Blog

ಬೇಲೂರು ಸರಕಾರಿ ಆಸ್ಪತ್ರೆಯಲ್ಲಿ ಏನಿದು ಅವಸ್ಥೆ

🔴ಲಕ್ಷಾಂತರ ಸಂಬಳ ತೆಗೆದುಕೊಳ್ಳುತ್ತಿದ್ದರು  ರೋಗಿಗಳ ಊಟವನ್ನೇ ಕಿತ್ತು ತಿನ್ನುತ್ತಿರುವ ಆಸ್ಪತ್ರೆ ಕೆಲ ಸಿಬ್ಬಂದಿ?

🔴ಬೇಲೂರು ಸರ್ಕಾರಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕಣ್ಮುಚ್ಚಿ ಕುಳಿತುಕೊಂಡ ಆಡಳಿತ ವೈದ್ಯಾಧಿಕಾರಿಗಳು

🔴ಸ್ಕ್ಯಾನಿಂಗ್ ಮಷೀನ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ  ಮತ್ತೊಂದು ಅಕ್ರಮ ಬಯಲು


1.
ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ನೀಡಲಾಗುವ ಊಟವೇ ಕೆಲ ಸಿಬ್ಬಂದಿಗಳ ಹೊಟ್ಟೆ ತುಂಬಿಸುವ ಸಾಧನವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ರೋಗಿಗಳಿಗಾಗಿ ಮೀಸಲಾದ ಆಹಾರವನ್ನು ಕೆಲ ಸಿಬ್ಬಂದಿಗಳು ಕಿತ್ತು ತಿನ್ನುತ್ತಿದ್ದಾರೆ ಜೊತೆಗೆ ಅ ಬಿಲ್ ನು ರೋಗಿಗಳ ಹೆಸರಿಗೆ ಕಟ್ಟಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.



3.
ಬೆಳಗಿನ ಉಪಹಾರದಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿ ಊಟದವರೆಗೆ ರೋಗಿಗಳಿಗೆ ತಲುಪಬೇಕಾದ ಆಹಾರದಲ್ಲಿ ಕಡಿತವಾಗುತ್ತಿದೆ  ಅದರಲ್ಲೂ ಮಧ್ಯಾಹ್ನದ ಆಹಾರ ಕೊಟ್ಟಾಗಂತೂ  ಕೆಲವು ಆಸ್ಪತ್ರೆ ಸಿಬ್ಬಂದಿಗಳಿಗೆ ಕೊಡಲೇಬೇಕಾದ ಅನಿವಾರ್ಯತೆ ಇದೆ ರೋಗಿಗಳ ಆಹಾರವನ್ನು ಕಿತ್ತು ತಿನ್ನುತ್ತಿದ್ದಾರೆ  ಯಾಕೆ ಇವರಿಗೆ ಸರ್ಕಾರ ಸಂಬಳ ಕೊಡುತ್ತಿಲ್ಲವೇ ಅಷ್ಟು ಬಡತನ ಕಾಡುತ್ತಿದೆಯೇ

4.
ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಆಹಾರ ವಿತರಣೆಯ ಸಮಯದಲ್ಲೇ ರೋಗಿಗಳ ಪಾಲಿನ ಊಟವನ್ನು ತಮ್ಮ ಬಳಕೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

5.
ಇನ್ನೊಂದೆಡೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆಸ್ಪತ್ರೆಯ ಒಳಗಡೆ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಅವರಿಗೆ ಮಾಹಿತಿ ಇಲ್ಲವೇ, ಅಥವಾ ತಿಳಿದಿದ್ದರೂ ಮೌನವಾಗಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

6.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರು ಮತ್ತು ಗ್ರಾಮೀಣ ಭಾಗದ ಜನರೇ ಹೆಚ್ಚು ಚಿಕಿತ್ಸೆ ಪಡೆಯುತ್ತಾರೆ. ಅಂತಹವರ ಪಾಲಿನ ಆಹಾರವನ್ನೇ ದುರುಪಯೋಗಪಡಿಸಿಕೊಳ್ಳುವುದು ಮಾನವೀಯತೆಗೆ ವಿರುದ್ಧವಾದ ಕೃತ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

7.
ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣ ಆಸ್ಪತ್ರೆಯಲ್ಲಿ ಆಹಾರ ವಿತರಣೆ ವ್ಯವಸ್ಥೆಯ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

8.
ರೋಗಿಗಳ ಆರೋಗ್ಯ ಮತ್ತು ಹಕ್ಕುಗಳನ್ನು ಕಾಪಾಡಬೇಕಾದ ಆಸ್ಪತ್ರೆಯಲ್ಲೇ ಇಂತಹ ಆರೋಪಗಳು ಕೇಳಿಬರುತ್ತಿರುವುದು ದುರಂತದ ಸಂಗತಿ. ಬಡ ರೋಗಿಗಳ ಪಾಲಿನ ಒಂದು ತುತ್ತು ಅನ್ನವನ್ನೂ ಯಾರೂ ಕಸಿದುಕೊಳ್ಳದಂತೆ ಆಸ್ಪತ್ರೆ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.

Related posts

ಬೇಲೂರು ಇಬ್ಬಿಡು ಗ್ರಾಮದಲ್ಲಿ ಜಾತ್ರಾ ಮಹೋತ್ಸವ

Bimba Prakashana

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

ಬೇಲೂರು ಶಾಸಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More