Blog

ವಿದ್ಯುತ್ ಸಮಸ್ಯೆ ಹುಣಸವಳ್ಳಿ ಗ್ರಾಮಸ್ಥರ ಆಕ್ರೋಶ

ಆಲೂರು :ವಿದ್ಯುತ್ ಇಲ್ಲದೆ ಹುಣಸವಳ್ಳಿ ಗ್ರಾಮದ ರೈತರ ಪರದಾಟ

ಆಕ್ರೋಶಗೊಂಡ ರೈತ ಸಂಘ
ಕೆ ಇ ಬಿ ಕಚೇರಿಗೆ ಮುತ್ತಿಗೆ

ಅಧಿಕಾರಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ

ಇಂದು ಆಲೂರು ತಾಲ್ಲೂಕಿನ  ಕೆ ಇ ಬಿ ಕಚೇರಿಗೆ ರೈತ ಸಂಘಟನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧರ್ಮರಾಜು ಮಾತಾನಾಡಿ ಕಳೆದ ಎಂಟು ದಿನಗಳಿಂದ ವಿದ್ಯುತ್ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಸರಿಯಾದ ಸಮಯಕ್ಕೆ ವಿದ್ಯುತ್ ಪೂರೈಸದೆ ರೈತರ  ಜೀವನದ ಜೋತೆ ಚೆಲ್ಲಾಟ ಆಡುತ್ತಿದ್ದಾರೆ ಬೆಳೆದ ಬೆಳೆಗೆ ನೀರನ್ನು ಹಾಹಿಸಲು ಸಾಧ್ಯವಾಗದೆ ಬಿಸಿಲಿನ ತಾಪಮಾನದಿಂದ ಬೆಳೆಗಳು ಒಣಗುತ್ತಿದೆ ಈಗಾದರೆ ರೈತರ ಪರಿಸ್ಥಿತಿ ಏನೆಂದು ಅಧಿಕಾರಗಳ ವಿರುದ್ಧ ಕಿಡಿ ಕಾರಿದರು ಅಲ್ಲದೆ ಕೆ ಇ ಬಿ ಕಚೇರಿಯಲ್ಲಿರುವ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದಿಲ್ಲ ಲೈನ್ ಮ್ಯಾನ್ ಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಕರೆ ಮಾಡಿದರೆ ಫೋನ್ ತೆಗೆಯುವುದಿಲ್ಲ ಈಗಿರೂವಾಗ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಕೊಡುವವರು ಯಾರೆಂದು ಪ್ರಶ್ನಿಸಿದರು.

ಈಗಾಗಲೇ ವಿದ್ಯುತ್ ಕೊರತೆ ಉಂಟಾಗಿದೆ ಮುಂದೆ ಮಳೆಹೋದರೆ ನಮ್ಮ ಭಾಗದ ರೈತರ ಸ್ಥಿತಿಏನು ವಿದ್ಯುತ್ ನೀಡಿಯೆಂದು ಕೆ ಇ ಬಿ ಅಧಿಕಾರಿ ಜೈ ಕೇಳಿದರೆ ಉಡಾಫೆ ಉತ್ತರಗಳನ್ನು ನೀಡುತ್ತಾರೆ ಎಂಟು ದಿನಗಳಿಂದ ಮಳೆ ಇಲ್ಲದೆ ರೈತರು ಕಣ್ಣು ಬಾಯಿ ಬಿಡುತ್ತಿದ್ದಾರೆ ಕೂಡುವ ನಾಲ್ಕೈದು ಗಂಟೆಯ ಅವಧಿಯಲ್ಲಿ ಸಹ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಇನ್ನೂ ನವೆಂಬರ್ ಡಿಸೇಂಬರ್ ವರೆಗೂ ವಿದ್ಯುತ್ ಬೇಕು ಈಗಲೇ ಹೀಗೆ ಮುಂದೆ ಏನು ಕಥೆ ಅಧಿಕಾರಿಗಳು ರೈತರನ್ನು ನೇಣು ಹಾಕಿಕೊಳ್ಳುವ ಪರಿಸ್ಥಿತಿ ತರುತ್ತಾರೆ ಕೆ ಇ ಬಿ ಅಧಿಕಾರಿಗಳು ಅಷ್ಟೇ

ಬೆಳೆದ ಬೆಳೆಗೂ ಬೆಲೆ ಇಲ್ಲ ಇತ್ತ ವಿದ್ಯುತ್ ಇಲ್ಲ ರೈತರ ಸ್ಥಿತಿ ಚಿಂತಾಜನಕವಾಗಿದೆ ಇಲ್ಲಿಯ ಜನಪ್ರತಿನಿದಿನಗಳು ಸುಮ್ಮನೆ ಕಾರ್ಯಕ್ರಮಕ್ಕೆ ಅಲ್ಲಿ ಇಲ್ಲಿ ಹೋಗಿಬರುತ್ತಾರೆ ಅಷ್ಟೇ ರೈತರ ಕಷ್ಟ ಸುಖಗಳನ್ನು ಆಲಿಸುತ್ತಿಲ್ಲ ನಮ್ಮ ಭಾಗಕ್ಕೆ ವಿದ್ಯುತ್ ಸ್ಥಾವರ ಮಾಡಿ ಕೊಡುತ್ತೇವೆಂದು ಹೇಳಿ ಎರಡು ವರ್ಷಗಳೇ ಕಳೆಯಿತು ಆದರೂ ಇನ್ನೂ ಮಾಡಿಲ್ಲ ಭರಿ ಅಶ್ವಸನೆಗಳೇ ಆಯ್ತೆ ಹೋರೆತು ಕೆಲಸ ಮಾತ್ರ ಆಗುತ್ತಿಲ್ಲ ವಿದ್ಯುತ್ ನೀಡಿಯೆಂದು ಇಲ್ಲಿಯ ಅಧಿಕಾರಿಗಳನ್ನು ಕೇಳಿದರೆ ದಿನನಿತ್ಯ ಇವರ ಸಾಬೂಬು ಮಾತುಗಳನ್ನು ನಾವು ಕೇಳಿ ಸಾಕಾಗಿದೆ ಇನ್ನ ಇವರ ಮಾತುಗಳನ್ನು ನಾವು ಕೇಳುವುದಿಲ್ಲ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಕಚೇರಿಗೆ ಕೂಡಿ ಬೀಗ ಹಾಕುತ್ತೇವೆಂದು ಎಚ್ಚರಿಸಿದರು

ವಿದ್ಯುತ್ ಇಲಾಖೆ ತಾಲ್ಲೂಕಿನಲ್ಲಿ ಹದಗೆಟ್ಟು ಹೋಗಿದೆ ಹೇಳೋರು ಕೇಳೋರಿಲ್ಲ ದಂತಾಗಿದೆ ಇಷ್ಟ ಬಂದಾಗ ಬರುತ್ತಾರೆ ಇಷ್ಟ ಬಂದಾಗ ಹೋಗುತ್ತಾರೆ ಇಂತವರಿಗೆ ಏಕೆ ಸರ್ಕಾರ ಸಂಬಳ ನೀಡುತ್ತಿದೆ ಗೊತ್ತಿಲ್ಲ ಇವರೆಲ್ಲ ಬಡವರ ಹೊಟ್ಟೆ ಹೊಡೆಯುವುದಕ್ಕೆ ಬಂದಿರುವುದು ರೈತರ ಮಾಧ್ಯಮ ವರ್ಗದ ಜನರ ಕಷ್ಟಗಳನ್ನು ಪರಿಹರಿಸುತ್ತಿಲ್ಲ ಈ ಸರ್ಕಾರಗಳು ಕೂಡ ರೈತರ ಬಗ್ಗೆ ಹೆಚ್ಚು ಗಮನಹರಿಸಿ ರೈತರ ಬದುಕನ್ನು ಅಸನು ಮಾಡಬೇಕು   ರೈತರಿಗೆ ಅನ್ಯಾಯವಾಗಲು ಬೀಡಬಾರದು ಕೊಡಲೇ ಅಧಿಕಾರಿಗಳು ಹೆಚ್ಚೆತ್ತು ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಇಲ್ಲವಾದಲ್ಲಿ ನ್ಯಾಯ ಸಿಗವವರೆಗೂ ದಿನ ರಾತ್ರಿ ಕಚೇರಿ ಮುಂದೆ ಮಲಗಿ ನಿಮ್ಮನ್ನು ಕೂಡಿ ಹಾಕಿ ಬೀಗ ಹಾಕುತ್ತೇವೆಂದರು…

ಈ ಸಂದರ್ಭದಲ್ಲಿ ಹುಣಸವಳ್ಳಿ ಗ್ರಾಮಸ್ಥರು ಹಾಗೂ ರೈತ ಸಂಘದವರಿದ್ದರು..

Related posts

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ

Bimba Prakashana

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Bimba Prakashana

ಹೊಸ ವರ್ಷದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More