Blog

ಉಪ್ಪಿನಂಗಡಿ ಗಡಿಯಾರ ಬಳಿ ಅಪಘಾತ – ಯುವಕ ಮೃತ್ಯು

ನಾಗೇಶ್ ಎಂ ಎಚ್ ಮಾಗೇರಿ.

🔴ಮಂಗಳೂರು  ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗಡಿಯಾರದಲ್ಲಿ ಭೀಕರ ಅಪಘಾತ.

🔴ಸಕಲೇಶಪುರ ತಾಲೂಕು ತಂಬಲಗೆರೆ ಗ್ರಾಮದ ಯುವಕ ಲಕ್ಷ್ಮಿಕಾಂತ್  ಮೃತ್ಯು – ಮೂವರಿಗೆ ಗಂಭೀರ ಗಾಯ



ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಮತ್ತು ಉಪ್ಪಿನಂಗಡಿ ಮಧ್ಯದ ಗಡಿಯಾರ ಎಂಬಲ್ಲಿ ಇಂದು ಮಧ್ಯಾಹ್ನ ಭೀಕರ ಕಾರು ಅಪಘಾತ ಸಂಭವಿಸಿದೆ ಮಂಗಳೂರಿನಿಂದ ಹಾಸನದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ತಂಬಲಗೆರೆ ಗ್ರಾಮದ ಯುವಕ ಲಕ್ಷ್ಮಿ ಕಾಂತ್ ಮೃತ ಪಟ್ಟು 3 ಮಂದಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು ಡಿಕ್ಕಿಅದ ರಭಸಕ್ಕೆ ದೊಡ್ಡ ಮಟ್ಟದ ಸದ್ದು ಕೇಳಿ ಬಂದಿದೆ ಎನ್ನಲಾಗಿದೆ
ಅಪಘಾತದ ತೀವ್ರತೆಗೆ (ಕಾರು K12 N 6668.) ಸಂಪೂರ್ಣವಾಗಿ ಜಖಮ್ ಆಗಿದೆ ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಹಾಸನ ಮೂಲದ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು.

ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಗಾಯಾಳುಗಳ ಪೈಕಿ ಕಾರು ಚಾಲಕ ಮೃತ್ಯು ಆಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ
ಸದ್ದು ಕೇಳಿ ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಸ್ಥಳಕ್ಕೆ ತಕ್ಷಣ ಇದ್ದವರನ್ನು ರಕ್ಷಣೆಗೆ ಮುಂದಾಗಿದ್ದಾರೆ.

Related posts

ರಸ್ತೆ ಗುಂಡಿ ಮುಚ್ಚಿದ ಸ್ಥಳೀಯ ಗ್ರಾಮಸ್ಥರು

Bimba Prakashana

ಕುಡಿಯುವ ನೀರಿನ ಸಮಸ್ಯೆ

Bimba Prakashana

ಬೇಕಾಗಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More