Blog

ವಳಲಹಳ್ಳಿಯಲ್ಲಿ ಶ್ರೀ ಗುರು ಶನೈಶ್ಚರ ಪೂಜೆ

ವಳಲಹಳ್ಳಿಯಲ್ಲಿ ಶ್ರೀ ಗುರು ಶನೈಶ್ಚರ ಸ್ವಾಮಿ 15ನೇ ವರ್ಷದ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ಜರುಗಿತು.

(ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರ ಸಮಾಗಮ – ವಿಶೇಷ ಪೂಜೆ, ಅನ್ನಸಂತರ್ಪಣೆ, ಭಕ್ತಿಗೀತೆಗಳ ಕಾರ್ಯಕ್ರಮ.)


ಸಕಲೇಶಪುರ:ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಓಂ ಶ್ರೀ ಗುರು ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 6ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ ನಡೆಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಮಾರ್ಚ್ 7ರಂದು ಗಂಗಾ ಪೂಜೆ, ನವಗ್ರಹ ಪೂಜೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿಸಲ್ಪಟ್ಟವು. ಬಳಿಕ ಮಹಾಮಂಗಳಾರತಿ ನಡೆಸಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಪ್ರಶಾಂತ್ ಸ್ವಾಮಿಯವರು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳ ಜೊತೆಗೆ ಹೊರರಾಜ್ಯಗಳಿಂದಲೂ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಸೇವಾ ಸಮಿತಿಯವರು ಉತ್ತಮ ವ್ಯವಸ್ಥೆಯೊಂದಿಗೆ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.


ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ಉತ್ತಮ ಅನ್ನದಾಸೋಹ, ಸ್ವಚ್ಛತೆ ಹಾಗೂ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಜಾತ್ರೆಯ ಅಂಗವಾಗಿ ಸಂಜೆ ಧಾರ್ಮಿಕ ಉಪನ್ಯಾಸಗಳು ಹಾಗೂ ಅಪ್ಪು ಇವೆಂಟ್ಸ್ ವತಿಯಿಂದ ಭಕ್ತಿಗೀತೆಗಳ ಕಾರ್ಯಕ್ರಮವೂ ನಡೆಯಿತು. ಈ ಕಾರ್ಯಕ್ರಮಗಳು ಭಕ್ತರ ಮನಸ್ಸನ್ನು ಭಕ್ತಿಪರವಶಗೊಳಿಸಿದವು.

ಭಕ್ತರ ಭಾರೀ ಸಮಾಗಮದ ನಡುವೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.

Related posts

ನಿಜಲಿಂಗಪ್ಪ ಮೃತ್ಯು – ಪತ್ರಕರ್ತರ ಶ್ರದ್ಧಾಂಜಲಿ

Bimba Prakashana

ನವರಾತ್ರಿ ಮಹೋತ್ಸವ

Bimba Prakashana

ಹುಟ್ಟುಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More