–
ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಕರಡಿಗಾಲ ಗ್ರಾಮದಲ್ಲಿ ಗ್ರಾಮದ ಹಾಲು ಉತ್ಪಾದಕರು ಹಾಗೂ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ 2024 25ನೇ ವರ್ಷದ ವಾರ್ಷಿಕ ಸಭೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಮಾಡಲಾಯಿತು.
ಗ್ರಾಮದಲ್ಲಿ 15 ವರ್ಷಗಳ ಹಿಂದೆ ಸ್ಥಾಪನೆಯದ ಈ ಹಾಲು ಉತ್ಪಾದಕರ ಸಂಘ ಪ್ರಾರಂಭದಲ್ಲಿ ನಾಲ್ಕರಿಂದ ಐದು ಲೀಟರ್ ಹಾಲು ಉತ್ಪಾದನೆ ಮಾಡುತ್ತಿತ್ತು ಇಂದು 25ರಿಂದ 30 ಜನ ಹಾಲು ಉತ್ಪಾದಕರಿಂದ 300 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ.
ತಮ್ಮ ಸಂಘಕ್ಕೆ ಒಂದು ಕಟ್ಟಡ ಬೇಕು ಎಂಬ ನಿಟ್ಟಿನಲ್ಲಿ ಗ್ರಾಮದ ಶಿವಣ್ಣಗೌಡ ಹಾಗೂ ಹಾಲು ಉತ್ಪಾದಕರು ವಿವಿಧ ದಾನಿಗಳನ್ನು ಸಂಪರ್ಕಿಸಿ ಸುಮಾರು ನಾಲ್ಕು ಲಕ್ಷದ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ . ಇದರ ಉದ್ಘಾಟನೆಯನ್ನು ಕಲ್ಲು ತೋಟ ಕುಮಾರಿ ಗೌಡರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.ತಾಲೂಕು ಸಹಾಯಕ ಪಶು ವೈದ್ಯಾಧಿಕಾರಿ ವೆಂಕಟೇಶ್ ಸಭಾ ಕಾರ್ಯಕ್ರಮವನ್ನು ಉದ್ದೇಶಸಿ ಮಾತನಾಡುತ್ತ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಹೈನುಗಾರಿಕೆಯಲ್ಲಿ ಆದಾಯ ತಂದುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಮಾತನಾಡಿ ಕೃಷಿ ಜೊತೆ ಹೈನುಗಾರಿಕೆ ರೂಢಿಸಿಕೊಂಡಲ್ಲಿ ರೈತರು ಉತ್ತಮ ಆದಾಯ ಪಡೆಯಲು ಸಾಧ್ಯ. ಎಂದು ಹೇಳಿದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ದಾನಿಗಳಿಗೆ ವಿಶೇಷವಾಗಿ ಸನ್ಮಾನ ಮಾಡಯಿತು.
ಕಾರ್ಯಕ್ರಮದಲ್ಲಿ ಕರಡಿಗಾಲ ಗ್ರಾಮದ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು, ಮಹಿಳಾ ಸಂಘದವರು ಉಪಸ್ಥಿತರಿದ್ದರು.
previous post
