Blog

ಶಾಸಕರಿಂದ ಅಧಿಕಾರ ದುರುಪಯೋಗ – ಅಧಿಕಾರಿಗಳ ತೇಜೋವದೆ

ಶಾಸಕರ ವರ್ತನೆಯಿಂದ ಬೇಸತ್ತ ಅಧಿಕಾರಿಗಳು: ಬಸವ ಜಯಂತಿಯನ್ನೆ ಕಡೆಗಣಿಸಿದ ಶಾಸಕ ಹೆಚ್.ಕೆ.ಸುರೇಶ್.

ಬೇಲೂರು.
   ಶಾಸಕ ಹೆಚ್.ಕೆ.ಸುರೇಶ್  ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ತಾಲ್ಲೂಕಿನಲ್ಲಿ ಅಧಿಕಾರಿಗಳನ್ನು ಮಾನಸಿಕವಾಗಿ ತೇಜೋವದೆ ಮಾಡುತ್ತಿದ್ದಾರೆ.ಅವರ ವರ್ತನೆಯಿಂದ ಬೇಸತ್ತು ಅಧಿಕಾರಿಗಳು ವರ್ಗಾವಣೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ದೇಶಾಣಿ ಆನಂದ್ ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

          ಪಟ್ಟಣದ ಮಾದ್ಯಮ ಪತ್ರಕರ್ತರ ಸಂಘದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಶಾಸಕ ಹೆಚ್.ಕೆ.ಸುರೇಶ್ ಅಧಿಕಾರಿಗಳ ಮೇಲೆ ಭ್ರಷ್ಠಾಚಾರದ ಆರೋಪ ಮಾಡುವುದು ಸರಿಯಿಲ್ಲ.ಕೆಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಇರಬಹುದು, ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ನಮ್ಮ ತಕರಾರು ಇಲ್ಲ.ಆದರೆ ಶಾಸಕರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತಿದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ.ಬೇಲೂರು ತಾಲ್ಲೂಕಿನಲ್ಲಿ ಅಭಿವೃದ್ದಿ ಆಗುತ್ತಿದೆ ಗುದ್ದಲಿ ಪೂಜೆ ಮಾಡಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಾರೆ ನಿಜ.ಆದರೆ ಅನುದಾನವನ್ನು ನಮ್ಮ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೇಲೂರು ಹಿಂದುಳಿದ ತಾಲ್ಲೂಕು ಆಗಿರುವುದರಿಂದ ಹೆಚ್ಚಿನ ಅಭಿವೃದ್ದಿಯಾಗಲಿ ಎಂಬ ಹಿತಾಸಕ್ತಿಯಿಂದ ಅನುದಾನ ನೀಡುತ್ತಿದ್ದಾರೆ.ಅದನ್ನೆ ತಾವು ತಮ್ಮ ಮನೆಯಿಂದಲೆ ತಂದಿದ್ದೇನೆ ಎಂದು ನಾನು,ನಾನು,ಎಂದು ಹೇಳಿ ಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ ಎಂದರು.


    ಸರ್ಕಾರದ ಹಣ ತರೋದಿಕ್ಕೆ ಜನಪ್ರತಿನಿದಿಯೆ ಬೇಕು ಅಂತ ಏನಿಲ್ಲ.ಸಂಭಂದಪಟ್ಟ ಮಂತ್ರಿಯಾಗಬಹುದು,ಮುಖ್ಯಮಂತ್ರಿಯಾಗಬಹುದು ಅಥವಾ ಸಾಮಾನ್ಯ ಮನುಷ್ಯ ಗಮನ ಸೆಳೆದು ಬೇಲೂರಿನ ಮೂಲಭೂತ ಸೌಲಭ್ಯ ದ ಕೊರತೆಯಿದೆ ಎಂದಾಗ ಅನುದಾನ ಕೊಡಬಾರದು ಎಂಬುದು ಕಾನೂನಿನಲ್ಲಿಲ್ಲ.ಅದನ್ನು ಬಿಟ್ಟು ಸರ್ಕಾರ ನೀಡಿದ ಅನುದಾನವನ್ನು ಬೇರೆಯವರಿಗೆ ಗುತ್ತಿಗೆ ನೀಡಿ ನಾನು ಮಾಡಿದ್ದು, ಎಂದರೆ ಇದು ನೀವು ಮಾಡುವ ಭ್ರಷ್ಟಾಚಾರ ಅಲ್ಲವೇ..ಎಂದು ಶಾಸಕರ ವಿರುದ್ದ ಕುಟುಕಿದರು.ಬೇರೆಯವರು ಮಾಡುವ ಕಾಮಗಾರಿ ನಡೆಯಬಾರದು,ಅದನ್ನು ನಿಲ್ಲಿಸೋದೆ ನಿಮ್ಮ ಪೌರುಷ ಅನ್ನೋದಾದ್ರೆ ಬೇಲೂರಿನ ಅಭಿವೃದ್ದಿಯನ್ನು ನೀವು ಬಯವುದಿಲ್ಲವೇ..ಎಂಬ ಅನುಮಾನವೂ ಇದೆ. ಎಂದು ಶಾಸಕರ ವಿರುದ್ದ ಕಿಡಿಕಾರಿದರು.
  ತಾಲ್ಲೂಕಿನ ಒಬ್ಬ ಗುತ್ತಿಗೆ ದಾರರಿಗೆ ಕೆಲಸ ನೀಡಿಲ್ಲ.ಕಂಟ್ರಾಕ್ಟರ್ ಗಳ ವಿಗ್ಗರ್ ಗಳು ತುಕ್ಕು ಹಿಡಿಯುತ್ತಿವೆ.ನಿಮಗೆ ಬೇಕಾದ ಸಂಭಂದಿಕರನ್ನು ಕರೆಸಿ ಗುತ್ತಿಗೆ ನೀಡುತ್ತೀರಿ, ಬೇಲೂರಿನಲ್ಲಿಯೂ ಒಳ್ಳೆ ಕೆಲಸಗಾರರು ಇದ್ದಾರೆ ಅವರಿಗೆ ಕೆಲಸ ಕೊಟ್ಟು ಬೆಳೆಸಿ,ಅದನ್ನು ಬಿಟ್ಟು,ಅಧಿಕಾರಿಗಳಿಗೆ ಏಕ ವಚನ ಬಳಸುವುದು, ತೇಜೋವದೆ ಮಾಡೋದು,ನಿಮ್ಮ ನಡೆ ಅಲ್ಲ.ಭ್ರಷ್ಟಾಚಾರ ಮಾಡೋ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿ, ನಮ್ಮ ತಕರಾರಿಲ್ಲ.ಆದರೆ ನಮ್ಮ ಶಿವರಾಂ ರವರು ಕಾಂಗ್ರೆಸ್ ಸರ್ಕಾರ ಇರುವುದರಿಂದ ಅಧಿಕಾರಿಗಳನ್ನು ಹಾಕಿಸಿದ್ದಾರೆ. ಅವರನ್ನೆ ಟಾರ್ಗೆಟ್ ಮಾಡೋದಾದ್ರೆ ಇದು ನಿಮ್ಮ ನಡೆ ಅಲ್ಲ.ಬೇಲೂರಿನ ಪ್ರಗತಿ ನಿಮಗೆ ಬೇಕಿಲ್ಲ.ರಾಜ್ಯದ 224 ಕ್ಷೇತ್ರದಲ್ಲೂ ನಿಮ್ಮಂತಹ ಮನೋಭಾವನೆ ಇರುವ ಶಾಸಕರು ಮತ್ತೊಬ್ಬರಿಲ್ಲ.ಅಧಿಕಾರ ಶಾಶ್ವತ ಅಂದುಕೊಳ್ಳಬೇಡಿ,ಬದಲಾವಣೆ ಸೃಷ್ಟಿಯ ನಿಯಮ ಅದನ್ನು ಮನಗಂಡು ನಿಮಗೆ ನೀವೆ ಒಂದು ಸಾರಿ ಅವಲೋಕನ ಮಾಡಿಕೊಳ್ಳಿ ಎಂದರು.
  ಸರ್ಕಾರ ಬಡವರಿಗೆಂದೆ ಒಂದಿಷ್ಟು ಗಂಗಾಕಲ್ಯಾಣ ಯೋಜನೆ ರೂಪಿಸಿದೆ.ಅವರಿಗೆ ಸರ್ಕಾರದಿಂದ ಒಂದೆರಡು ಕೊಳವೆಬಾವಿಗಳನ್ನ ಮಂಜೂರು ಮಾಡಿಸಿದ್ದೇವೆ.ಅವರು ನನ್ನ ಬಳಿ ಬರಬೇಕು ನನ್ನ ಒಪ್ಪಿಗೆ ಬೇಕು ಎಂದರೆ ಹೇಗೆ.ಇಂತಹ ಸಣ್ಣತನವನ್ನು ಬಿಡಬೇಕು.ಬೇಲೂರು ತಾಲ್ಲೂಕಿಗೆ ಸರ್ಕಾರ ಕೋಟಿ ಕೋಟಿ ಅನುದಾನ ನೀಡುತ್ತಿದೆ.ನೀವು ಅಭಿವೃದ್ದಿ ಮಾಡಿ ಬೇಡ ಅನ್ನುವುದಿಲ್ಲ.ಅದಿಕಾರಿಗಳು ತಪ್ಪತಸ್ಥರಿದ್ದರೆ ಅಮಾನತ್ತು ಮಾಡಿ,ಆದರೆ ಒಳ್ಳೆಯ ಅಧಿಕಾರಿಗಳನ್ನು ನಿಮ್ಮ ಕಪಿಮುಷ್ಠಿಯಲ್ಲಿ ಇಟ್ಟು ಕೊಳ್ಳುವ ಸಲುವಾಗಿ ಟಾರ್ಗೆಟ್ ಮಾಡಿ ಭ್ರಷ್ಟ,ಲೋಫರ್ ಎಂದೆಲ್ಲ ಮಾನಸಿಕ ವಾಗಿ ಹಿಂಸೆ ನೀಡುತ್ತಿರಿ ಎಂದರೆ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಬ್ರೀಟೀಷ್ ಆಡಳಿತ ನಡೆಸುತ್ತಿದ್ದಿರಾ.. ಎಂದರು
    ತಹಸೀಲ್ದಾರ್ ಮಾತು ಕೇಳಲ್ಲ ಅಂತೀರಿ,ದೇವಾಸ್ಥಾನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರವರ ಮೇಲೆ ದರ್ಪ ತೋರಿದ ಹಾಗೆ ಇವರ ಮೇಲೂ ದರ್ಪ ತೋರಬೇಕಿತ್ತು.ಅದನ್ನು ಬಿಟ್ಟು ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿ,ಎಂದು ಪೂರ್ವಭಾವಿ ಸಭೆಯಲ್ಲಿ ನೀವೆ ಹೇಳಿ,ಮುಂದಿನ ದಿನಾಂಕ ನಿಗದಿ ಮಾಡಿ ಮಂತ್ರಿಗಳನ್ನು ಕರೆಸುತ್ತೇನೆ ಎಂದು ಹೇಳಿ ನೀವೆ ಒಂದು ಗಂಟೆ ತಡವಾಗಿ ಬಂದು ನೀವೆ ತಾಲ್ಲೂಕು ಆಡಳಿತದ ವಿರುದ್ದ ದಿಕ್ಕಾರ ಕೂಗುತ್ತಿರಾ.. ಎಂದರೆ ನಿಮ್ಮ ಸಾಮಾರ್ಥ್ಯ ವನ್ನ ನೀವೆ ಹರಾಜುಮಾಡಿಕೊಳ್ಳುತ್ತಿದ್ದಿರಾ ಎಂದು ವ್ಯಂಗ್ಯವಾಡಿದರು.
  ಇತ್ತ ಬಸವ ಜಯಂತಿಯ ಪೂರ್ವಭಾವಿ ಸಭೆಯನ್ನು ಕರೆಯದೆ,ಬಸವ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿಗೆ ಹೂವಿನ ಹಾರ ಹಾಕಿ ನಾಪತ್ತೆಯಾದವರು ಕೊನೆಗೆ ಬಂದು ನಮ್ಮ ಲಿಂಗಾಯತ ಸಮುದಾಯ ಕಛೇರಿಯಲ್ಲಿ ಕಾಯ್ದು ಕುಳಿತರೂ ಬಾರದೆ ಕೊನೆಗೆ ಜೊತೆ ನಿಂತು ಬೇಕೋ ಬೇಡವಾ ಅನ್ನೋಹಾಗೆ ತಾಲ್ಲೂಕು ಆಡಳಿತದ ವಿರುದ್ದ ದಿಕ್ಕಾರ ಕೂಗುತ್ತಿರಾ ಅಂದರೆ,ನಿಮಗೆ  ನಿಮ್ಮ ನಡೆ ಸಾರ್ವಜನಿಕ ವಲಯದಲ್ಲಿ ನಗುವಂತಾಗಿದೆ.ಹಾಗಾದರೆ ಪ್ರತಿ ಭಾಷಣದಲ್ಲೂ ಬುದ್ದ ಬಸವ,ಅಂಬೇಡ್ಕರ್ ರವರ ಹೆಸರು ಹೇಳುವುದು ಯಾವ ನ್ಯಾಯ ಎಂದರು.
ಮುಂದಿನ ದಿನಗಳಲ್ಲಿ ನಿಜವಾಗಲು ನಿಮಗೆ ನೈತಿಕತೆ ಇದ್ದರೆ ಅಧಿಕಾರಿಗಳನ್ನು ನಿಮ್ಮ ಅತೋಟಿಯಲ್ಲಿಟ್ಟುಕೊಂಡು ಅಧಿಕಾರ ನಡೆಸಿ,ಇಲ್ಲ ವಾದರೆ ಮುಂದಿನ ಎರಡು ವರ್ಷಗಳಲ್ಲಿ ಜನರೆ ನಿಮಗೆ ಪಾಠ ಕಲಿಸುತ್ತಾರೆ ಎಂದು ಶಾಸಕರಿಗೆ ದೇಶಾಣಿ ಅನಂದ್ ಎಚ್ಚರಿಸಿದರು.
  ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ  ವೈ.ಎನ್.ನಾಗೇಶ್ ಮಾತನಾಡಿ,ಶಿವರಾಮಣ್ಣ ಅಥವಾ ಶಾಸಕರಾಗಲಿ ಪ್ರತಿನಿತ್ಯ ಕಛೇರಿಗೆ ಬಂದು ಕೆಲಸ ಮಾಡಕ್ಕಾಗಲ್ಲ.ಆದರೆ ಶಿವರಾಮಣ್ಣ ವಾರದಲ್ಲಿ ನಾಲ್ಕೈದು ದಿನ ಬೇಲೂರಿನಲ್ಲಿಯೆ ಇದ್ದುಕೊಂಡು,ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಾರೆ.ನೂರಾರು ಜನ ರೈತರು,ಬಗರುಕ್ಕುಂ,ಅರಣ್ಯ,ಭೂಮಿ ವಿಚಾರವಾಗಿ ಸಮಸ್ಯೆ ಬಂದಾಗ ಪ್ರತಿನಿತ್ಯ ತಾಲ್ಲೂಕು ಕಛೇರಿಗೆ ಬರಕ್ಕಾಗಲ್ಲ.ಅದಕ್ಕೋಸ್ಕರ ಶಿವರಾಂ ರವರು ಒಂದಿಷ್ಟು ನಿಷ್ಠಾವಂತ ಕಾರ್ಯಕರ್ತರನ್ನು ಇಟ್ಟುಕೊಂಡು ಕೆಲಸಮಾಡಿಸುತ್ತಾರೆ ಅದನ್ನ ಶಾಸಕರ ಭ್ರಷ್ಟಾಚಾರ ಅಂತಿರಾ..ಸಾರ್ವಜನಿಕರಲ್ಲಕ ದುಡಿಸಿಕೊಂಡು ಶಾಸಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.
  ತಾಲ್ಲೂಕು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸಚಿನ್ ಮಾತನಾಡಿ,ಬೇಲೂರು ತಾಲ್ಲೂಕಿನ ಪ್ರಜೆಯಾಗಿ ಮತದಾರರಿಗೆ ಸ್ಪಂದಿಸದಿರುವುದು  ನೀವು ಮಾಡುತ್ತಿರುವ ದ್ರೋಹ.ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ವರ್ಗಾವಣೆ ನಿಮ್ಮ ವರ್ತನೆಗೆ ಹೆದರಿ ಅಧಕಾರಿಗಳು ಬೇಸತ್ತಿದ್ದಾರೆ.ಸಾಮಾನ್ಯ ಜನರ ಕೆಲಸಗಳು ಯಾವ ಇಲಾಖೆಗಳಲ್ಲಿಯೂ ನಡೆಯುತ್ತಿಲ್ಲ.ಬೆಂಗಳೂರಿನಲ್ಲಿ ನೀವು ಉದ್ಯಮ ಮಾಡುವುದರಲ್ಲಿ ಕಾಲಕಳೆಯುತ್ತಿರಾ..ಜನಸಾಮಾನ್ಯರ ಕಷ್ಟ ಕೇಳೋರು ಯಾರು.ಯಾವತ್ತೋ ಒಂದು ದಿನ ಬಂದು ಅಧಿಕಾರಿಗಳ ಮೇಲೆ ದರ್ಪ ತೋರುತ್ತಿರಾ..ತಾಲ್ಲೂಕು ಕಛೇರಿಗೆ ಜನ ತಿಂಗಳುಗಟ್ಟಲೆ ಅಲೆದಾಡಬೇಕು.ನೀವು ಬಗೆಹರಿಸದ ಸಮಸ್ಯೆಗಳನ್ನು ಶಿವರಾಮಣ್ಣ ಬಗೆಹರಿಸುತ್ತಾರೆ ಒಳ್ಳೆ ಕೆಲಸ ಮಾಡೋರಿಗೆ ಭ್ರಷ್ಟಾಚಾರದ ಪಟ್ಟ ಕಟ್ಟುತ್ತೀರಾ.. ಸಾಮಾನ್ಯ ಜ್ಞಾನ ಇದ್ದರೆ ಬೇಲೂರು ಕ್ಷೇತ್ರವನ್ನು ಅಭಿವೃದ್ದಿ ಮಾಡಿ ತೋರಿಸಿ ಎಂದರು.
  ಗ್ಯಾರಂಟಿ ಸಮಿತಿ ಸದಸ್ಯ ಸುರೇಶ್ ಮಾತನಾಡಿ,ಶಾಸಕರು ಚುನಾವಣೆ ಸಂದರ್ಭದಲ್ಲಿ ಭಾರಿ ಭರವಸೆಗಳನ್ನು ನೀಡಿದ್ದರು.ನಾನು ಗೆದ್ದ 24 ಗಂಟೆಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿದ್ದರು.ಬಂಡಿಲಕ್ಕನ ಕೊಪ್ಪಲು ಗ್ರಾಮದಲ್ಲಿ ಸುಮಾರು 1.5ಕೋಟಿ ಅನುದಾನದಲ್ಲಿ ರಸ್ತೆ ಕಾಮಾಗಾರಗೆ ಗುದ್ದಲಿ ಪೂಜೆ ಮಾಡುತ್ತೇನೆ ಎಂದು ಹೇಳಿದವರು ರಸ್ತೆ ಕಾಮಾಗಾರಿಗೆ ಯಾವ ಪುರಾವೆಯೂ ಇಲ್ಲದೆ ಗ್ರಾಮಗಳಲ್ಲಿ ಪುಕ್ಕಟೆ ಪ್ರಚಾರ ಮಾಡುತ್ತಿದ್ದಾರೆ ಶಿವರಾಮಣ್ಣ ಅನುದಾನ ತಂದಿದ್ದನ್ನ ತಮ್ಮ ಕಾರ್ಯಕರ್ತರ ಬಳಿ ನಾನು ಅನುದಾನ ತಂದಿರುವುದು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದರು.ಮುಂದಿನ ದಿನಗಳಲ್ಲಿ ಶಾಸಕರು ಬದಲಾಗಬೇಕು.ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಲ್ಲಿಕ್,ಪ್ರದೀಪ್ ಶರತ್ ಇದ್ದರು

Related posts

ಆಲೂರುನಲ್ಲಿ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Bimba Prakashana

ನ್ಯಾಯವಾದಿಗಳ ಹೋರಾಟ – ಸಕಲೇಶಪುರ ಪುರಸಭೆ ಮುಖ್ಯ ಅಧಿಕಾರಿ ಕ್ಷಮೆ ಯಾಚನೆ

Bimba Prakashana

ಆಲೂರುನಲ್ಲಿ ಜನ ಸಂಪರ್ಕ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More