ಸಕಲೇಶಪುರ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಗೋಸಾಗಾಟ – ತಡವಾಗಿ ಎಫ್ಐಆರ್ ದಾಖಲಾದ ಬಗೆ ಹಲವು ಅನುಮಾನ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಗಂಭೀರ ಆರೋಪ..
ಸಕಲೇಶಪುರ – ದಿನಾಂಕ 02/03/2026 ರಂದು ಸಂಜೆ 05 ಗಂಟೆ ಸಮಯದಲ್ಲಿ ಅನೆಮಹಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ ನಗರದ ಕಡೆ KA34A2835 TATAACE ಗೂಡ್ಸ್ ವಾಹನದ ಅತೀ ವೇಗದಲ್ಲಿ ಬರುತ್ತಿದ್ದು ಒಳಗೆ ಗೋವುಗಳನ್ನು ತುಂಬಿರುವ ವಾಹನದ ಮಾಹಿತಿಯನ್ನು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪೋಲಿಸ್ ಇಲಾಖೆಯ 112 ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು
. ನಗರ ಪೋಲಿಸ್ ಠಾಣೆಯ 1ಕಿಲೋ ಮೀಟರ್ ಅಂತರದಲ್ಲಿರುವ ಕೆಂಪೆಗೌಡ ಪುತ್ತಳಿ ಸಮೀಪ ಬರುತ್ತಿದ್ದಂತೆ ನಗರ ಠಾಣೆ ಪೊಲೀಸ್’ನವರಿಗೂ ಈ ಸಂಬಂಧ ಮಾಹಿತಿ ನೀಡಿದ್ದು ಕೆಂಪೇಗೌಡ ವೃತ್ತದಲ್ಲಿ ವಾಹನ ತಡೆದು ತಪಾಸಣೆ ಮಾಡಿದಾಗ ವಾಹನದೊಳಗೆ ಹಿಂಸಾತ್ಮಕ ಅಕ್ರಮವಾಗಿ 3 ಹೋರಿ 1 ಹಸು ಇದ್ದುದು ಕಂಡುಬರುತ್ತದೆ.
ದಾಖಲೆ ಪರಿಶೀಲನೆ ಮಾಡಿದಾಗ 3 ಹಸುಗಳಿಗೆ ಸಾಗಿಸಲು ಅನುಮತಿ ಪಡೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನಗರ ಠಾಣೆ ಪೊಲೀಸರು ವಿಚಾರಣೆಗಾಗಿ ನಗರ ಠಾಣೆಗೆ ವಾಹನವನ್ನು ತೆಗೆದುಕೊಂಡು ಹೋಗಿದ್ದು ವಾಹನದ ದಾಖಲೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ತಪಾಸಣೆ ಮಾಡಬೇಕು ಎಂದು ನಗರ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ತಿಳಿಸಿದಕ್ಕೆ ಉಡಾಫೆ ಉತ್ತರ ನೀಡಿದಲ್ಲದೆ 24 ಗಂಟೆ ಕಳೆದರು FIR ಮಾಡದೇ ಸ್ಟೇಷನ್ ನಲ್ಲೆ ಗೋವುಗಳಿಗೆ ಹುಲ್ಲು ನೀರು ನೀಡದೆ ಅಮಾನುಷವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ವೈದ್ಯರು ಯಾವುದೇ ಪರಿಶೀಲನೆ ಮಾಡದೇ ಪಿಡಿಎಫ್ ಮೂಲಕ ನೀಡಿರುವ ಸರ್ಟಿಫಿಕೇಟ್ ನಲ್ಲಿ ಗೊಂದಲವಿದೆ ಹೆಣ್ಣು ಹಸು ಎಂದು ನಮೂದಾಗಿದ್ದು ವಾಹನದಲ್ಲಿ 2 ಹೋರಿ ಗೋವುಗಳು ಇದ್ದದ್ದನ್ನು ಇನ್ಸ್ಪೆಕ್ಟರ್ ನೋಡಿದರು ಸಹ ಕ್ರಮ ವಹಿಸದೆ ಒಂದು ದಿನ ಯಾವುದೇ ಕ್ರಮ ವಹಿಸದೆ ತಡವಾಗಿ FIR ಮಾಡಿರುವ ಹಿಂದೆ ಹಲವು ಅನುಮಾನವಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಕೆಲಸ ದೇವರ ಕೆಲಸ ಎಂಬುದು ಸಕಲೇಶಪುರ ಪೊಲೀಸ್ ಇಲಾಖೆಗೆ ಸಂಬಂಧವಿಲ್ಲದಂತೆ ನೀಡಿದ ಮಾಹಿತಿ ತಿರಸ್ಕರಿಸುತ್ತಿರೋದು ಕಾನೂನು ಕಾಪಾಡುವವರೇ ಹೀಗೆ ಆದ್ರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ನಗರ ಠಾಣೆ ಪೊಲೀಸರ ನೇರವಾಗಿ ಕೈವಾಡ ಇದೆ ಎಂದು ಗಂಭೀರವಾಗಿ ಆರೋಪಿಸಿರುವ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲ್ಲೂಕ್ ಆಡಳಿತ ಹಾಗೂ ಪೋಲಿಸ್ ಇಲಾಖೆಯ ವೈಫಲ್ಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ…


