Blog

ಜಮ್ಮನ ಹಳ್ಳಿ ಬಾಳ್ಳುಪೇಟೆ ರಸ್ತೆಯಲ್ಲಿ ಅವಸ್ಥೆ

ಸಕಲೇಶಪುರದ ಜಮ್ಮನ ಹಳ್ಳಿಯಿಂದ ಬಾಳ್ಳುಪೇಟೆವರೆಗಿನ ರಸ್ತೆ ಸಂಪೂರ್ಣ ಹದ ಗೆಟ್ಟಿದೆ.

ಯಾವ ಮಟ್ಟಕ್ಕೆ ಹದಗೆಟ್ಟಿದೆ ಎಂದರೆ ಈ ರಸ್ತೆಯಲ್ಲಿ ಸಂಚಾರ ಮಾಡಲು ಕೂಡಾ ಸಮಸ್ಯೆ ಉಂಟಾಗಿದೆ.

ಈಗಾಗಲೇ ಹಲವಾರು ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಕೆಳಕ್ಕೆ ಉರುಳಿ ಗಾಯಗೊಂಡ ಘಟನೆ ಕೂಡಾ ನಡೆದಿದೆ.

ಮಳೆಗಾಲ ಆರಂಭ ಆಗುವ ಮೊದಲಿನ ಮೇ ತಿಂಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುದ್ದಲಿ ಪೂಜೆ ಕೂಡಾ ಮಾಡಲಾಗಿತ್ತು.

ಅದರ ನಂತರ ಕಾಮಗಾರಿ ಮಾಡಲು ರಸ್ತೆ ಅಗೆಯಲಾಗಿತ್ತು. ಆದರೆ ಮಳೆಗಾಲ ಆರಂಭ ಆದಾಗ ಈ ರಸ್ತೆ ಕೆಸರು ತುಂಬಿದ ರಸ್ತೆಯಾಗಿ, ಬಿಸಿಲು ಬಂದಾಗ ಧೂಳು ತುಂಬಿದ ರಸ್ತೆಯಾಗಿ ಎಲ್ಲರಿಗೂ ತೊಂದರೆ ಆಗುತ್ತಿದೆ.

ಈ ರಸ್ತೆಯ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮ ಪಡಬೇಕು.

ಜನರಿಗೆ ನಿರಂತರ ಈ ರಸ್ತೆ ದುರವಸ್ಥೆಯಿಂದಾಗಿ ಸಮಸ್ಯೆ ಆಗುತ್ತಲೇ ಇದೆ. ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ

Related posts

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ – ಧನುಷ್ ಪ್ರಥಮ

Bimba Prakashana

ಬೆಳಗೋಡುನಲ್ಲಿ ಮೋದಿಯವರ ಹುಟ್ಟುಹಬ್ಬ

Bimba Prakashana

ವಸಂತ್ ಕುಮಾರ್ ಗೆ ಪತ್ರಕರ್ತರ ರಾಜ್ಯ ಹುದ್ದೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More