Blog

ಸಕಲೇಶಪುರ ಪುರಸಭೆ ವ್ಯಾಪ್ತಿಯ ವಾರ್ಡಲ್ಲಿ ಕಸದ ಸಮಸ್ಯೆ



ಸಕಲೇಶಪುರ : ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ ಎಂಟು ಮತ್ತು ಒಂಬತ್ತನೇ ವಾರ್ಡಿನಲ್ಲಿ ಸುಮಾರು ಎರಡು ತಿಂಗಳುಗಳಿಂದ   ಪುರಸಭೆಯ ಕಸದ ವಾಹನ ಬಾರದೆ 8 ಮತ್ತು 9ನೇ ವಾರ್ಡಿನಲ್ಲಿ ಎಲ್ಲಿಂದರಲ್ಲಿ ಅಲ್ಲಿ ಕಸದ ಗುಡ್ಡೆಗಳು  ರಾರಾಜಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ

ಕಂದಾಯ ವಸೂಲಿ ಮಾಡುವ ಸಂದರ್ಭದಲ್ಲಿ ಕಸದ ಬಪ್ತನ್ನು   ಸಹ ಹಾಕಿ ಕಸ ತೆಗೆಯುವುದಕ್ಕೂ ಹಣ ಪಡೆಯುವ ಪುರಸಭೆಯವರು  ಇತ್ತ ಗಮನ ಹರಿಸಬೇಕು.

ಪುರಸಭೆಯ ಪ್ರತಿ ವಾರ್ಡ್ ಗಳನ್ನು ಸ್ವಚ್ಛವಾಗಿಡುವುದು ಮುಖ್ಯ ಧಿಕಾರಿಗಳ ಆದ್ಯ ಕರ್ತವ್ಯವಾಗಿದೆ  ಆದರೆ ಮುಖ್ಯ ಅಧಿಕಾರಿಗಳು ಗಮನ ಹರಿಸದೆ ಏಜೆಂಟ್ದಾರರಿಗೆ ಬಿಲ್ ಪಾವತಿಸುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ .

ದಿನನಿತ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪುರಸಭೆ ಕಸ ತೆಗೆಯದೆ ಇರುವುದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಹಲವಾರು ರೋಗ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆಗಳು ಉಂಟಾಗಬಹುದು ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ .

Related posts

ಯಡಕೆರೆ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಹೆತ್ತೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

Bimba Prakashana

ಆಲೂರುನಲ್ಲಿ ಮಳೆ ಗಾಳಿಯಿಂದ ಆತಂಕ

Bimba Prakashana

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More