Blog

ಪ್ರವಾಸಿಗರ ಬ್ಯುಸಿ ಸ್ಪಾಟ್ ಆದ ಸಕಲೇಶಪುರ ದೋಣಿಗಾಲ್



ಸಕಲೇಶಪುರದ ದೋಣಿಗಾಲ್ ವೃತ್ತದ ಹೆತ್ತೂರು ರಸ್ತೆ ಇತ್ತೀಚಿಗೆ ರಜಾ ದಿನಗಳಲ್ಲಿ ಪ್ರವಾಸಿಗರ ಬ್ಯುಸಿ ಸ್ಪಾಟ್ ಆಗಿದೆ.

ಪ್ರತಿ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಮಂಜರಾಬಾದ್ ಕೋಟೆ ವೀಕ್ಷಣೆಗೆ ಬಂದಂತಹ ಪ್ರವಾಸಿಗರು ವಾಹನಗಳನ್ನು ಹೆತ್ತೂರು ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಕಾಬಿಟ್ಟಿ ನಿಲುಗಡೆ ಮಾಡುವುದರಿಂದ ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುವ ಶಾಲಾ ವಾಹನಗಳು,ಆಂಬುಲೆನ್ಸ್ ಗಳು,ಹಾಗೂ ಸ್ಥಳೀಯ ಸಾರ್ವಜನಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಉಳಿಯುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಸಾವಿರಾರು ಮಂದಿ ಈ ಸಮಸ್ಯೆ ಅನುಭವಿಸಿ ಕೂಡಾ ಆಗಿದೆ

ಹಾಗಾಗಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಧೆ ಮಾಡಿ ಹೆತ್ತೂರು ರಸ್ಥೆಯಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸುವಂತೆ ಆಗ್ರಹಿಸಿ ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾ. ಅಧ್ಯಕ್ಷರಾದ  ಮಂಜುದೇವ್ ಹುಲ್ಲಹಳ್ಳಿಯವರು ತಾ ಉಪವಿಭಾಗ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕೌಡಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್,ಅಂಕಿತ್ ಹುಲ್ಲಹಳ್ಳಿ,ಗುರುಪ್ರಸಾದ್,ಶಶಿ ಕ್ಯಾನಹಳ್ಳಿ,ಪರಮೇಶ್ ಕೌಡಳ್ಳಿ ಉಪಸ್ಥಿತರಿದ್ದರು.

Related posts

ನಿಮಗಾಗಿ ವಸತಿ ಲೇ ಔಟ್

Bimba Prakashana

ಬೆಟ್ಟದ ಭೈರವೇಶ್ವರದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿ

Bimba Prakashana

ಆನೆಯಿಂದ ಮೃತ್ಯು ಭಯ – ಸಕಲೇಶಪುರದಲ್ಲಿ ಜಾಗ ಖರೀದಿಗೆ ಹಿಂದೇಟು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More