Blog

ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕ್ರಮ ಕೈ ಗೊಳ್ಳಿ – ದೇಶಾಣಿ ಆನಂದ್

ಗ್ಯಾರಂಟಿ ಯೋಜನೆಗಳು ಪಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು: ಅದ್ಯಕ್ಷ ದೇಶಾಣಿ ಆನಂದ್ ಅಧಿಕಾರಿಗಳಿಗೆ ಖಡಕ್ ಸೂಚನೆ.

ಬೇಲೂರು:
ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ  ತಲೆದಂಡ ಗ್ಯಾರಂಟಿ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ದೇಶಾಣಿ ಆನಂದ್ ರವರು ಆಹಾರ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.


         ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಪಂಚ ಗ್ಯಾರಂಟಿಗಳು ಅರ್ಹ ಫಲಾನುಭವಗಳಿಗೆ ಸಮರ್ಪಕವಾಗಿ ತಲುಪಬೇಕು.ಆಹಾರ ಇಲಾಖೆಗಳಲ್ಲಿ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿವೆ.ಸರ್ಕಾರಿ ಗೋಡೌನ್ ಮ್ಯಾನೇಜರ್ ರಾಜಯ್ಯ ಎಂಬುವರು ಅಸಹಾಯಕತೆಯಿಂದ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿದಾರರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ.ಕೂಡಲೆ ಅಂತಹವರ ಮೇಲೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಂತಹ ವ್ಯವಸ್ಥೆ ಸರಿಪಡಿಸದಿದ್ದರೆ ಅಧಿಕಾರಿಗಳ ತಲೆದಂಡ ಗ್ಯಾರಂಟಿ ಎಂದು ಎಚ್ಚರಿಸಿದರು.
  ನ್ಯಾಯಬೆಲೆ ಅಂಗಡಿಗಳಲ್ಲಿ ಮಾಲೀಕರು ಕೇವಲ ಎರಡು ಮೂರು ದಿನ ದಾಸ್ತಾನು ನೀಡುವ ಪ್ರವೃತ್ತಿ ರೂಡಿಸಿಕೊಂಡಿದ್ದಾರೆ.ಇದು ಕೊನೆಗೊಳ್ಳಬೇಕು ಪ್ರತಿ ತಿಂಗಳು 01ನೇ ತಾರೀಖಿನಿಂದ 30ನೇ ತಾರೀಖಿನ ಅಂತ್ಯದ ವರೆಗೆ ಅಕ್ಕಿ ನೀಡಬೇಕು.ಎಲೆಕ್ಟ್ರಾನಿಕೆ ಸ್ಕೇಲ್ ನಲ್ಲಿಯೆ ನೀಡಬೇಕು.ಚಿಕ್ಕಮಗಳೂರು ಭಾಗದಲ್ಲಿ ಸರಿಯಾಗಿ ವಿತರಣೆ ಮಾಡುತ್ತಾರೆ ಬೇಲೂರು ತಾಲ್ಲೂಕಿನಲ್ಲಿ ವ್ಯವಸ್ಥೆ ಹದಗೆಟ್ಟಿದ್ದು ಮಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.


     ಶಕ್ತಿ ಯೋಜನೆ ಪಲಾನುಭವಿಗಳಿಗೆ ಸಮರ್ಪಕವಾಗಿ ಬಳಕೆಯಾಗುತ್ತಿದ್ದು ಕಳೆದ 2023 ರಿಂದ 26 ರವರೆಗೆ 1.10,79,966  ಜನ ಮಹಿಳೆಯರು ಪ್ರಯಾಣಿಸಿದ್ದು,75,ಕೋಟಿ 50,ಲಕ್ಷದ 62,ಸಾವಿರದ 341 ರೂಗಳನ್ನು ಸರ್ಕಾರ ನೀಡಿದ್ದು,ಯಾವುದೆ ತೊಂದರೆಯಾಗಿಲ್ಲ ಎಂದರು.ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಬಸ್ ನಿಲ್ದಾಣ ಅಗತ್ಯವಿದ್ದು ಸಂಸದರ ಗಮನಕ್ಕೆ ತರಲಾಗಿದ್ದು,ಸದ್ಯದಲ್ಲಿಯೆ ಬಸ್ ನಿಲ್ದಾಣ ಆರಂಭಗೊಳ್ಳಲಿದೆ ಎಂದರು.


  ಯುವನಿದಿ ಯೋಜನೆಯು ಸುಮಾರು 443 ಬಿಎ ಪದವಿ ವಿದ್ಯಾರ್ಥಿಗಳಗೆ ತಲುಪುತ್ತಿದ್ದು,ಡಿಪ್ಲೋಮೋ 3 ವಿದ್ಯಾರ್ಥಿಗಳಿಗೆ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿ ತಿಂಗಳು 13,33,500ರೂ ನೀಡುತ್ತಿದ್ದು 2023 ರಿಂದ 2026 ಜನವರಿ ತಿಂಗಳ ಅಂತ್ಯಕ್ಕೆ 25 ಕೋಟಿ 69 ಲಕ್ಷದ 84 ಸಾವಿರದ 500 ರೂ ಸರ್ಕಾರ ನೀಡಿದ್ದು ಫಲಾನುಭವಿಗಳು ಸದುಪಯೋಗ ಪಡಿಸಿ ಕೊಂಡಿದ್ದಾರೆ.

ಎಂದರು.ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬಿಸಿಲ ತಾಪ ಹೆಚ್ಚಾಗಿ ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಸುಟ್ಟು ಹೋಗಿವೆ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ದೂರು ಬಂದಿದೆ.ಕೂಡಲೆ ಸಂಭಂದಪಟ್ಟ ಅಧಿಕಾರಿಗಳು ರೈತರಿಗೆ ಕರೆಂಟ್ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು.ರಾಜ್ಯ ಸರ್ಕಾರದಿಂದ ಬೇಲೂರು ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಉದ್ಯೋಗಮೇಳ ಮತ್ತು ಯುವನಿದಿ ಬಗ್ಗೆ ಮಾಹಿತಿ ನೀಡುತ್ತಿದ್ದು ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇಂತಹ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.


      ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ,ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಳನ್ನು ಎಇಇ ಬಸವರಾಜು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ ಆದರೆ ಕೆಳ ಹಂತದ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ತಮ್ಮ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ.ಜೆಜೆಎಂ ಯೋಜನೆಯ ಬಗ್ಗೆ ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರಿಂದ ಹಲವಾರು ದೂರುಗಳು ಬಂದಿವೆ.ಕೂಡಲೆ ಆಯಾ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು.ಗೃಹಲಕ್ಷ್ಮಿ,ಯೋಜನೆ ಜೊತೆಗೆ ಪಡಿತರ ಚೀಟಿಯಲ್ಲಿ ಯಾವುದೆ ಲೋಪವಾಗಬಾರದು.ತಾಲ್ಲೂಕಿನಲ್ಲಿ ಒಟ್ಟು ಪಡಿತರದಾರರ ಪೈಕಿ ವಲಸಿಗರು,ಮರಣ ಹೊಂದಿದ ಐಟಿ,ಜಿಎಸ್ ಟಿ ಹೊಂದಿರುವ ಪಲಾನುಭವಿಗಳ ಪಟ್ಟಿಯನ್ನು ಪಂಚಾಯ್ತಿವಾರು ನೀಡಬೇಕು ಎಂದು ಮಹಿಳಾ ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
  ಗ್ಯಾರಂಟಿ ಸಮಿತಿ ಸದಸ್ಯ ಶರತ್ ಮಾತನಾಡಿ,ರಾಜನಶಿರಿಯೂರು ಸೊಸೈಟಿ ಯಲ್ಲಿ ಅಕ್ಕಿ ವಿತರಣೆ ಮಾಡುವಾಗ ಪಡಿತರರಿಗೆ ಮಾಲೀಕ ದುರ್ವರ್ತನೆಯಿಂದ ವರ್ತಿಸುತ್ತಾನೆ.ಸರ್ಕಾರ ನೀಡುವ ಅಕ್ಕಿಯಲ್ಲಿ ಜನರ ಹೊಟ್ಟೆಗೆ ಹೊಡೆದು ಬೆಂಗಳೂರಿನಲ್ಲಿ ನಿವೇಶನ ಮಾಡಿಕೊಂಡಿದ್ದಾನೆ ತಮ್ಮ ಊರಿನಲ್ಲಿ ಐಶಾರಾಮಿ ಮನೆ ಕಟ್ಟಿದ್ದಾನೆ ಎಲ್ಲಿಂದ ಹಣ ಬಂದಿದೆ ಎಂಬುದನ್ನು ಅಧಿಕಾರಿಗಳು ಗಮನಿಸಬೇಕು.ಇಂತಹ ಅಂಗಡಿಗಳನ್ನು ವಜಾ ಮಾಡಬೇಕು ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ.ಸಾರಿಗೆ ವ್ಯವಸ್ಥೆ ಸರಿಪಡಿಸಬೇಕು ಪ್ರಯಾಣಿಕರು ಹತ್ತುವ ಮುಂಚಿತವಾಗಿಯೆ ಬಸ್ ಚಲಾಯಿಸುವ ಚಾಳಿ ಕೆಲ ಚಾಲಕರುಗಳಲ್ಲಿರುವುದರಿಂದ ಕೆಲ ಸಂದರ್ಭದಲ್ಲಿ ಪ್ರಯಾಣಿಕರು ನೆಲಕ್ಕೆ ಬಿದ್ದಿರುವ ಉದಾಹರಣೆಗಳಿವೆ ಬಸ್ ಚಾಲಕರು ಮಹಿಳೆಯರನ್ನು ನೋಡಿದರೆ ಬಸ್ ನಿಲ್ಲಿಸುವುದಿಲ್ಲ ಅಂತಹ ಚಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಡಿಪೋ ಮ್ಯಾನೇಜರ್ ನಾಗರಾಜ್ ರವರಿಗೆ  ಸೂಚನೆ ನೀಡಿದರು.


  ಸುರೇಶ್ ಮಾತನಾಡಿ,ರಾಜನಶಿರಿಯೂರು ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 24 ಕಂಬಗಳು ಗಾಳಿಮಳೆಗೆ ಬಿದ್ದು ಇಪ್ಪತ್ತು ದಿನ ಕಳೆದರೂ ಸರಿಪಡಿಸುವ ಕನಿಷ್ಟ ಪ್ರಜ್ಞೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಇಲ್ಲದಾಗಿದೆ.ಹಳೇಬೀಡು ಸುತ್ತಮುತ್ತಲ ರೈತರು ಬೆಳಯನ್ನೆ ನಂಬಿ ಬದುಕುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕರೆಂಟ್ ಸಮರ್ಪಕವಾಗಿ ನೀಡದಿದ್ದರೆ ರೈತರ ಗತಿ ಹೇಗೆ..?
ಜೆಜೆ ಎಂ ಯೋಜನೆ ಪಾಳುಬಿದ್ದಿದೆ ಹಳ್ಳಿಗಳಲ್ಲಿ ರಸ್ತೆಗಳನ್ನು ಕಿತ್ತು ಹಾಳುಮಾಡಿದ್ದಾರೆ ಪಂಚಾಯ್ತಿ ವಾಟರ್ ಮ್ಯಾನ್ ಗಳು ಅಧಿಕಾರಿಗಳಾಗಿದ್ದಾರೆ ಯಾರು ಮಾತನ್ನು ಕೇಳುತ್ತಿಲ್ಲ.ಪಂಚಾಯಿತಿ ಅಧಿಕಾರಿಗಳು ಅವರ ಬಗ್ಗೆ ಗಮನಹರಿಸಿ ಹಳ್ಳಿಗಳ ಅಭಿವೃದ್ಧಿಯ ಕಡೆ ಗಮನಹರಿಸಬೇಕು ಎಂದರು.


   ಈ ಸಂದರ್ಭದಲ್ಲಿ ಸದಸ್ಯರಾದ ನಿಶ್ಚಲ್.ಸುರೇಶ್ ,ಮನ್ಸೂರು ಅಹ್ಮದ್.ಅಬೀಬ್.ವಿಶಾಲಾಕ್ಷಿ ಶರತ್,ಆಹಾರ ಇಲಾಖೆ ಶಿರಸ್ಥೆದಾರರಾದ ಪುರುಷೋತ್ತಮ್, ಗೀತಾಂಜಲಿ,ಆಹಾರ ನಿರೀಕ್ಷಕಿ  ವೀಣಾ.ಡಿಪೋ ಮ್ಯಾನೇಜರ್ ನಾಗರಾಜು,ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ,ಸೇರಿದಂತೆ ಮತ್ತಿತರರು ಇದ್ದರು.

Related posts

ಸಕಲೇಶಪುರದಲ್ಲಿ ಈದ್ ಮಿಲಾದ್ ಆಚರಣೆ

Bimba Prakashana

ಪೊಲೀಸ್ ಸಹಕಾರ ಸಂಘದ ಚುನಾವಣೆ – ಪ್ರಥ್ವಿ ಜಯಭೇರಿ

Bimba Prakashana

ಸರಕಾರಿ ಬಸ್ ಚಾಲಕರ ಮೇಲೆ ಹಲ್ಲೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More