Blog

ಸೆ 3ರಂದು ಅಭಿನಂದನೆ ಸಮಾರಂಭ

ವರದಿ ರಾಣಿ ಪ್ರಸನ್ನ

ಶ್ರೀ ಮಲೆನಾಡು ವೀರಶೈವ ಸಮಾಜ ಮತ್ತು ಸಕಲೇಶಪುರ ಅಂಗಸಂಸ್ಥೆಗಳಿಂದ ಶ್ರೀ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ಮಹನೀಯರಿಗೆ ಅಭಿನಂದನಾ ಸಮಾರಂಭ ನಾಳೆ ಸೆ.3ರಂದು ನಡೆಯಲಿದೆ.

ದಿನಾಂಕ: 13-06-2024ನೇ ಗುರುವಾರ ವಿಶ್ವಗುರು ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಕಂಚಿನ ಪ್ರತಿಮ ನಾಡಿನ ಹರ ಗುರು ಚರಮೂರ್ತಿಗಳ ಸರ್ವಸಮಾಜ ಭಾಂದವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡು ನಾಡಿನ ಜನರ ದರ್ಶನಕ್ಕೆ ನೆಲೆನಿಂತಿದೆ.

ಈ ಶ್ರೇಷ್ಠ ಕಾರ್ಯಕ್ಕೆ ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ದಿನಾಂಕ : 03-09-2024ನೇ ಮಂಗಳವಾರ ಬೆಳಿಗ್ಗೆ 10-30ಕ್ಕೆ ಬ್ಯಾಕರವಳ್ಳಿ ಶ್ರೀ ಗುರುವೇಗೌಡರ ಕಲ್ಯಾಣ ಮಂದಿರದಲ್ಲಿ ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು : ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಪುಷ್ಪಗಿರಿ ಸಂಸ್ಥಾನಮಠ, ಬೇಲೂರು ವಹಿಸಿ ಕೊಳ್ಳಲಿದ್ದಾರೆ.

ದಿವ್ಯ ಉಪಸ್ಥಿತಿಯನ್ನು ಷ||ಬ್ರ|| ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ತೆಂಕಲಗೋಡು ಬೃಹನ್ಯರ, ಯಸಳೂರು

ಅಧ್ಯಕ್ಷತೆಯನ್ನು ಶ್ರೀ ಹೆಚ್.ಎನ್. ದೇವರಾಜು (ಐವಾನ್). ಅಧ್ಯಕ್ಷರು, ಶ್ರೀ ಮಲೆನಾಡು ವೀರಶೈವ ಸಮಾಜ (ರಿ.), ಸಕಲೇಶಪುರ,

ಮುಖ್ಯ ಅತಿಥಿಗಳಾಗಿ : ಶ್ರೀ ಶಂಕರ ಮಹಾದೇವ ಬಿದರಿ, ನಿವೃತ್ತ ಮುಖ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ಕರ್ನಾಟಕ ವಹಿಸಿ ಕೊಳ್ಳಲಿದ್ದಾರೆ

ಈ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರೂ  ಆಗಮಿಸಿ, ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.

ವಿಶೇಷ ಸೂಚನೆ : ರೂ. 25,000 ಸಾವಿರ ಮೇಲ್ಪಟ್ಟು
ಸಹಕರಿಸಿದ ದಾನಿಗಳಿಗೆ ಗೌರವ ಸಮರ್ಪಣೆ ನೆರವೆರಲಿದೆ.

ಮಧ್ಯಾಹ್ನ ಕಾರ್ಯಕ್ರಮದ ನಂತರ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ

Related posts

ಪಾಳ್ಯದ ಯಶವಂತರಿಗೆ ಪ್ರಶಸ್ತಿ ನೀಡಿದ ರಾಜ್ಯ ಸರಕಾರ

Bimba Prakashana

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

ಶಿಕ್ಷಕರ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More