು: ಗ್ರಾಮೀಣ ಪ್ರದೇಶದ ಜನರು ಪಂಚ ಗ್ಯಾರಂಟಿಗಳನ್ನು ಸದಪಯೋಗ ಪಡಿಸಿಕೊಳ್ಳಿ ಎಂದು  ದೇಶಾಣಿ ಆನಂದ್ ಹೇಳಿದರು.
ಬೇಲೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಯಲಹಂಕ ಗ್ರಾಮ ಪಂಚಾಯ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಶಿಬಿರ ಆಯೋಜಿಸಲಾಗಿತ್ತು.
   ಕಾರ್ಯಕ್ರಮದಲ್ಲಿ ಯಲಹಂಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತ ಮುತ್ತಲ ಹಳ್ಳಿಗಳಿಂದ ಬಂದಂತಹ ಸಾರ್ವಜನಿಕರು ಗ್ಯಾರಂಟಿ ಯೋಜನೆಗಳ  ಹಲವಾರು ಸವಲತ್ತುಗಳ ಬಗ್ಗೆ ಆದಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಅನ್ನ ಭಾಗ್ಯ,ಗೃಹಲಕ್ಷ್ಮಿ,ಯುವನಿಧಿ,ಶಕ್ತಿಯೋಜನೆ,ಗೃಹಜ್ಯೋತಿ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಪಡೆದುಕೊಂಡರು.ತಾಲ್ಲೂಕಿನ ವೀರದೇವನ ಹಳ್ಳಿಗೆ ಬರುವಂತಹ ಬಸ್ ಬೆಳಿಗ್ಗೆ 8.30ಕ್ಕೆ ಬರುತ್ತದೆ.ಆದರೆ ಸಂಜೆ  4ಗಂಟೆ ಸಮಯದಲ್ಲೂ ಬರುವಂತೆ ಮಹಿಳೆಯರು ಕೇಳಿದಾಗ ಅದ್ಯಕ್ಷ ದೇಶಾಣಿ ಆನಂದ್ ಪ್ರತಿಕ್ರಿಯೆ ನೀಡಿ,ಮಲ್ಲಾಪುರ,ದೇವಿಹಳ್ಳಿ,ಬೋವಿ ಕಾಲೋನಿ,ಚಿಲನಾಯ್ಕನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಬಸ್ ವ್ಯವಸ್ಥೆಯನ್ನು ಗ್ರಾಮೀಣ ಭಾಗದ ಜನರಿಗೆ ಸಮರ್ಪಕವಾಗಿ ನಿರ್ವಹಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ದೇಶಾಣಿ ಆನಂದ್, ಕಾಂಗ್ರೇಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಮಾಡಿರುವುದು ಬಡವರು ಕೂಲಿ ಕಾರ್ಮಿಕರ ಹಾಗೂ ನಿರುದ್ಯೂಗಿಗಳ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಸಲುವಾಗಿ,ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಬಸ್ ಕೊರತೆ ಇದೆ ಆದರೆ ಈಗಾಗಲೆ ಹೆಚ್ಚುವರಿಯಾಗಿ 5 ಬಸ್ ಗಳನ್ನು ಬಿಡಲಾಗಿದ್ದು,ಸರ್ಕಾರ 4700 ಸಾರಿಗೆ ಬಸ್ ಗಳನ್ನು ಖರೀದಿಸಲು ಮುಂದಾಗಿದೆ.ಬೇಲೂರು ತಾಲ್ಲೂಕಿನಾದ್ಯಂತ ‌ಬಸ್ ಸಂಚಾರಕ್ಕೆ ಒಂದಿಷ್ಟು ಅಡಚಣೆಯಾಗಿರುವುದರಿಂದ ಬೇಲೂರಿಗೆ ಬಸ್ ಗಳನ್ನು ನೀಡುವಂತೆ ಅದ್ಯಕ್ಷರಿಗೆ ಮನವಿಮಾಡಿದ್ದೇನೆ.ಸದ್ಯದಲ್ಲೆ ಗ್ರಾಮೀಣ ಭಾಗದಲ್ಲಿ ಸಾರಿಗೆ ಅದಾಲತ್ ಮಾಡುವ ಮೂಲಕ ಸಮಸ್ಯೆ ವ್ಯವಸ್ಥೆ ಬಗೆಹರಿಸಲಾಗುತ್ತದೆ ಎಂದರು.
  ಯುವನಿಧಿ ಯೋಜನೆಯಲ್ಲಿ ಹಣ ಬಿಡುಗಡೆಯಾಗಿದ್ದು ತಾಲ್ಲೂಕಿನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಈಗಾಗಲೆ ಅನುಕೂಲವಾಗಿದೆ.ವಿದ್ಯಾರ್ಥಿಗಳು ಪದವಿ ಮುಗಿದ 180 ದಿನಗಳ ನಂತರ ಯುವನಿಧಿಗೆ ತಮ್ಮ ಫೋನ್ ಮೂಲಕವೇ ಅರ್ಜಿ ಹಾಕಬಹುದು ಎಂದರು.
  ಕೆಲ ಭಾಗದಲ್ಲಿ ಗೃಹಜ್ಯೋತಿ ಯೋಜನೆಯಿಂದ ಕರೆಂಟ್ ವ್ಯತ್ಯಯ ಕಂಡುಬಂದಿದ್ದು,ಹವಾಮಾನದ ಕೊರತೆಯಿಂದಾಗಿ ಮಳೆ ಇಲ್ಲದೆ ಬರಗಾಲದ ಹಿನ್ನೆಲೆ ಕರೆಂಟ್ ಸಮಸ್ಯೆ ಇದೆ.ಹಿಂಗಾರು ಮಳೆ ಆರಂಭವಾದರೆ ವಿದ್ಯುತ್ ಸಮಸ್ಯೆ ನಿವಾರಿಸಬಹುದು ಎಂದರು.
  ಗ್ರಾಮೀಣ ಪ್ರದೇಶದ ಕುಂದುಕೊರತೆಗಳ ಬಗೆಹರಿಸುವ ನಿಟ್ಟಿನಲ್ಲಿ  ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ 6 ಸದಸ್ಯರನ್ನೊಳಗೊಂಡಂತೆ (2ಮಹಿಳೆ)ಗ್ಯಾರಂಟಿ ಸಮಿತಿ ರಚನೆ ಮಾಡಲಾಗುತ್ತದೆ.ಯಾವುದೆ ಸಮಸ್ಯೆಗಳನ್ನು ಹೊತ್ತು ಯಾರು ಅಧಿಕಾರಿಗಳ ಬಳಿ ಹೋಗುವಂತಿಲ್ಲ ಅಧಿಕಾರಿಗಳೆ ನಿಮ್ಮ ಬಳಿ ಬಂದು ನಿಮ್ಮ ಸಮಸ್ಯೆ ಬಗೆಹರಿಸುವ  ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಿದೆ.ಪಂಚ ಗ್ಯಾರಂಟಿಗಳು ಈಗಾಗಲೆ ಸಮರ್ಪಕವಾಗಿ ತಲುಪುತ್ತಿವೆ.ಕೆಲ ಮಾದ್ಯಮಗಳು ಮಾಡುತ್ತಿರುವ ಇಲ್ಲಸಲ್ಲದ ಆರೋಪಗಳಿಗೆ ಕಿವಿಗೊಡಬೇಡಿ,ಗೃಹಲಕ್ಷ್ಮಿ ಹಣ  ಎಲ್ಲಾ ಫಲಾನುಭವಿಗಳ ಖಾತೆಗೆ ಬಂದಿದೆ.2-3 ತಿಂಗಳಿಂದ ಹಣ ಬಂದಿಲ್ಲದೆ ಇದ್ದವರು ದೃತಿಗೆಡಬೇಡಿ ನಿಮ್ಮ ಹಣ ಖಾತೆಗೆ ಬರುತ್ತದೆ,ಯೋಜನೆಯ ಲಾಭವನ್ನು ಕೆಲ ಪ್ರಭಾವಿಗಳ ಮತ್ತು ಶ್ರೀಮಂತರು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸುತ್ತಿದ್ದು ಒಂದಿಷ್ಟು ಹಣ ನೀಡುವಲ್ಲಿ ವಿಳಂಬವಾಗಿದೆ ಖಂಡಿತ ನಿಮ್ಮ ಹಣ ಬರುತ್ತದೆ ಎಂದು ಭರವಸೆ ನೀಡುವ ಮೂಲಕ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನೀಡಿ ನಿಮ್ಮನ್ನು ಆರ್ಥಿಕವಾಗಿ ಸಂಕಷ್ಟದಿಂದ ಬಿಡುಗಡೆಗೊಳಿಸುತ್ತಿದೆ ಸರ್ಕಾರಕ್ಕೆ ನೀವು ಅಭಿನಂದನೆ ಸಲ್ಲಿಸಬೇಕು ಎಂದಾಗ ಗ್ರಾಮೀಣ ಪ್ರದೇಶದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಜೈ ಎಂದು ಘೋಷಣೆ ಕೂಗಿದರು.
ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು,ಕೆಂದ್ರ ಸರ್ಕಾರ ಕೆಲ ಆಹಾರ ಪದಾರ್ಥಗಳ ಮೇಲೆ ಬೆಲೆ ಏರಿಕೆ ಮಾಡಿ ಗ್ರಾಮೀಣ ಭಾಗದ ಜನರನ್ನು ಸಂಕಷ್ಟಕ್ಕೆ ಸಿಲುಕಿರುವ ಕಾರಣಕ್ಕೆ ನಮ್ಮ ಸರ್ಕಾರ ಆರ್ಥಿಕ ದೈನಂದಿನ ನೆರವಿಗಾಗಿ ಪ್ರತಿ ತಿಂಗಳು 2000 ರೂ ಹಣ ನೀಡುತ್ತಿದೆ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೆ ಸಮಸ್ಯೆಗಳು ಇದ್ದರೆ ನಮ್ಮ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ಮೂಲಕ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
  ಕಾರ್ಯಕ್ರಮದಲ್ಲಿ,ಕಾಂಗ್ರೆಸ್‌ ಯುವ ಘಟಕದ ತಾಲ್ಲೂಕು ಅದ್ಯಕ್ಷ ಶರತ್,ಸದಸ್ಯರಾದ ನಿಶ್ಚಲ್,ಮನ್ಸೂರ್, ಅಶೋಕ್,ಪ್ರತಾಪ್,ಧರ್ಮಭೋವಿ,ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಗುರುಪ್ರಸಾದ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೇಷ್ಮ,ಪಿಡಿಓ ಅವಿನಾಶ್,ಕಾರ್ಯದರ್ಶಿ ರಮೇಶ್,ಗ್ರಂಥಪಾಲಕಿ ಆಶಾ,ಸೇರಿದಂತೆ ಮತ್ತಿತರರು ಇದ್ದರು.

Related posts

ಶಾಲೆಯಲ್ಲಿ ಅವಿತಿದ್ದ ಹಾವು

Bimba Prakashana

ಆಲೂರು ವೈದ್ಯಕೀಯ ವಿಚಾರ – ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿ

Bimba Prakashana

ಡಾ ಅಕ್ಷತ್ ಗೆ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More