Blog

ಎಚ್ ಪಿ ವಿ ಲಸಿಕೆ – ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ

ನಾಳೆ ಶುಕ್ರವಾರ ಮಧ್ಯಾಹ್ನ  3ಗಂಟೆಗೆ ನಡೆಯುವ ಎಚ್ ಪಿ ವಿ ಶಿಬಿರದ ಲಸಿಕೆ ಕಾರ್ಯಕ್ರಮವಾದ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಎಚ್ ಪಿ ವಿ ಲಸಿಕೆ ಹಾಕಿಸಿಕೊಳ್ಳುವಂತಹ ಮಗ್ಗೆ ರಾಯರ ಕೊಪ್ಪಲು ಕೆ ಹೊಸಕೋಟೆ ಭಾಗದ ವಿದ್ಯಾರ್ಥಿನಿಯರಿಗೆ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ ಆಲೂರು ನಗರ ಪ್ರದೇಶದಲ್ಲಿ ಇರುವ ಜಾಗಕ್ಕೆ ಉಚಿತವಾಗಿ ಇನ್ಸ್ಪೈರ್ ಆಡಳಿತ ಮಂಡಳಿ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಪ್ರತಿಯೊಬ್ಬರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಮಂತ್ ಕುಮಾರ್ ಅವರು ಮನವಿ ಮಾಡಿರುತ್ತಾರೆ.

ಇನ್ಸ್ಪೈರ್ ಶಾಲೆಯ ಆಡಳಿತ ವ್ಯವಸ್ಥಾಪಕರಾದ ಅಶೋಕ್ ರವರಿಗೆ ಧನ್ಯವಾದಗಳು ಸಹ ತಿಳಿಸಿರುತ್ತಾರೆ.

ಕಾರ್ಗೋಡು ಇನ್ಸ್ಪೈರ್ ಶಾಲೆಯಿಂದ ಶುಕ್ರವಾರ ಮಧ್ಯಾನ 2 ಗಂಟೆಗೆ ಶಾಲೆಯ ಬಸ್ ಹೊರಟರೆ ಮಧ್ಯಾಹ್ನ 3:00 ಒಳಗೆ ಆಲೂರು ನಗರ ಪ್ರದೇಶಕ್ಕೆ ಬಸ್ ಬಂದು ಲಸಿಕೆಯ ನಂತರ 4:30ರ ಒಳಗೆ ತಮ್ಮ ಶಾಲೆಯ ಬಳಿ ಕರೆದುಕೊಂಡು ಹೋಗುತ್ತಾರೆಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಇರುತ್ತದೆ. ಪೋಷಕರು ಸಹ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಲೆನಾಡು ಶಾಡೋ ಗೆ ಪ್ರಕಟಣೆಯನ್ನು ಹೊರಡಿಸುತ್ತಾರೆ

Related posts

ಸಕಲೇಶಪುರ ಪುರಸಭೆ ವ್ಯಾಪ್ತಿಯ ವಾರ್ಡಲ್ಲಿ ಕಸದ ಸಮಸ್ಯೆ

Bimba Prakashana

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ರಾಜ್ಯ ಪತ್ರಿಕಾ ಕಾರ್ಯಾಗಾರ

Bimba Prakashana

ಬಾಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More