Blog

ಬೈಲ ಹಳ್ಳಿ ಶಾಲೆಯಲ್ಲಿ ವಾರ್ಷಿಕೋತ್ಸವ

ಅದ್ದೂರಿಯಾಗಿ ನಡೆದ ಶಾಲಾ ವಾರ್ಷಿಕೋತ್ಸವ.

ಬೈಲ ಹಳ್ಳಿ KPS ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ.

ಹಾಸನ : ತಾಲೂಕಿನ ಬೈಲಹಳ್ಳಿ KPS ಶಾಲೆಯಲ್ಲಿ ಇಂದು ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ವಾರ್ಷಿಕೋತ್ಸವವನ್ನು ಹಲವಾರು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ನಂತರ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಅಂಜಳಿಗೆ ಮಂಜುನಾಥ್ ರವರು ಸಭೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬೈಲಹಳ್ಳಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಚಂದ್ರ ಕುಮಾರ್ ರವರ ಬಗ್ಗೆ ಮಾತನಾಡಲು ತುಂಬಾನೇ ಹೆಮ್ಮೆಯಾಗುತ್ತದೆ ಏಕೆಂದರೆ ಶಾಲೆಗಿಂತ ಮುಂಚಿತವಾಗಿ ಹೊಸಕೋಟೆ ಹೋಬಳಿಯ ಕಾಡ್ಲೂರು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಇದ್ದರು.
ಆ ಸಂದರ್ಭದಲ್ಲಿ ಬೇರೆ ಶಾಲೆಗೆ ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗೋದಕ್ಕೆ ಹೋದಾಗ ಅವರ ಪರಿಚಯವಾಗಿತ್ತು ತದನಂತರ ಚಂದ್ರಕುಮಾರ್ ರವರು ನಮ್ಮ ಶಾಲೆಗೆ ಬನ್ನಿ ಅಂತ ಕರೆದಾಗ ನಾನು ಶಾಲೆಗೆ ಭೇಟಿ ನೀಡಿದಾಗ ಅಲ್ಲಿಯ ವಾತಾವರಣ ತುಂಬಾನೇ ಅನುಕೂಲವಾಗಿತ್ತು ಮಕ್ಕಳಿಗೆ ದಾನೀಯ ಮೂಲಕ ಪ್ರತಿಯೊಂದು ಮಕ್ಕಳಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಕೊಡಿಸುತ್ತಿದ್ದರು ಮಕ್ಕಳು ಯಾವುದೇ ರೀತಿ ಕುಂದು ಕೊರತೆ ಇಲ್ಲದೆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ ಮಾಣಿಕ್ಯ ಅಂದರೆ ಚಂದ್ರಕುಮಾರ್ ರವರು ಕಾರಣಾಂತರಗಳಿಂದ ಬೈಲಾಹಳ್ಳಿ ಶಾಲೆಗೆ ವರ್ಗಾವಣೆಯಾಗುತ್ತಾರೆ ಚಂದ್ರಕುಮಾರ್ ರವರು ಬೈಲಹಳ್ಳಿ ಶಾಲೆಗೆ ಬಂದರು ಈ ಶಾಲೆಯ ಕಟ್ಟಡ ಶಿಥಿಲ ವ್ಯವಸ್ಥೆಯಲ್ಲಿ ಇದ್ದವು ಆದರು ಅವರು ಹೆದರದೆ ಧೈರ್ಯ ಮಾಡಿ ವಿವಿಧ ದಾನಿಗಳಿಂದ ಕಟ್ಟಡ ಶಾಲೆಯ ಮಕ್ಕಳಿಗೆ ಬೇಕಾಗಿರುವ ಸಾಮಗ್ರಿಗಳನ್ನು ಪಡೆದು ಇವತ್ತು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಇಂದು ಚಂದ್ರಕುಮಾರ್ ರವರಿಂದ ಇವರಿಗೆ ರಾಜ್ಯ ಪ್ರಶಸ್ತಿ ನೀಡಬೇಕು ಅನ್ನೋದಕ್ಕೆ ಮನದಾಸೆಯಾಗಿದೆ ಎಂದರು.

ನಂತರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಚಂದ್ರಕುಮಾರ್ ರವರು ಶಾಲಾ ವಾರ್ಷಿಕೋತ್ಸವವನ್ನು ಕುರಿತು ಮಾತನಾಡಿ ಬೈಲಹಳ್ಳಿ ಶಾಲೆಯ ಅಭಿವೃದ್ಧಿಗೆ ತುಂಬಾನೇ ದಾನಿಗಳ ಮೂಲಕ ನಾನು ಮಾದರಿಯಾಗಿ ಮಾಡುವುದಕ್ಕೆ ಸಹಕಾರಿಯಾಗಿದೆ ಮುಖ್ಯವಾಗಿ ಸಹಕರಿಸಿದಂತಹ ಶ್ರೀಯುತ ಅಂಜಳಿಗೆ ಮಂಜುನಾಥ್ ರವರು ನಮ್ಮ ಶಾಲೆಗೆ ಮಕ್ಕಳ ಕಲಿಕೆಗಾಗಿ ಉಚಿತವಾಗಿ ನೋಟ್ ಬುಕ್,ಬ್ಯಾಗ್, ಲೇಖನಿ ಸಾಮಗ್ರಿಗಳು ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಸಹ ಮಾಡಿಕೊಟ್ಟರು.

ನಂತರ ಬೆಂಗಳೂರಿನ ಶ್ರೀಯುತ ಗೋಲ್ಡ್ ರಮೇಶ್ ರವರು ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಶಾಲಾ ಸಮವಸ್ತ್ರವನ್ನು ವಿತರಿಸಿದರು ಹಾಗೆ ಈ ಶಾಲೆ ಅಭಿವೃದ್ಧಿ ಆಗುವುದಕ್ಕೆ ಪ್ರತಿಯೊಬ್ಬ ದಾನಿಗಳ ಮೂಲಕ ಸಹಕಾರಿಯಾಗಿದೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಈ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಬೈಲಹಳ್ಳಿ ಶಾಲೆಗೆ ನಾಲ್ಕೂ ಕಂಪ್ಯೂಟರ್ ನೀಡಿ ಸ್ಮಾರ್ಟ್ ಕ್ಲಾಸ್ ಗೆ ಸಭೆಯಲ್ಲಿ ಉದ್ಘಾಟಿಸಿದರು ನಂತರ ಬೈಲಹಳ್ಳಿ ಗ್ರಾಮದ D E D ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ ನೀಡಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಕ್ರೀಡೆ ಆಟ ಮನರಂಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿಜೇತರದವರಿಗೆ ಗಣ್ಯ ವ್ಯಕ್ತಿಗಳ ಮೂಲಕ ಬಹುಮಾನವನ್ನು ಸಹ ವಿತರಿಸಲಾಯಿತು.             ಈ ಕಾರ್ಯಕ್ರಮದ ವೇದಿಕೆಯಲ್ಲಿ ಇದ್ದಂತಹ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

       ಈ ಸಂದರ್ಭದಲ್ಲಿ ಹಂಜಳಿಗೆ ಮಂಜುನಾಥ್, ಗೋಲ್ಡ್ ರಮೇಶ್, ಹೈದುರ್ ಜಯಣ್ಣ,ನವೀನ್,ಗ್ರಾಮ್ ಪಂಚಾಯ್ತಿ ಅಧಿಕಾರಿಗಳು, ಅಧ್ಯಕ್ಷರುಗಳು,ಶಾಲಾ ಶಿಕ್ಷಕ ವೃಂದದವರು, ಶಾಲಾ ಮಕ್ಕಳು, ಹಾಗೂ ಪೋಷಕ ವೃಂದದವರು,ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ✒️ರಂಜಿತ್ ಕುಮಾರ್ ಅಂಬುಗ

Related posts

ಡಾ. ಸಾಗರ್ ಜಾನೇ ಕೆರೆಯವರಿಗೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

Bimba Prakashana

ಆಲೂರು ವೀರಶೈವ ಮಹಾಸಭಾ ತಾಲೂಕು ಘಟಕದ ಪದಗ್ರಹಣ

Bimba Prakashana

ಹಾನು ಬಾಳು ಚಿಕ್ಕಿಯಲ್ಲಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಆರಂಭ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More