Blog

ಆಲೂರುನಲ್ಲಿ ಚೆಕ್ ಡ್ಯಾಮ್ ಕಾಮಗಾರಿಗೆ ಭೂಮಿ ಪೂಜೆ

ವರದಿ :ರಂಜಿತ್ ಕುಮಾರ್ ಅಂಬುಗ

ಚೆಕ್ ಡ್ಯಾಮ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ     ಶಾಸಕ ಸಿಮೆಂಟ್ ಮಂಜು.


ಆಲೂರು ತಾಲೂಕಿನ ಬೊಮ್ಮನ ಮನೆ ಗ್ರಾಮದ ದೊಡ್ಡ ಗೌಡನ ಕಟ್ಟೆ ಅಜ್ಜನಹಳ್ಳಿ ಗ್ರಾಮದ ಕೋಣನಕಟ್ಟೆ ಕೆರೆಯಿಂದ ಹರಿಯುವ ನೀರಿಗೆ ತಲ ಒಂದು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು, ಭೂಮಿ ಪೂಜೆ ನೆರವೇರಿಸಿದರು.
     ನಂತರ ಮಾತನಾಡಿ ಪ್ರಕೃತಿಯಿಂದ ದೊರಕುವ ನೀರನ್ನು ಬಳಸಿಕೊಳ್ಳದೆ ಸುತ್ತಮುತ್ತಲಿನ ಸುಮಾರು 120 ಎಕರೆ ಪ್ರದೇಶ ಭೂಮಿ ಬಂಜಾರಾಗಿದೆ.
ರೈತರಿಗೆ ನೀರಾವರಿ ಅನುಕೂಲವಾಗಬೇಕೆಂಬ ಮೂಲ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ.
   ಚೆಕ್ ಡ್ಯಾಮ್ ನಿರ್ಮಾಣ ಮಾಡಿದಾಗ ನೀರು ಸಂಗ್ರಹವಾಗುವುದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ ಬೇಸಿಗೆಕಾಲದಲ್ಲಿಯೂ ಬೆಳೆ ಬೆಳೆಯಲು ಅನುಕೂಲವಾಗುತ್ತದೆ.
ರೈತರು ನೀರನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂದರು.

  ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸ್ಥಳೀಯರು ಉಪಸ್ಥಿತರಿದ್ದರು.

Related posts

ಸಮಾಜ ಸೇವಕ ತ್ಯಾಗ ರಾಜು ಜನ್ಮದಿನದ ಕಾರ್ಯಕ್ರಮ

Bimba Prakashana

ವಳಲಹಳ್ಳಿಯಲ್ಲಿ ಶ್ರೀ ಗುರು ಶನೈಶ್ಚರ ಪೂಜೆ

Bimba Prakashana

ಶಾಸಕರಿಂದ ಅಧಿಕಾರ ದುರುಪಯೋಗ – ಅಧಿಕಾರಿಗಳ ತೇಜೋವದೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More