ಬಿಜೆಪಿ ಪ್ರಭಾವಿ ಮುಖಂಡರಿಂದ ಮುರುಳಿ ಮೋಹನ್ ಹುಟ್ಟುಹಬ್ಬ ಆಚರಣೆ.
ಆಲೂರು: ಈ ಬಾರಿ ಕಾಂಗ್ರೆಸ್ ಮುಖಂಡ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಆಕಾಂಕ್ಷಿ ಮುರಳಿ ಮೋಹನ್ ಅವರ ಹುಟ್ಟುಹಬ್ಬವನ್ನು ಬಿಜೆಪಿ ಪ್ರಭಾವಿ ಮುಖಂಡರಾದ ರುದ್ರೇಗೌಡ ಹಾಗೂ ಅವರ ಸಹಚರರಿಂದ ಆಚರಣೆ ಮಾಡಿದ್ದು ಕ್ಷೇತ್ರದಲ್ಲಿ ಬಾರಿ ಸದ್ದು ಮಾಡಿದೆ.
ಹುಟ್ಟು ಹಬ್ಬದ ಪ್ರಯುಕ್ತ ಬ್ಯಾನೇರ್ ಮೂಲಕ ಶುಭಾಶಯ ಕೋರಿದ್ದಲ್ಲದೆ ಇಂದು ಮುರುಳಿ ಮೋಹನ್ ಅವರನ್ನು ಖುದ್ದು ಅಹ್ವಾನಿಸಿ ಕೇಕ್ ಕತ್ತರಿಸಿ ಸ್ಥಳೀಯ ಮುಖಂಡರಿಗೆ ಊಟದ ವ್ಯವಸ್ಥೆ ಮಾಡಿ ವಿಭಿನ್ನವಾಗಿ ಆಚರಣೆ ಮಾಡಿರುವುದು ಒಂದು ಕಡೆ ಸಂತಸದ ವಿಚಾರ,ಇನ್ನೊಂದೆಡೆ ಮುಂದಿನ ದಿನಗಳಲ್ಲಿ ಮುರುಳಿ ಮೋಹನ್ ಅವರ ಜೊತೆ ಕೈ ಜೋಡಿಸಿದ್ದಲ್ಲಿ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು,ಆದರೆ ಶಕ್ತಿ ತುಂಬುವಂತಹ ವಿಚಾರ ಅವರ ವಯಕ್ತಿಕವಾದದ್ದು ದಿನಗಳು ಹತ್ತಿರದಲ್ಲಿದ್ದು ಕಾದು ನೋಡಬೇಕಾಗಿದೆ.
ಈ ಸಂಧರ್ಭದಲ್ಲಿ ಸ್ಥಳೀಯ ಕಾಂಗ್ರೇಸ್ ಮುಖಂಡರು,ಯುವ ಮುಖಂಡರು,ಮಾನವ ಬಂಧುತ್ವ ವೇದಿಕೆ,ಮಹಿಳಾ ಮುಖಂಡರು ಉಪಸ್ಥಿತರಿದ್ದರು.
previous post
next post
