Blog

ಬಾಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದ  ಬಾಗೆ ಗ್ರಾಮ ಸಭೆಯಲ್ಲಿ  ಜೆ ಜೆ ಎಂ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ ಗೋಪಿನಾಥ್   ಗರಂ.

ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಶ್ನೆ ಸುರಿಮಳೆ ಹಾಕಿದ ಗ್ರಾಮಸ್ಥರಾದ ಕಾಂಗ್ರೆಸ್ ಮುಖಂಡ ನವೀನ್.

ಮುಗಿಯದ ಸ. ನಂ 22 ಸರ್ಕಾರಿ ಜಾಗದ ಚಿಲ್ಕೆ ಕಾಡಿನ ಸಮಸ್ಯೆ.

ಸಕಲೇಶಪುರದ ಬಾಗೆ ಗ್ರಾಮದಲ್ಲಿ ಇಂದು ಗ್ರಾಮ ಸಭೆ  ಇದರ ಉದ್ಘಾಟನೆಯನ್ನು  ಸಭೆಯ ನೋಡೆಲ್ ಅಧಿಕಾರಿಯಾಗಿದ್ದ ಗಂಗಾಧರನ್ ಕಾರ್ಯವಿರ್ವಾಹಕ ಅಧಿಕಾರಿಗಳು ತಾ.ಪಂ. ಸಕಲೇಶಪುರ  ಇವರಿಂದ ನೇರವೇರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು  ಗ್ರಾ.ಪಂ.ಅಧ್ಯಕ್ಷರಾದ ರೇಖಾ ಗೋಪಿನಾಥ್  ವಹಿಸಿದ್ದರು.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ*
ಬಾಗೆ ಗ್ರಾಮದ ರಾಮನಗರದಲ್ಲಿ  ಅಂಗನವಾಡಿ ಇದೆ ಆದರೆ ಶೌಚಾಲಯವಿಲ್ಲ . ಸ್ವಚ್ಛ ಭಾರತ ಎಂದು ಹೇಳುವ ಸರ್ಕಾರಕ್ಕೆ ಒಂದು ಅಂಗನವಾಡಿಗೆ ಶೌಚಾಲಯ ಬೇಕೆಂಬುದು ತಿಳಿದಿಲ್ಲವೇ?  ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ   ಜೈ ಜನನಿ ಕಾರ್ಯದರ್ಶಿಗಳಾದ  ವನಜಾಕ್ಷಿ ಪ್ರಶ್ನೆ ಮಾಡಿದರು.

ಕೇಳಿದರೆ ಸಬೂಬು ಹೇಳುತ್ತಾರೆ  ಈ ಜಾಗ ಕೋರ್ಟ್ ನಲ್ಲಿ ಇದೆ ಎಂದು. ಯಾವುದೇ ಕಾರ್ಯಕ್ಕೂ ನಮಗೆ ಪರಿಹಾರ  ಬೇಕೆ ಹೊರತು ಸಬೂಬುಗಳಲ್ಲ ಎಂದು ತೀವ್ರ ಖಾರವಾಗಿಯೇ ಮಾತನಾಡಿದರು.

  ಪಂಚಾಯಿತಿಯಿಂದ ಹಲವು ಬಾರಿ ಪತ್ರ ಬರೆದರು  ಸರ್ವೇ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಸ್ಪಂದನೆ ಮಾಡಲಿಲ್ಲ ಎಂಬ ಮಾತು ಕೇಳಿ ಬಂತು .

*ಆರೋಗ್ಯ ಇಲಾಖೆ*

ಹತ್ತಿರ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ  ತಮ್ಮ ಆಧಾರ್ ಕಾರ್ಡ್ , ರೇಶನ್ ಕಾರ್ಡ್ ತರಲು ಆರೋಗ್ಯಾಧಿಕಾರಿ ಡಾಕ್ಟರ್ ಸವಿತಾರವರು ತಿಳಿಸಿದರು. ಆಧಾರ್ ಕಾರ್ಡ್ ಅನ್ನು ಆಯುಷ್ಮಾನ್ ಭಾರತ್ ಕಾರ್ಡ್ ನೊಂದಿಗೆ ನೋಂದಾಯಿಸಿ ಬಿ ಪಿ ಶುಗರ್ ಇರುವ ವೃದ್ಧರಿಗೆ  ಮಾತ್ರೆ ಔಷಧಿಗಳನ್ನು ನೀಡಲು ಜಾರಿಗೆ ತರಲಿದೆ ಆದ್ದರಿಂದ ಆಧಾರ್ ಕಾರ್ಡ್ ಅನ್ನು ನೋಂದಾಯಿಸಿಕೊಳ್ಳಿ ಎಂದು ಸೂಚಿಸಿದರು

*ಚಿಲ್ಕೇ ಕಾಡು ಸಮಸ್ಯೆ*
ಹಲವು ವರ್ಷಗಳಿಂದ ಕಾಡುತ್ತಲೇ ಇರುವ ಈ ಸಮಸ್ಯೆಗೆ ಎಂದು ಮುಕ್ತಿ ಸಿಗುವುದು ತಿಳಿದಿಲ್ಲ. ಇದರ ಕುರಿತು ಹಲವು ಬಾರಿ ತಾಲ್ಲೂಕು ಕಚೇರಿಯಲ್ಲಿ, ಸಮಸ್ಯೆಯನ್ನು ಮುಂದಿಟ್ಟಿ ದ್ದೇವೆ, ಸರ್ವೇ ಮಾಡಿಸಿ  ಸರಿಪಡಿಸಿಕೊಡಲು  ಮನವಿ ಪತ್ರವನ್ನು ಸಹ ನೀಡಿದ್ದೇವೆ. ಆದರೆ ಏನು ಪ್ರಯೋಜನವಾಗಿಲ್ಲ. ಚಿಲ್ಕೇ ಕಾಡಿನ  ಸ. ನಂ 22 ರ್ಯಾಲಿ ಒಟ್ಟು 33 ನಿವೇಶನಕ್ಕೆ 2012 ರಲ್ಲಿ ಮಂಜೂರು ಪತ್ರವನ್ನು ನೀಡಲಾಗಿತ್ತು.   ಆದರೆ ತದನಂತರ ಈ ಜಾಗವನ್ನು  ಆರ್ ಟಿ ಒ ಹಾಗು ಐ ಟಿ ಐ ಕಾಲೇಜಿಗೂ ಮಂಜೂರು ಮಾಡಿದ್ದಾರೆ ಇದರ ಏಳೆಂಟು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇದೆ ಆದರೆ ಪರಿಹಾರ ಮಾತ್ರ ಕಾಣುತ್ತಿಲ್ಲ ಎಂದರು .

ಜನ ಸ್ಪಂದನ ಕಾರ್ಯಕ್ರಮದಲ್ಲಿ ಹಾಲಿ ಸದಸ್ಯರಾದ ರಾಕೇಶ್ ಪೂಜಾರಿ ಹಾಗು ಇನ್ನಿತರ ಸದಸ್ಯರುಗಳು ಹಾಗೂ ಗ್ರಾಮಸ್ಥರು  ಜಿಲ್ಲಾಧಿಕಾರಿಗಳಿಗೆ ಅರ್ಜಿ ನೀಡಲು ಹೋದಾಗ ಆಡಳಿತಾಧಿಕಾರಿಗಳು ತಡೆ ಹಿಡಿದರು. ಇದನ್ನು ಸರಿಪಡಿಸುತ್ತೇವೆ ಎಂದು   ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರವೂ ದೊರೆತಿರುವುದಿಲ್ಲ. ಬಾಗೆ ನಿರಾಶ್ರಿತರಿಗೆ ನಿವೇಶನಗಳು ದೊರಕೀತೆ  ಸೂರನ್ನು ಮಾಡಿಕೊಳ್ಳುವರೆ ಕಾದು ನೋಡಬೇಕು.

ಕಸ ವಿಲೇವಾರಿ ಘಟಕಕ್ಕೆ ಜಾಗವೇನೋ ನೀಡಿದ್ದಾರೆ ಆದರೆ  ಹೋಗಲು ರಸ್ತೆಯಿಲ್ಲ  ಸರ್ವೇ ಮಾಡಲು ಮನವಿ ಪತ್ರ ನೀಡಿದರು ಸ್ಪಂದಿಸದ ಭೂದಾಖಲೆಗಳ ಕಚೇರಿ  ರಾಮನಗರ ಅಂಗನವಾಡಿ ,  ಚಿಲ್ಕೆ ಕಾಡಿನ ಸಮಸ್ಯೆಗಳೆಲ್ಲವು ಸರ್ವೇ ನಡೆಸಿ ಜಾಗ ಗುರುತಿಸಿದ ನಂತರವಷ್ಟೇ ಇದಕ್ಕೆ ಪರಿಹಾರ ದೊರಕಿತು.

ಹೆದ್ದಾರಿ ಪ್ರಾಧಿಕಾರದವರೇನೋ ಸಭೆಗೆ ಹಾಜರಾಗಿದ್ದರು.
ಆದರೆ ಅವರ ಹಲವು ನ್ಯೂನ್ಯತೆಗಳನ್ನು  ಎಷ್ಟು ಸರಿಪಡಿಸುವರೋ ತಿಳಿದಿಲ್ಲ ಗ್ರಾಮಸ್ಥರೆಲ್ಲರೂ  ಕೆಂಡಾಮಂಡಲವಾಗಿದ್ದರು.

ಜೆ ಜೆ ಎಂ ಸಮಸ್ಯೆಗಂತೂ   ಅಧ್ಯಕ್ಷರಾದ  ರೇಖಾ ಗೋಪಿನಾಥ್ ಗರಂ  ಆದರು.
ಅಲ್ಲಲ್ಲಿ ಗುಂಡಿ ತೋಡಿ ಮನೆಗೆ ಹೋಗಲು ಜಾಗವಿಲ್ಲದಂತೆ ಮಾಡಿದ್ದಾರೆ.  ಆದಷ್ಟು ಬೇಗ  ಗುಂಡಿಯನ್ನು ಮುಚ್ಚಿ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು , ಅಧ್ಯಕ್ಷರು ಸ್ವಲ್ಪ ಖಾರವಾಗಿಯೇ ಮಾತನಾಡಿದರು.

ಕೆ ಎಸ್ ಆರ್ ಟಿ ಸಿ ಯವರಿಗೂ ಕ್ಲಾಸ್ 

ಹಾಸನ ಡಿಪೋ ಬಸ್ಸುಗಳನ್ನು ಬಾಗೆಯಲ್ಲಿ  ನಿಲುಗಡೆ ಮಾಡುವಂತೆ ಮನವಿ ಬೆಳಗ್ಗೆ ಹಾಗು ಸಂಜೆ ಎರಡು ಮೂರು ಹೆಚ್ಚುವರಿ ಬಸ್ಸುಗಳನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ  ನಿಯೋಜಿಸಬೇಕು ಎಂದು ಗ್ರಾಮಸ್ಥರು ತಿಳಿಸಿದರು ಎಷ್ಟು ಫಲಕಾರಿಯಾಗುವುದೋ ತಿಳಿದಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಹಲವು ಇಲಾಖೆಗಳ ಸಮಸ್ಯೆಗಳು ಚರ್ಚೆಯಾಗಲೆ  ಇಲ್ಲ

ಈ ಸಂದರ್ಭದಲ್ಲಿ  ಮಾಜಿ ಅಧ್ಯಕ್ಷರು  ಹಾಲಿ  ಶಾಸಕರು ರಾಕೇಶ್ ಪೂಜಾರಿ,  ಜಯಶಂಕರ್ ಕೆ.ಎಲ್. ಉಪಾಧ್ಯಕ್ಷರಾದ ಬಿ.ಆ‌ರ್  ಗಿರಿಜ ,  ಸವಿತಾ, ಶ್ರೀನಿವಾಸ್
ರಮೇಶ್, ಸತೀಶ್ ಎ., ಚಾರ್ಲ್ಸ್ , ಮೋಹಿನಿ, ಪುಷ್ಪ ಸಿಬ್ಬಂದಿ ವರ್ಗ , ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಪೂರ್ವ ತಯಾರಿಯೊಂದಿಗೆ  ಪೋಲಿಸ್  ಫೋರ್ಸ್ ಸಹ ಕರೆಸಲಾಗಿತ್ತು.

Related posts

ಆಲೂರುನಲ್ಲಿ ಕನ್ನಡ ರಾಜ್ಯೋತ್ಸವ

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

Wanted

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More