Blog

ಶುಕ್ರವಾರವೇ ಶುಕ್ರವಾರ ಸಂತೆಯಲ್ಲಿ ಬೃಹತ್ ರಕ್ತದಾನ

ನಾಳೆ ಕುರುಬತ್ತೂರು ಬೆಳೆಗಾರರ ಸಂಘದ 6ನೇ ಮಾಸಿಕ ಸಭೆಯ ಪ್ರಯುಕ್ತ “ಬೃಹತ್ ರಕ್ತದಾನ ಹಾಗೂ ಕಣ್ಣಿನ ಮತ್ತು ಆರೋಗ್ಯ ಶಿಬಿರ”.

ಸಕಲೇಶಪುರ :- ತಾಲ್ಲೂಕಿನ ಕುರುಭತ್ತೂರು ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 6ನೇ ಮಾಸಿಕ ಸಭೆಯ ಪ್ರಯುಕ್ತ,ಶುಕ್ರವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರ,ಅಮ್ಮ ಕಣ್ಣಿನ ಆಸ್ಪತ್ರೆ ಹಾಸನ, ರಕ್ತಕೇಂದ್ರ ವಿಭಾಗ ಹಿಮ್ಸ್ ಹಾಸನ, ಎನ್.ಸಿ.ಡಿ. ವಿಭಾಗ ಸಕಲೇಶಪುರ ಇವರ ಸಂಯುಕ್ತ ಆಶ್ರಯದಲ್ಲಿ,ಕುರುಭತ್ತೂರು, ವಳಲಹಳ್ಳಿ, ಬ್ಯಾಕರವಳ್ಳಿ, ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ಇವರ ಸಹಕಾರದೊಂದಿಗೆ “ಬೃಹತ್ ರಕ್ತದಾನ ಹಾಗೂ ಕಣ್ಣಿನ ಮತ್ತು ಆರೋಗ್ಯ ಶಿಬಿರವನ್ನು ನಾಳೆ ದಿನಾಂಕ: 12.09.2025ನೇ ಶುಕ್ರವಾರದಂದು ಬೆಳಗ್ಗೆ 10.30 ರಿಂದ 2.00 ಗಂಟೆಗೆ ಶುಕ್ರವಾರಸಂತೆ ಶ್ರೀ ವಿನಾಯಕ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದೆ.

ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಕುರಭತ್ತೂರು ಗ್ರಾಮ ಪಂಚಾಯಿತಿ ಬೆಳಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಪ್ರಸಾದ್ ತಿಳಿಸಿದ್ದಾರೆ.

Related posts

ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದ ಮಾಜಿ ಸಚಿವರು

Bimba Prakashana

ಸೆ 3ರಂದು ಅಭಿನಂದನೆ ಸಮಾರಂಭ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More