Blog

ಗಾಂಜಾ ಮಾರಾಟ – ಇಬ್ಬರ ಬಂಧನ

ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ( ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್ ಒಂದರಲ್ಲಿ ಕೆಲಸ) ಇವರುಗಳು ಸುಮಾರು 500 ಗ್ರಾಂ(ಅರ್ಧ ಕೆ.ಜಿ) ಗಾಂಜಾ ಸೊಪ್ಪನ್ನು ಮಾರಾಟಮಾಡುತ್ತಿದ್ದರು.

ಆ ಸಮಯದಲ್ಲಿ ಇವರುಗಳನ್ನು ದಸ್ತಗಿರಿಮಾಡಿದ ಪೊಲೀಸರು ಠಾಣೆಗೆ ಕರೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.ನಂತರ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಸಕಲೇಶಪುರ ಡಿವೈಎಸ್ಪಿ ಮಾಲತೇಶ್ ಎಸ್.ಕೆ.ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜು,ಸಬ್ ಇನ್ಸ್ ಪೆಕ್ಟರ್ ಮಹೇಶ್ ಜೆ.ಈ,ಹಾಗೂ ಸಿಬ್ಬಂದಿಗಳಾದ ಪೃಥ್ವಿ,ರೇವಣ್ಣ,ಶ್ರೀಧರ್,ಸೋಮಶೇಖರ್, ಚಂದ್ರಕಾಂತ್,ಮಧು ಮುಂತಾದವರು ಶ್ರಮಿಸಿರುತ್ತಾರೆ.

Related posts

ಸಕಲೇಶಪುರದಲ್ಲಿ ಕೊಲೆ ಆರೋಪಿಯ ಬಂಧನ

Bimba Prakashana

ವಳಲಾ ಹಳ್ಳಿ ಕೂಡಿಗೆಯಲ್ಲಿ ಬೃಹತ್ ಆರೋಗ್ಯ ಶಿಬಿರ

Bimba Prakashana

ಹೊಯ್ಸಳ ಕನ್ನಡ ಸೇನೆಯಿಂದ ಬೆಳ ಗೋಡುನಲ್ಲಿ ವಾಹನ ಮೆರವಣಿಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More