Blog

ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆ – ತಹಸೀಲ್ದಾರ್ ಡಾ ಪ್ರತಿಭಾ ನೇತೃತ್ವದಲ್ಲಿ ದಾಳಿ

🔴ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆ: ತಹಶೀಲ್ದಾರ್ ಡಾ. ಪ್ರತಿಭಾ ಆರ್ ನೇತೃತ್ವದಲ್ಲಿ ದಾಳಿ ಮತ್ತು ಕಾನೂನು ಕ್ರಮ*

🔴ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆ: ತಹಶೀಲ್ದಾರ್  ಡಾ. ಪ್ರತಿಭಾ ಆರ್ ಖಡಕ್ ಎಚ್ಚರಿಕೆ*


ಸಾಗರ ತಾಲೂಕಿನಲ್ಲಿ ಯಾವುದೇ ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆಯನ್ನು ನಡೆಯಬಿಡುವುದಿಲ್ಲ, ಅಕ್ರಮ ಸಾಗಾಣಿಕೆದಾರರ ವಿರುದ್ಧ ಖಡಕ್ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಎಚ್ಚರಿಸಿದ್ದಾರೆ.

ಸಾಗರ ತಾಲೂಕಿನ ತಾಳಗುಪ್ಪ  ಹೋಬಳಿಯ ಹಿರೇ ನಲ್ಲೂರು ಗ್ರಾಮ ಪಂಚಾಯಿತಿಯ ಹಿರೇನೆಲ್ಲೂರು ಗ್ರಾಮದಲ್ಲಿ ಸರ್ವೆ ನಂಬರ್ 211 ರಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ತೆಗೆದು ಲಾರಿಗಳಲ್ಲಿ  ಸಾಗಿಸುತ್ತಿದ್ದಾಗ ಪತ್ತೆ ಹಚ್ಚಿ ಕಾನೂನು ಕ್ರಮವನ್ನು ಕೈಗೊಂಡಿರುತ್ತಾರೆ.

ನೂತನವಾಗಿ ಬಂದಿರುವ ತಹಸಿಲ್ದಾರ್ ಡಾ. ಪ್ರತಿಭಾ ಆರ್ ರವರು ಇಡೀ ಸಾಗರ ತಾಲೂಕಿನಲ್ಲಿ ಸಂಚರಿಸುತ್ತಿದ್ದು ಯಾವುದೇ ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆಯನ್ನು ತಡೆದು ಖಡಕ್ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ. ಈ ಮೂಲಕ ಅಕ್ರಮ ಸಾಗಾಣಿಕೆದಾರರಿಗೆ ದಿಗಿಲು ಹುಟ್ಟಿಸಿರುವುದಂತೂ ಸತ್ಯ.

*”ನನ್ನ ಸಾಗರ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಮರಳು ಸಾಗಾಣಿಕೆ ಜಂಬಿಟ್ಟಿಗೆ ಸಾಗಾಣಿಕೆಯನ್ನು ನಾನು ನಡೆಯ ಕೊಡುವುದಿಲ್ಲ. ಅಕ್ರಮ ಸಾಗಾಣಿಕೆ ದಾರರ ವಿರುದ್ಧ  ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಎಚ್ಚರಿಕೆ ನೀಡಿರುತ್ತಾರೆ.*

ಜಂಬಿಟ್ಟಿಗೆ ತೆಗೆಯುತ್ತಿದ್ದ ಸರ್ವೇ ನಂಬರ್ 2 11ಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅವರು ಸೂಕ್ತ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ಖಚಿತ ಮಾಹಿತಿಯ ಮೇಲೆ ಕೂಡಲೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ರವರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಹಿಡಿದಿರುತ್ತಾರೆ ಎಫ್ಐಆರ್ ಫೈಲ್ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ PDO ರಾಘವೇಂದ್ರ, ಬೀಟ್ ಪೊಲೀಸ್ ಮಂಜುನಾಥ್, ಗ್ರಾಮ ಸಹಾಯಕ ಲೋಕೇಶ್,  ಗ್ರಾಮ ಆಡಳಿತ ಅಧಿಕಾರಿ ಭೀಮಣ್ಣ  ರೆವೆನ್ಯೂ ಇನ್ಸ್ಪೆಕ್ಟರ್ ವಿನಾಯಕ ಉಪಸ್ಥಿತರಿರುತ್ತಾರೆ.

Related posts

1 ರೂ ಗೆ ಬಿಸಿ ಬಿಸಿ ಟೀ

Bimba Prakashana

ತಾಲೂಕು ಹೌಸಿಂಗ್ ನೋಡೆಲ್ ಅಧಿಕಾರಿ ಪೊಲೀಸ್ ವಶಕ್ಕೆ?

Bimba Prakashana

ಕೆ ಹೊಸಕೋಟೆ ಲಯನ್ಸ್ ಕ್ಲಬ್ ನಿಂದ ಅಂಗನವಾಡಿ ಮಕ್ಕಳಿಗೆ ಕೊಡುಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More