Blog

ಸ್ಪೋಟಕ ಸಿಡಿತ – ತನಿಖೆ ತೀವ್ರ

ಅಷ್ಟಕ್ಕೂ ಹಳೆ ಆಲೂರಲ್ಲಿ ಯಾತಕ್ಕಾಗಿ ಇಷ್ಟು ದೊಡ್ಡ ಮಟ್ಟದ ಬ್ಲಾಸ್ಟ್ ಆಯಿತು.

ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸಿಡಿತ ಎಂದೇ ನಂಬಲಾಗಿತ್ತು. ಆದ್ರೆ ಸ್ಥಳೀಯರು ಹೇಳೋ ಪ್ರಕಾರ ಇದೊಂದು ನಿಷೇಧಿತ ಜಿಲೆಟಿನ್ ಕಡ್ಡಿಗಳ ಬ್ಲಾಸ್ಟ್ ಎನ್ನಲಾಗಿದೆ.

ಯಾವ ಕಾರಣಕ್ಕೆ ಈ ಅಪಾಯಕಾರಿ ವಸ್ತುವನ್ನು ಮನೆಯಲ್ಲಿ ತಂದಿಟ್ಟರು ಎಂದು ಪೊಲೀಸ್ ತನಿಖೆಯಲ್ಲಿ  ಬಹಿರಂಗ ಆಗಬೇಕಿದೆ.

ಮೋಹನ್ ಅವರ ಮನೆಯಲ್ಲಿ ನಡೆದ ಈ ಸ್ಫೋಟದಲ್ಲಿ ಅವರ ಮಗ ಸುದರ್ಶನ್ ಸೊಸೆ ಕಾವ್ಯ ಗಾಯ ಗೊಂಡಿದ್ದರು. ಅವರ ಮೈ ಎಲ್ಲಾ ಸಂಪೂರ್ಣ ಸುಟ್ಟು ಹೋಗಿತ್ತು.

ಮನೆ ಮೇಲಿನ ಶೀಟ್ ಗಳು ಎಲ್ಲೆಡೆ ಹಾರಿ ಹೋಗಿದೆ.  ಈ ಸಂದರ್ಭದಲ್ಲಿ ಮೋಹನ್ ಮನೆಯಲ್ಲಿ ಇರಲಿಲ್ಲ. ಮನೆ ಕಾಂಪೌಂಡ್ ಕುಸಿದು ಹೋಗಿದೆ. ಮನೆ ಒಳಗಿನ ವಸ್ತುಗಳು ಎಲ್ಲೆಡೆ ಹಾರಿ ಹೋಗಿದೆ.

ಸ್ಥಳೀಯರು ಈ ಘಟನೆಯಿಂದ ಆತಂಕದಲ್ಲಿದ್ದಾರೆ. ರಾತ್ರಿ ಹೊತ್ತಿನಲ್ಲಿ ನಡೆದ ಈ ಬೀಕರ ಘಟನೆ ಎಲ್ಲರಲ್ಲೂ ಭಯ ತಂದಿದೆ

Related posts

ಹೆತ್ತೂರು ಗ್ರಾಮಸಭೆಗೆ ಜನರ ಬಹಿಷ್ಕಾರ

Bimba Prakashana

ಗ್ರಾಮೀಣ ಪತ್ರಕರ್ತರಿಗೆ ಸವಲತ್ತು ನೀಡಿ – ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Bimba Prakashana

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More