Blog

ಆಲೂರು ಹರ್ಷಿತ ಯೋಜನೆಯಿಂದ ತರಬೇತಿ ಶಿಬಿರ

ಆಲೂರು ತಾಲೂಕಿನಲ್ಲಿ ಹರ್ಷಿತ ಆಲೂರು ಯೋಜನೆ ವತಿಯಿಂದ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ 90 ನಿರುದ್ಯೋಗಿ ಅಭ್ಯರ್ಥಿಗಳಿಗೆ ಪಾರಂಪರಿಕ ಕೌಶಲ್ಯ ತರಬೇತಿ ಕಾರ್ಯಕ್ರಮವಾದ ಹ್ಯಾಂಡ್ ಎಂಬ್ರಾಯ್ಡರಿ ತರಬೇತಿ ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತ ನಾಯಕ್ ಅವರು ಚಾಲನೆ ನೀಡಿ ಮಾತನಾಡಿ, ಯುವಜನರಿಗೆ ಕೌಶಲ್ಯ ತರಬೇತಿಯ ಮಹತ್ವ, ಸ್ವಯಂ ಉದ್ಯೋಗದ ಅವಕಾಶಗಳು ಹಾಗೂ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಕೌಶಲ್ಯ ತರಬೇತಿಯ ಮೂಲಕ ನಿರುದ್ಯೋಗಿ ಯುವಕ–ಯುವತಿಯರು ಆತ್ಮನಿರ್ಭರರಾಗುವಂತೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕೌಶಲ್ಯಾಧಿಕಾರಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶುಭಾಶಯ ಕೋರಿದರು. ನಂತರ ಅಧ್ಯಕ್ಷರು ತರಬೇತಿ ಕೇಂದ್ರವನ್ನು ಭೇಟಿ ನೀಡಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿ ಅವರಿಗೆ ಉತ್ತೇಜನ ನೀಡಿದರು.

ಈ ಸಂದರ್ಭದಲ್ಲಿ ಹರ್ಷಿತ ಸಂಸ್ಥೆಯ ಅಧ್ಯಕ್ಷರಾದ ನಂಜಪ್ಪ ಶೆಟ್ಟಿಯವರು, ಕಾರ್ಯದರ್ಶಿಗಳಾದ ಶೈಲಜಾ, ಸಂಪನ್ಮೂಲ ವ್ಯಕ್ತಿಗಳಾದ ಹೇಮ, ಸಂಯೋಜಕರಾದ ನವೀನ್, ನವ್ಯ ಹಾಗೂ ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಬೇಲೂರುವಿನ ಹಲವು ರಸ್ತೆಯಲ್ಲಿ ಸಂಚಾರ ನಿಷೇಧ

Bimba Prakashana

ಚರಂಡಿಯಲ್ಲಿ ನೀರು ನಿಂತು ಹೆಚ್ಚಾದ ವಾಸನೆ

Bimba Prakashana

ಶಿಕ್ಷಕರಿಗೆ ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More