Blog

ರಾಯರ ಕೊಪ್ಪಲು ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

ಆಲೂರು: ತುರ್ತು ಮತ್ತು ಅಪಘಾತಗಳ ಸಂದರ್ಭಗಳಲ್ಲಿ ನಾವು ಮಾಡುವ ರಕ್ತದಾನದಿಂದ ಅದೆಷ್ಟೋ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಆಲೂರು ತಾಲೂಕು ರೆಡ್ ಕ್ರಾಸ್ ಸಭಾಪತಿಗಳಾದ ಕೆಎನ್ ಕಾಂತರಾಜು ತಿಳಿಸಿದರು.


ಆಲೂರು ತಾಲೂಕು ರೆಡ್ ಕ್ರಾಸ್ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ರಾಯರ ಕೊಪ್ಪಲು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತ ನಿಧಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಾಯರ ಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ  ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೇಷ್ಠ ದಾನಗಳಲ್ಲಿ ರಕ್ತದಾನ ಕೂಡ ಒಂದಾಗಿದ್ದು ನಾವು ಹಲವಾರು ವರ್ಷಗಳಿಂದ ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ಹಲವಾರು ಬಾರಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತೇವೆ ನಾವು ಇಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ ಇರುವ ಖಾಸಗಿ ರಕ್ತ ನಿಧಿ ಕೇಂದ್ರಗಳಿಗೆ ಮಾಹಿತಿ ನೀಡಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಿದ್ದೆವು. ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರವನ್ನು ಏರ್ಪಡಿಸಿದ್ದು ಇನ್ನು ಮುಂದೆ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಈ ಶಿಬಿರಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು


ರಾಯರ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾll ಸಾಗರ್ ಮಾತನಾಡಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕಳೆದ ಗುರುವಾರ ತಾಲೂಕು ಆಸ್ಪತ್ರೆಯಿಂದ ಕಾರ್ಯಕ್ರಮ ಮಾಡುವಂತೆ ಮಾಹಿತಿ ನೀಡಿದ್ದರು ಈ ವಿಚಾರವನ್ನು ಕೆ.ಎನ್ ಕಾಂತರಾಜುರವರ ಗಮನಕ್ಕೆ ತಂದಾಗ ಅವರು ಈ ಕಾರ್ಯಕ್ರಮವನ್ನು ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಮಾಡಲು ಸಲಹೆ ನೀಡಿದರು ಅದರಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವು ಆಯೋಜನೆಗೊಂಡಿದೆ ರಕ್ತದಾನ ಮಾಡುವುದರ ಉದ್ದೇಶ ಇನ್ನೊಂದು ಜೀವವನ್ನು ಉಳಿಸುವುದೇ ಆಗಿದೆ ಇತ್ತೀಚೇಗೆ ಕಳೆದ 2-3 ತಿಂಗಳ ಹಿಂದೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿತ್ತು ಅದರಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಹಾಸನ ಜಿಲ್ಲೆಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದಂತ ಸಂದರ್ಭದಲ್ಲಿ ನಮ್ಮ ಭಾಗದ ಸಾರ್ವಜನಿಕರು ನಮ್ಮ ಅಪ್ಪ,ಅಮ್ಮ,ಅಕ್ಕ,ತಂಗಿ,ಹೆಂಡತಿ,ಮಕ್ಕಳು ಹೀಗೆ ತಮ್ಮ ಸಂಬಂಧಿಕರು ಡೆಂಗ್ಯೂ ಇಂದ ಬಿಳಿ ರಕ್ತ ಕಣಗಳು ಕಡಿಮೆಯಾಗಿ ಪ್ಲೇಟೆಟ್ಸ್ 2-3 ಸಾವಿರಕ್ಕೆ ಬಂದಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ದಯಮಾಡಿ ರಕ್ತದ ವ್ಯವಸ್ಥೆ ಮಾಡಿಕೊಡಿ ಎಂದು ನನ್ನ ಬಳಿ ತಮ್ಮ ನೋವನ್ನು ಹಂಚಿಕೊಂಡ ಸಂದರ್ಭದಲ್ಲಿ ನಾನು ತಾಲೋಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕರೆ ಮಾಡಿ ತಕ್ಕಮಟ್ಟಿಗೆ ರಕ್ತದ ವ್ಯವಸ್ಥೆ ಮಾಡಿದ ಉದಾಹರಣೆಗಳಿವೆ.

ಅಂದರೆ ಇಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಏನು ಎಂಬುದು ತಿಳಿಯುತ್ತದೆ ಆದರೆ ಜನರಲ್ಲಿ ಒಂದು ಮನೋಭಾವನೆ ಇದೆ ರಕ್ತ ಕೊಟ್ಟರೆ ನಮ್ಮ ದೇಹದಲ್ಲಿರುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ ಇದನ್ನು ಅವರು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು  ಕಾರಣ ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 5 ಬಾರಿ ರಕ್ತದಾನ ಮಾಡಬಹುದು ಎಂದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ ಆದುದರಿಂದ ಸಾರ್ವಜನಿಕರು ಯಾವುದೇ ಅಂಜಿಕೆ ಇಲ್ಲದೆ, ಭಯವಿಲ್ಲದೆ,ನಿರಾತಂಕವಾಗಿ ರಕ್ತದಾನವನ್ನು ಮಾಡುವಂತೆ ಕರೆ ನೀಡಿದರು.


ಈ ಸಮಯದಲ್ಲಿ ಸಾರ್ವಜನಿಕರಿಂದ 250 ಮಿ.ಲೀ ನ 37 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ನಂತರ ಮಾತನಾಡಿದ ಹಾಸನ ಜಿಲ್ಲೆ, ಈಮ್ಸ್ ವೈದ್ಯರಾದ ಅಶ್ವತ್ ಮಾತನಾಡಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ 24 ಗಂಟೆಗಳ ಕಾಲ ಹಾಸನದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ದೊರೆಯುತ್ತದೆ ಇದನ್ನು ಸಾರ್ವಜನಿಕರು ರೋಗಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮಾತನಾಡಿದರು
ಈ ಸಂದರ್ಭದಲ್ಲಿ ತಾಲೂಕು  ರೆಡ್ ಕ್ರಾಸ್ ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ
ನವೀನ್ ಬೈರಾಪುರ , ಪದಾಧಿಕಾರಿಗಳಾದ ಶಶಿಧರ್ ಬೆಕ್ಕಡಿ,ರಘು ಧರ್ಮಣ್ಣ,ವೈದ್ಯಕೀಯ ಸಿಬ್ಬಂದಿಗಳಾದ ಡಾll ಪ್ರತೀಕ್ ಅಶ್ವಥ್,ಲೀಲಾವತಿ,ಭಾನುಮತಿ,ಹನುಮಂತ ಶುಶ್ರೂಷಕಿಯರಾದ ನೀಲಾಂಬಿಕೆ,ಶಿಲ್ಪ,ನಾಜಿಮಾ ಇತರರು ಉಪಸ್ಥಿತರಿದ್ದರು

Related posts

ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ವೈದ್ಯರು

Bimba Prakashana

ಮುಖ್ಯ ಮಂತ್ರಿಗಳ ಆಗಮನ -ಪೂರ್ವ ಭಾವಿ ಸಭೆ

Bimba Prakashana

ಗ್ರಾಮೀಣ ಪತ್ರಕರ್ತರಿಗೆ ಸವಲತ್ತು ನೀಡಿ – ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More