Blog

ಬೇಲೂರು ಇಬ್ಬಿಡು ಗ್ರಾಮದಲ್ಲಿ ಜಾತ್ರಾ ಮಹೋತ್ಸವ



ಬೇಲೂರು: ಇಬ್ಬೀಡು ಗ್ರಾಮಕ್ಕೆ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಮಹತ್ವ ಪೂರ್ಣವಾದ ಇತಿಹಾಸವಿದೆ.ಇಬ್ಬೀಡು  ಹಲಸಿನ ಹಣ್ಣು ಬೆಳೆಯುವುದರಲ್ಲಿ ಹೆಚ್ಚು ಜನಪ್ರಿಯ.
ಅಂದಿನ ಮೈಸೂರು ರಾಜ್ಯದ ಜಯಚಾಮರಾಜೇಂದ್ರ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಹಲಸಿನ ಹಣ್ಣುಗಳನ್ನು ಅರಮನೆಗೆ ತರಿಸಿಕೊಳ್ಳುತ್ತಿದ್ದರು ಎಂಬ ಮಾತು ಇದೆ.ಇಂತಹ ಇತಿಹಾಸವಿರುವ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದಲ್ಲಿ ಶ್ರೀ ಮಗೆಮಾರಮ್ಮ ದೇವಿಯವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.


   ವಸಂತಮಾಸ ಯುಗಾದಿ ನಂತರದಲ್ಲಿ ನಡೆಯುವ ಈ ಜಾತ್ರೆಯು ಏಪ್ರಿಲ್ 02 ಗುರುವಾರದಂದು ಪ್ರತಿ ಮನೆಯಲ್ಲೂ ಮಾರಿಹಬ್ಬ ಆಚರಿಸುವ ಮೂಲಕ 4 ದಿನಗಳ ಕಾಲ ಜಾತ್ರೋತ್ಸವ ಅದ್ದೂರಿಯಾಗಿ ನೆರವೇರುತ್ತದೆ.


  03 ನೇ ತಾರೀಖು ಶುಕ್ರವಾರದಂದು ಬಾಯಿಬೀಗ ಮಾಡಲಾಗುತ್ತದೆ.ಅದೇ ದಿನ ಸಂಜೆ 8 ಗಂಟೆಗೆ ಮಗೆಮಾರಮ್ಮ ದೇವಿಗೆ ವಿವಿಧ ಬಗೆಯ ಬಣ್ಣ ಬಣ್ಣದ ಸೀರೆಗಳನ್ನು ಉಡಿಸಿ ಹೂವಿನ ಹಾರ ಹಾಗೂ ಆಭರಣಗಳೊಂದಿಗೆ ಅಲಂಕರಿಸಿ,ಗ್ರಾಮದ ಹೆಣ್ಣು ಮಕ್ಕಳೆಲ್ಲ ಆರತಿ ಮಾಡಿ ತವರು ಮನೆಯಾದ ತೆಂಡೇಕೆರೆ ಗ್ರಾಮಕ್ಕೆ  ಕಳಿಸಿಕೊಡಲಾಗುತ್ತದೆ.ನಂತರ ಗ್ರಾಮಸ್ಥರೆಲ್ಲ ದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.


  ಮಾರನೆ ದಿನ  ಶನಿವಾರ ಸಂಜೆ 4 ಗಂಟೆಗೆ ಅಮ್ಮನವರ ಸಿಡಿ ಉತ್ಸವ ನಡೆಯುತ್ತದೆ.ಜಾತ್ರಾ ಮಹೋತ್ಸಕ್ಕೆ ಸುತ್ತಮುತ್ತಲ ಗ್ರಾಮದಿಂದ ಬಂದಂತಹ ಸಾವಿರಾರು ಭಕ್ತರು ಭಕ್ತಿ ಭಾವದಿಂದ ಅಮ್ಮನವರ ಕೃಪೆಗೆ ಪಾತ್ರರಾದರು.


     ಸಂಜೆ 7 ಗಂಟೆ ನಂತರ ಮಗೆ ಮಾರಮ್ಮ ದೇವಿಯ ದೇವಾಲಯದಿಂದ ಹೊರಟ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೋಂದಿಗೆ ಸಾವಿರಾರು ಭಕ್ತರು ಪಟಾಕಿ ಸಿಡಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಳೆದ ಒಂದು ವಾರದಿಂದ ಗ್ರಾಮದ ಬೀದಿ ಬೀದಿ ಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು,ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಯುವಕರು ಯುವತಿಯರು ದೇವಿಯ ಆರಾಧಿಸುವ ಮೂಲಕ ಕುಣಿದು ಕುಪ್ಪಳಿಸಿದರು.ಮನರಂಜನೆಗಾಗಿಭಾನುವಾರ ಸಂಜೆ ಆರ್ಕೇಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
  ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಯುವಕರಾದ ತಾರೇಶ್.ಮೋಹನ್ ಕುಮಾರ್.ವಕೀಲರಾದ ಶ್ರೀನಿಧಿ,ಕ್ಷಡಾಕ್ಷರಿ,ಕುಮಾರ್, ಯೋಗೇಶ್.ಗಿರೀಶ್.ರಾಜೇಶ್.ಬಸವರಾಜು.ಚನ್ನಕೇಶವ ಸೇರಿದಂತೆ  ಗ್ರಾಮದ ಹಿರಿಯರು ಭಾಗಿಯಾಗಿ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

Related posts

ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬದ ಆಚರಣೆ

Bimba Prakashana

ಕರವೇಯಿಂದ ಬಾಂಗ್ಲಾ ವಲಸಿಗರನ್ನು ತೊಲಗಿಸಿ ಕಾರ್ಯಕ್ರಮ

Bimba Prakashana

ಪ್ರವಾಸಿಗರ ಬ್ಯುಸಿ ಸ್ಪಾಟ್ ಆದ ಸಕಲೇಶಪುರ ದೋಣಿಗಾಲ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More