Blog

ಸಕಲೇಶಪುರದಲ್ಲಿ ಅಂತರ್ ರಾಜ್ಯ ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಬಂಧನ ಮಾಡಿದ ಪೊಲೀಸರು



ಸಕಲೇಶಪುರದಲ್ಲಿ ಮಹಿಳೆಯರ ಚಿನ್ನ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.


ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಅಂತರ್ ರಾಜ್ಯ ಕಳ್ಳರನ್ನು ಕಳ್ಳರನ್ನು ಬೈಕ್ ನಲ್ಲಿ ಕಂಡ ಪೊಲೀಸರು ಬೆನ್ನಟ್ಟಿದ್ದಾರೆ.

ಹೇಮಾವತಿ ಸೇತುವೆಯಿಂದ ಹಳೆ ಬಸ್ ನಿಲ್ದಾಣದವರೆಗೆ ಕಳ್ಳರನ್ನು ಪೊಲೀಸರು ಬೆನ್ನಟ್ಟಿದಾಗ ಕಳ್ಳರು ಬೈಕನ್ನು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದರು.

ಈ ಸಂದರ್ಭದಲ್ಲಿ ಓರ್ವ ಆರೋಪಿ ಗಾಯಗೊಂಡು ರಸ್ತೆಗೆ ಬಿದ್ದಾಗ  ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು

ಈ ಪರಿಸ್ಥಿತಿಯನ್ನು ಬಳಸಿಕೊಂಡ ಮತ್ತೊಬ್ಬ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.

ಪರಾರಿಯಾಗಿದ್ದ ಇನ್ನೊಬ್ಬ ಕಳ್ಳ ಪೊಲೀಸರ ಕಣ್ ತಪ್ಪಿಸಿಕೊಂಡು ಬಟ್ಟೆ ಬದಲಾಯಿಸಿ ಕೊಂಡು ಸಾರ್ವಜನಿಕರ ನಡುವೆ ನಿಂತು ಪೊಲೀಸರನ್ನೇ ಎಮಾರಿಸಲು ಯತ್ನಿಸಿದ.

ಕೊನೆಗೂ ಪಟ್ಟು ಬಿಡದ ಪೊಲೀಸರು  ಸಾರ್ವಜನಿಕರ ಮಧ್ಯೆಯೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಸಕಲೇಶಪುರದಲ್ಲಿ ಕಳ್ಳತನ ಹೆಚ್ಚುತ್ತಿರುವ ನಿಟ್ಟಿನಲ್ಲಿ ಪೊಲೀಸರು ನಾಕಾ ಬಂಧಿ ನಡೆಸಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳು ಮಂಗಳವಾರ ಮುಂಜಾನೆ ಸಕಲೇಶಪುರ ಪಟ್ಟಣ ಪ್ರವೇಶಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ನಾಕಾಬಂದಿ ನಡೆಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Related posts

ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಭಾಗವಹಿಸಲು ಇನ್ನು ಹತ್ತೇ ದಿನ ಅವಕಾಶ

Bimba Prakashana

ಬೇಲೂರು ಸರಕಾರಿ ಆಸ್ಪತ್ರೆಯಲ್ಲಿ ಏನಿದು ಅವಸ್ಥೆ

Bimba Prakashana

ಮಾಗೇರಿಯ ಸಂದೇಶ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More