Blog

ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 21 ವೀರಶೈವ ಕಾರ್ಯಕ್ರಮ

ಆಲೂರು. ತಾಲೂಕಿನ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ. 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ನೀಡಿ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬೋಧಿಸಿದ ಬಸವೇಶ್ವರರ ಆದರ್ಶಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್ 21, ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ದಿನವಿಡೀ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಬಸವಣ್ಣನವರ ರಥಯಾತ್ರೆಗೆ ಸ್ವಾಗತ, ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ಜೊತೆ ಸಂವಾದ, ಮಧ್ಯಾಹ್ನ 4 ಗಂಟೆಗೆ ಸದ್ಭಾವನಾ ಪಾದಯಾತ್ರೆ ಮತ್ತು ರಥ ಮೆರವಣಿಗೆ, ಸಂಜೆ 5 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ “ಜಂಗಮದೆಡೆಗೆ ಎಂಬ” ನಾಟಕ ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.ನಾಡಿನ ಪ್ರಮುಖ ಸ್ವಾಮೀಜಿಗಳು, ಬಸವೇಶ್ವರರ ಅಭಿಮಾನಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಲಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಲ್ಲಾ ಸಮಾಜದ ಬಾಂಧವರಿಗೆ ಸ್ವಾಮೀಜಿಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಲಿಂಗಾಯಿತ ವೀರಶೈವ ಮಹಾಸಭಾದ ಆಲೂರು ತಾಲೂಕಿನ ಎಲ್ಲ ಮಠಾಧೀಶರು. ಜವೆನಹಳ್ಳಿ ಮಠದ ಮಠಾಧೀಶರು. ವೀರಶೈವ ಲಿಂಗಾಯಿತ ಆಲೂರು ತಾಲೂಕಿನ ಅಧ್ಯಕ್ಷರುಗಳಾದ ರೇಣುಕ ಪ್ರಸಾದ್. ಅಜಿತ್ ಚಿಕ್ಕಣಗಾಲ್. ವೀರಶೈವದ ಎಲ್ಲಾ ಸಂಘದ ಮುಖಂಡರುಗಳು ಪದಾಧಿಕಾರಿಗಳು. ವೀರಶೈವ ಸಮಾಜದ ಎಲ್ಲ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಇಂದು ಮಳಲಿಯಲ್ಲಿ ಚಿತ್ರಕಲಾ ಸ್ಪರ್ಧೆ

Bimba Prakashana

ಲೈಟ್ ಕಂಬಕ್ಕೆ ಡಿಕ್ಕಿ ಆದ ಗೋ ಕಳ್ಳತನ ವಾಹನ

Bimba Prakashana

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More