Blog

ಆಲೂರುನಲ್ಲಿ ಹೆಚ್ ಪಿ ವಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಧಮ್ಮ ಜನ ಸ್ಪಂದನೆ

ರಾಧಮ್ಮ ಜನ ಸ್ಪಂದನೆ ಆಲೂರು ಇದರ ವತಿಯಿಂದ ವಿದ್ಯಾರ್ಥಿನಿಯರಿಗೆ ಹೆಚ್ ಪಿ ವಿ ಲಸಿಕೆ ನೀಡುವ ಕಾರ್ಯಕ್ರಮವು ಆಲೂರು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ನಿವೃತ್ತ ಸಿ ಇ ಓ ಆದ ಬಿ ಎ ಪರಮೇಶ್ ನೆರವೇರಿಸಿದರು.ಹಣ ಎಲ್ಲರ ಬಳಿ ಇರುತ್ತೆ. ಆದರೆ ಅದನ್ನು ಸಮಾಜಕ್ಕೆ ವಿನಿಯೋಗ ಮಾಡುವವರು ಶ್ರೇಷ್ಠರು ಎಂದರು. ಹೇಮಂತ್ ಕುಮಾರ್ ರವರು ಜನರ ಬದುಕಿಗೆ ಆಸರೆ ಆಗುವ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು. 

ರಾಧಮ್ಮ ಜನ ಸ್ಪಂದನೆ ಟ್ರಸ್ಟ್ ನ ಹೇಮಂತ್ ಕುಮಾರ್ ಮಾತನಾಡಿರಾಧಮ್ಮ ಜನ ಸ್ಪಂದನೆಯ ಹೇಮಂತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಾಗಿ ಹೇಳಿದರು.

ಸನ್ಮಾನಿತರಾಗಿರುವ ವಸಂತ್ ಕುಮಾರ್ ರವರು ಪತ್ರಿಕಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಪ್ರಶಂಸೆ ಮಾಡಿದ ಅವರು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವವರು ಶ್ರೇಷ್ಠತೆಯನ್ನು ಪಡೆಯುತ್ತಾರೆ ಎಂದರು.

ಮಲೆನಾಡು ನರ್ಸಿಂಗ್ ಹೋಮ್ ನ ವೈದ್ಯರಾದ ಡಾ.ಸಾವಿತ್ರಿ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕಿರಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ನಿಸಾರ್ ಫಾತಿಮಾ, ಕಲ್ವೀರ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ, ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಕಾಶ್, ಪ್ರಜಾವಾಣಿ ಪತ್ರಿಕೆಯ ಎಂ ಪಿ. ಹರೀಶ್, ಇನ್ ಸ್ಪೇರ್ ಶಿಕ್ಷಣ ಸಂಸ್ಥೆಯ ಅಶೋಕ್ ಉಪಸ್ಥಿತರಿದ್ದರು


ಈ ಸಂದರ್ಭದಲ್ಲಿ ಮಲ್ನಾಡ್ ಶಾಡೋ ಡಿಜಿಟಲ್ ವಾಹಿನಿ ಮುಖ್ಯಸ್ಥರಾದ ವಸಂತ್ ಕುಮಾರ್ ರನ್ನು ಸನ್ಮಾನ ಮಾಡಲಾಯಿತು.

ವಿದ್ಯಾರ್ಥಿನಿಯರಿಗೆ ಈ ಸಂದರ್ಭದಲ್ಲಿ ಹೆಚ್ ಪಿ ವಿ ಲಸಿಕೆ ನೀಡಲಾಯಿತು.

ಹೇಮಂತ್ ಕುಮಾರ್ ರವರು ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಲಸಿಕೆ ನೀಡುವ ಮೂಲಕ ವಿದ್ಯಾರ್ಥಿನಿಯರ ಭವಿಷ್ಯ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

Related posts

ಎತ್ತಿನ ಹೊಳೆ ಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು

Bimba Prakashana

ಸಕಲೇಶಪುರ ಶಾಲೆಯ ಮುಂಭಾಗ ಮರಳು – ಜಲ್ಲಿ ರಾಶಿ

Bimba Prakashana

ಸಕಲೇಶಪುರದಲ್ಲಿ ಬಾಂಗ್ಲಾ ದೇಶಿಯರನ್ನು ಗಡೀ ಪಾರು ಮಾಡಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More