ಆಲೂರು : ತಾಲ್ಲೂಕಿನ ಕೊಡಿಗೀಹಳ್ಳಿ ಗ್ರಾಮದ ಕೆರೆ ಬಳಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಮಣ್ಣು ಹೊಡೆಯುವವರ ಮಧ್ಯೆ ಗಲಾಟೆಯಾಗಿ ಮಣ್ಣು ಹೊಡೆಯುವ ಟಿಪ್ಪರಿನಿಂದ ಮಣ್ಣು ಕೊಡಿಸುತ್ತಿದ್ದ ಮಾಲೀಕರ ಕಾರಿಗೆ ಗ್ರಾಮದ ಯುವಕರು ಗುದ್ದಿಸಿ ವಿಕೃತಿ ಮೆರೆದಿರುವ ಘಟನೆ ತಡರಾತ್ರಿ ಸಂಭವಿಸಿದೆ
ಕಳೆದ ಒಂದುವಾರದಿಂದ ಹಿಟಾಚಿ ಹಾಗೂ ಟಿಪ್ಪರ್ ಯಂತ್ರಗಳನ್ನು ಬಳಸಿಕೊಂಡು ರಾತ್ರೋ ರಾತ್ರಿ ಕದ್ದು ಮಣ್ಣು ಸಾಗಾಣಿಕೆ ಮಾಡುತ್ತಿದ್ದ ಕಂಡ ಗ್ರಾಮದ ಯುವಕರ ಗುಂಪೊಂದು ಮಣ್ಣು ಸಾಗಾಣಿಕೆ ಮಾಡುತ್ತಿದ್ದ ಪ್ರಭಾವಿ ವ್ಯಕ್ತಿಗಳ ಮೇಲೆ ಮತ್ತು ಹಿಟಾಚಿ ಹಾಗೂ ಟಿಪ್ಪರ್ ಮಾಲೀಕರ ಕತ್ತಿ ಮತ್ತು ರಾಡ್ ಗಳನ್ನು ಬಳಸಿ ಹಲ್ಲೆ ನಡೆಸಲು ಪ್ರಯತ್ನಿಸಿ ಕೂದಲೆಳೆ ಹಂತರದಲ್ಲಿ ಪಾರಾಗಿದ್ದಾರೆ.
ಅಲ್ಲದೆ ರೊಚ್ಚಿಗೆದ್ದ ಗ್ರಾಮದ ಯುವಕರು ಮಣ್ಣು ಸಾಗಾಟ ಮಾಡುತ್ತಿದ್ದ ಟಿಪ್ಪರನ್ನೇ ಬಳಸಿಕೊಂಡು ಹಿಟಾಚಿ ಮತ್ತು ಟಿಪ್ಪರ್ ಮಾಲೀಕನ ಕಾರಿಗೆ ಗುದ್ದಿ ಕಾರು ನಜ್ಜು ಗುಜ್ಜಾಗಿದ್ದು ಯಾವುದೇ ಪ್ರಾಣಪಾಯವಾಗಿಲ್ಲವೆಂದು ತಿಳಿದು ಬಂದಿದೆ
ಆಲೂರು : ತಾಲೂಕಿನಲ್ಲಿ ರಾತ್ರೋ ರಾತ್ರಿ ಎಗ್ಗಿಲ್ಲದೇ ಮಣ್ಣು ಸಾಗಾಣಿಕೆ ಸಾಗಿದ್ದು ಈಗ ಕೆರೆಯ ಮಣ್ಣನ್ನೇ (ಸಾಯಿಲ್ ಮಾಫಿಯ ) ಲೂಟಿ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ.
ತಾಲೂಕಿನ ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೊಡಗಿಹಳ್ಳಿ ಗ್ರಾಮದ ಕೆರೆಯ ಮಣ್ಣಿನ ಮೇಲೆ ಮಣ್ಣುಗಳ್ಳರ ದೃಷ್ಟಿ ಬಿದ್ದಿದ್ದು, ಕೆರೆಯಲ್ಲಿನ ಮಣ್ಣನ್ನು ಜೆಸಿಬಿ ಸಹಾಯದಿಂದ ಟಿಪ್ಪರ್‌ಗಳನ್ನು ಬಳಸಿಕೊಂಡು ಹಗಲು- ರಾತ್ರಿಯೆನ್ನದೇ ಮಣ್ಣನ್ನು ಬಗೆದು ಸಾಗಿಸಲಾಗುತ್ತಿದೆ. ಮನೆ ಕಟ್ಟುವವರು, ಕಾರ್ಖಾನೆ, ರಸ್ತೆ ಇತ್ಯಾದಿ ನಿರ್ಮಾಣ ಕಾಮಗಾರಿಗೆ ಮಣ್ಣು(ಗೊರಚು) ಅಗತ್ಯವಿದ್ದು, ಇದನ್ನೇ ಲೂಟಿಕೋರರು ಬಂಡವಾಳ ಮಾಡಿಕೊಂಡಿದ್ದಾರೆ.
ಹಿಟಾಚಿ ಟಿಪ್ಪರ್ ಯಂತ್ರಗಳ ಮೂಲಕ ಅಕ್ರಮವಾಗಿ ಮಣ್ಣು ಸಾಗಾಣಿಕೆ ದಿನನಿತ್ಯ ನಿರಂತರವಾಗಿ ನಡೆಯುತ್ತಿದ್ದು, ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 1000 ಟನ್ ಗಳಷ್ಟು ಸಾವಿರ ಲೋಡ್ ಮಣ್ಣು ದೋಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಇದಕ್ಕೆ ಕಡಿವಾಣ ಹಾಕಬೇಕಾಗಿದ್ದ ಅಧಿಕಾರಿಗಳು ಮಾಫಿಯಾದವರ ಜತೆ ಶಾಮೀಲಾಗಿರುವ ಆರೋಪಕೂಡ ಕೇಳಿಬಂದಿದೆ.
ಕೆರೆಯ ಫಲವತ್ತಾದ ಮಣ್ಣು ದಂಧೆಕೋರರ ಪಾಲಾಗುತ್ತಿದೆ ಹಾಗೂ ಸ್ಥಳೀಯ ಪ್ರಭಾವಿಗಳ ಕುಮ್ಮಕ್ಕಿನಿಂದ ಮಣ್ಣು ಮಾಫಿಯ ನಡೆಯುತ್ತಿದೆ ಎನ್ನಲಾಗಿದೆ ಇದರಿಂದ ಅಪಾರ ಸಂಖ್ಯೆಯ ಮಣ್ಣು ಕಣ್ಮರೆಯಾಗುತ್ತಿವೆ. ಆದಾಗ್ಯೂ ಸಂಬಂಧಪಟ್ಟ ತಹಸೀಲ್ದಾರ್ ಹಾಗಾಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೊಲೀಸರಿಗೂ ಇಲಾಖೆಯ ಅಧಿಕಾರಿಗಳು ಕೂಡ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಇನ್ನೂ ಮಣ್ಣಿಗೆ ಭಾರಿ ಬೇಡಿಕೆ
ಕಾರ್ಖಾನೆಗಳು, ನಿವೇಶನಗಳು, ರಸ್ತೆಗಳ ನಿರ್ಮಾಣಕ್ಕೆ ಈ ಮಣ್ಣಿನ ಬೇಡಿಕೆ ಇದ್ದು, ಅದರಲ್ಲೂ ಕೈಗಾರಿಕಾ ಪ್ರದೇಶದಲ್ಲಿ ಮಣ್ಣಿಗೆ ಭಾರಿ ಬೇಡಿಕೆ ಇದೆ. ಒಂದು ಲೋಡ್‌ಗೆ 5 ರಿಂದ 8 ಸಾವಿರ ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ದಿನನಿತ್ಯ ಕೆರೆಯಲ್ಲಿ ಹಿಟಾಚಿ ಜೆಸಿಬಿಗಳಿಂದ ಮಣ್ಣು ತೆಗೆಸಿ ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಿಸುತ್ತಿದ್ದು, ಈ ಅಕ್ರಮ ವಹಿವಾಟಿನಿಂದ ಮಧ್ಯವರ್ತಿಗಳು ಲಕ್ಷಾಂತರ ಸಂಪಾದಿಸುತ್ತಿದ್ದಾರೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮಣ್ಣು ದಂದೆ
ನಿಯಮದ ಪ್ರಕಾರ ಕೃಷಿಗೆ ಯೋಗ್ಯವಲ್ಲದ ಗುಡ್ಡ ಪ್ರದೇಶ ಹಾಗೂ ಸರ್ಕಾರಿ ಜಮೀನಿನಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು, ಇಲಾಖೆ ನಿಗದಿಪಡಿಸುವ ರಾಯಲ್ಟಿ ಪಾವತಿಸಿ ಗಣಿಗಾರಿಕೆ ನಡೆಸಬೇಕು. ಆದರೆ, ಮಣ್ಣು ದಂಧೆ ಕೋರರು ಪ್ರಭಾವಿಗಳು ಹಾಗೂ ಅಧಿಕಾರಿಗಳ ಬೆಂಬಲದಿಂದ ಕೆರೆಯಲ್ಲಿ ಹತ್ತಾರು ಅಡಿ ಆಳದವರೆಗೂ ಮಣ್ಣು ಗಣಿಗಾರಿಕೆ ನಡೆಸುತ್ತಾ ಸರ್ಕಾರಕ್ಕೆ ಬರಬೇಕಾದ ರಾಜ ಧನಕ್ಕೂ ಕತ್ತರಿ ಹಾಕುತ್ತಿದ್ದಾರೆ.
ಯಾವುದೇ ಅನುಮತಿಯನ್ನು ಪಡೆಯದೆ ಕಾನೂನು ಬಾಹಿರವಾಗಿ ಕೆರೆಯ ಮಣ್ಣನ್ನು ಹಗಲು ರಾತ್ರಿ ಎನ್ನದೆ ಲಕ್ಷಾಂತರ ರು ಬೆಲೆ ಬಾಳುವ ಮಣ್ಣನ್ನು ತೋಚುತ್ತಿದ್ದಾರೆ, ತಾಲ್ಲೂಕಿನಲ್ಲಿ ಇಷ್ಟೊಂದು ಆಕ್ರಮ ನಡೆಯುತ್ತಿದ್ದರು ತಹಶೀಲ್ದಾರ್ ರವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಹೆಡೆ ಮಾಡಿಕೊಟ್ಟಿದೆ ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಅಗ್ರಹ
ಒಟ್ಟಿನಲ್ಲಿ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಸದ್ದು ಮಾಡುತ್ತಿದ್ದು, ಪ್ರತಿದಿನ ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣನ್ನು ಅಗೆದು ಸಾಗಿಸುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ತಾಲೂಕು ಹಾಗೂ ಜಿಲ್ಲಾಡಳಿತದ ಮೇಲಿದ್ದು, ಪರಿಸರ ನಾಶ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಅಧಿಕಾರಿಗಳೇ ಶಾಮಿಲ್ ಆಗಿರುವ ಆರೋಪ
ಈ ವಿಷಯಕ್ಕೆ ಸಂಬಂದಿಸಿದಂತೆ ಕಳೆದ ಒಂದು ತಿಂಗಳುಗಳಿಂದ ರಾತ್ರಿ ವೇಳೆ ಪ್ರತಿನಿತ್ಯ ಮಣ್ಣು ಸಾಗಾಣಿಕೆ ನಡೆಯುತ್ತಿದ್ದರು ಯಾವೊಬ್ಬ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಬೇಸರದ ಸಂಗತಿ ಅಥವಾ ಗೊತ್ತಿದ್ದರು ಕೂಡ ಮಣ್ಣು ಮಾಫಿಯದವರ ಕಡೆ ಸೇರಿ ಶಾಮಿಲ್ ಆಗಿರಬುಹುದೇ ಎಂಬ ಅನುಮಾನವು ಕೂಡ ಸ್ಥಳೀಯರಲ್ಲಿ ಮೂಡಿದೆ
ಆಲೂರು ಪಟ್ಟಣದ ಮಾರ್ಗದಲ್ಲೇ ಈ ಚಟುವಟಿಕೆಗಳು ನಡೆಯುತ್ತಿದ್ದರು ಕೂಡ ಕಡಿವಾಣ ಹಾಕುವಲ್ಲಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬುದೇ ಯಕ್ಷ ಪ್ರಶ್ನೆ
ಇದಲ್ಲದೆ ಕಳೆದ ಬಾರಿಯು ಕೂಡ ಆಲೂರು ಬಿಕ್ಕೊಡು ಮಾರ್ಗದ ವಾಟೆಹೊಳೆ ನಾಲೆಗೆ ಸೇರಿದ ಸರ್ಕಾರಿ ಜಾಗದಲ್ಲಿಯೂ ಕೂಡ ಮಣ್ಣು ಮಾಪಿಯ ನಡೆದಿತ್ತು ಹಲವಾರು ಬಾರಿ ಗ್ರಾಮ ಪಂಚಾಯಿತಿ ಪಿ ಡಿ ಓ ಗೆ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂಬುದೇ ವಿಪರ್ಯಾಸ
ಕಣ್ಣು ಮುಚ್ಚಿ ಕುಳಿತ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ
ಈ ಮದ್ಯದಲ್ಲಿ ಒಂದೆರಡು ದಿನ ತಹಸೀಲ್ದಾರ್ ರವರು ಎರಡು ಮೂರು ಟಿಪ್ಪರ್ ಗಳನ್ನು ಮೇಲ್ನೋಟಕ್ಕೆ ಹಿಡಿದು ದಂಡ ಹಾಕಿದ್ದು ಬಿಟ್ಟರೆ ಸಂಪೂರ್ಣ ತಡೆಗಟ್ಟುವಲ್ಲಿ ಮೌನವಹಿಸಿದ್ದಾರೆ ಅಗತ್ಯಕಿಂತ ಹೆಚ್ಚಿನ ಲೋಡ್ ಮಣ್ಣು ಸಾಗಟ ಮಾಡಿ ಕೊಡಗೀಹಳ್ಳಿ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಇನ್ನೂ ಮಣ್ಣು ಹೊಡೆಯುವ ಮಾಲೀಕರು ಮಣ್ಣು ಹೊಡೆಯುವುದಕ್ಕೆ ಗ್ರಾಮದ ದೇವಸ್ಥಾನಕ್ಕೆ ಹಣ ಕೊಟ್ಟು ಮಣ್ಣು ಮಾರಟವಾಗುತ್ತಿತ್ತು ಎಂಬ ವಂದತಿಗಳು ಕೂಡ ಹರಿದಾಡುತ್ತಿದ್ದು ಕೆಲ ಗ್ರಾಮಸ್ಥರು ಮತ್ತು ರಾಜಕೀಯ ಮುಖಂಡರುಗಳು ಹಾಗೂ ಪ್ರಭಾವಿಗಳು ಈ ಅಕ್ರಮ ಮಣ್ಣು ಸಾಗಾಟದಲ್ಲಿ ಶಾಮಿಲ್ ಆಗಿದ್ದಾರೆ ಎಂಬ ಅನುಮಾನಗಳಿವೆ..
ಗಾಂಜಾ ಅಮಲಿನಲ್ಲಿ ಈ ಕೃತ್ಯ ನಡೆಸುವುದಾಗಿ ಮಾಹಿತಿ
ಇದೆಲ್ಲರ ನಡುವೆ ರಾತ್ರಿ ನಡೆದ ಜಗಳದಲ್ಲಿ ಕೊಡಗಿಹಳ್ಳಿ ಗ್ರಾಮದ ಕೆಲ ಯುವಕರ ಗುಂಪದು ಗಾಂಜಾ ಆಮಲಿನಲ್ಲಿ ಇದ್ದ ಯುವಕರ ಗುಂಪು ರಾತ್ರಿ ನಡೆದ ಘಟನೆಗೆ ಕಾರಣವಾಗಿದ್ದು ಇತ್ತೀಚಿಗೆ ಗಾಂಜಾ ಅಮಲಿನಲ್ಲಿ ಯುವಕರ ಗುಂಪಿನ ನಡುವೆ ಹೊಡೆದಾಟ ಸರ್ವೇ ಸಾಮಾನ್ಯವಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು ಪೊಲೀಸರು ಕೂಡ ಇಂತಹ ಯುವಕರನ್ನು ಹಿಡಿದು ಶಿಕ್ಷೆಸುವಲ್ಲಿ ವಿಫಲರಾಗಿದ್ದಾರೆ..
ಪೊಲೀಸ್ ಇಲಾಖೆ ದಂಧೆಯಲ್ಲಿ ಶಾಮೀಲ್ ಆಗಿರುವ ಶಂಕೆ
ನೆನ್ನೆ ರಾತ್ರಿ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಅವರೇ ಹಿಟಾಚಿ ಟಿಪ್ಪರ್ ಗಳನ್ನು ಬೇರೆಡೆಗೆ ಸ್ಥಳನಂತರಿಸಲು ಅನುಕೂಲ ಮಾಡಿಕೊತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು ಜಾಕಂ ಗೊಂಡಿರುವ ಕಾರು ಮಾತ್ರ ಸ್ಥಳದಲ್ಲೇ ಇದ್ದು ಹಿಟಾಚಿ ಹಾಗೂ ಟಿಪ್ಪರ್ ಗಳು ಒಂದು ಕೂಡ ಸಿಗದಂತೆ ಆಗಿದ್ದು ಒಂದಾದರು ಕೂಡ ಹಿಡಿದಿಲ್ಲವೆಂಬುದು ಸ್ಥಳೀಯರ ಅನುಮಾನಕ್ಕೆ ಸಾಕ್ಷಿಯಾಗಿದೆ..
