Blog

ಹಾನ್ ಬಾಳು ಚಿಕ್ಕಿ ಹಬ್ಬ

ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ – ದೀಪಾವಳಿ ಚಿಕ್ಕಿ ಹಬ್ಬ – 4 ದಿನದ ವಿಶೇಷತೆ
ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ ಮಳಿಗೆ, ಗುಲಗಳಲೆ, ಸಕಲೇಶಪುರ.
ದಿನಾಂಕ: 17-27 ಅಕ್ಟೋಬರ್ 2025.

ವಿಶೇಷ ಆಕರ್ಷಣೆ:
ಕೈತುಂಬ ಮೂಡಿದ ಚಿತ್ತಾರ – ಮನಸ್ಸಿನ ತುಂಬಾ ಆನಂದ.

ದಿನ 4: 20/10/25 ಸೋಮವಾರ:
“ಕೇವಲ ಕಡಲೆ ಮಿಠಾಯಿ”ನಾ ಎಂದು ಕಡೆಗಣಿಸುವ ಕಾಲಘಟ್ಟದಲ್ಲಿ ಅದೇ ಉತ್ಪನ್ನವನ್ನು ಮುನ್ನೆಲೆಗೆ ತಂದು ಅದನ್ನೇ ಉದ್ಯಮವನ್ನಾಗಿಸಿ  ಸಕಲೇಶಪುರದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಿ ಸತತ ಪರಿಶ್ರಮದಲ್ಲಿ ಜನಪ್ರಿಯತೆ ಪಡೆದ ಹಾನ್ ಬಾಳ್ ಚಿಕ್ಕಿ ತನ್ನ ದೀಪಾವಳಿ ಚಿಕ್ಕಿ ಹಬ್ಬದ ವಾರಾಂತ್ಯದ 3ನೆಯ ದಿನವನ್ನು ಯಶಸ್ವಿಯಾಗಿ ನಿನ್ನೆ ಪೂರೈಸಿತು. ಜನ ಜಂಗುಳಿಯ ನಿಭಾವಣೆ, ಬೆಣ್ಣೆ ಚಕ್ಕುಲಿ, ವಿವಿಧ ಬಗೆಯ ಚಿಕ್ಕಿಗಳು ಜನರ ಪ್ರಶಂಸೆಗೆ ಪಾತ್ರವಾದವು.

4ನೆಯ ದಿನವಾದ ಇಂದು ಜನರ ಮೆಚ್ಚುಗೆಗೆ ಪಾತ್ರವಾದದ್ದು ಆಕರ್ಷಣೀಯವಾಗಿ ಮೂಡಿಬರುತ್ತಿರುವ ಮದರಂಗಿ (mehandi). ನಮ್ಮ ಸಕಲೇಶಪುರ ಸ್ಥಳೀಯ ಪ್ರತಿಭೆ ಶಿಲ್ಪಾ ಮತ್ತು ಅವರ ತಂಡರವರ ಪರಿಶ್ರಮ ಅವರ್ಣನೀಯ. ಚಿಕ್ಕಿ ಹಬ್ಬದ ಜನನಿಬಿಡ ಪರಿಸ್ಥಿತಿಯಲ್ಲೂ ತಮ್ಮ ಕಾರ್ಯದಲ್ಲಿ ಸ್ವಲ್ಪವೂ ಲೋಪಬಾರದಂತೆ ನೂರಾರು ಮಹಿಳೆಯರು ಮತ್ತು ಮಕ್ಕಳ ಕೈಗಳಿಗೆ ಅತ್ಯಾಕರ್ಷಣೀಯವಾದ ಮದರಂಗಿ ಚಿತ್ರಣವನ್ನು ಚಿತ್ತಾರವಾಗಿಸುತ್ತಿದ್ದಾರೆ.

ಕೆಲವೇ ಕೆಲವು ನಿಮಿಷಗಳಲ್ಲಿ ಕೈತುಂಬ ಚಿತ್ತಾರ ಮೂಡಿಸಿ ನಗುಮೊಗದೊಂದಿಗೆ ಗ್ರಾಹಕರ ಮನಸ್ಸು ಗೆಲ್ಲುವ ಈ ತಂಡ ಎಸ್ಪಿ ರೋಡ್, ಕಮಲ್ ದೇವ್ ಹಾಸ್ಪಿಟಲ್ ಪಕ್ಕ ಇರುವ ಸಿಂಚನ್ ಸ್ಟೈಲಿಶ್ ಬ್ಯೂಟಿ ಪಾರ್ಲರ್, ಎಸ್ ಎಸ್ ಟ್ಯಾಟೂ ಎಂಬ ಸಂಸ್ಥೆ ಯನ್ನು ಹೊಂದಿದ್ದಾರೆ. ಮೇಕ್ ಓವರ್, ಹೇರ್ ಕಟ್, ಟ್ಯಾಟೂ, ಫೇಶಿಯಲ್ ನಲ್ಲಿ ಸ್ಪೆಷಲಿಸ್ಟ್ ಆಗಿರುವ ಇವರನ್ನು ಹಾನ್ ಬಾಳ್ ಚಿಕ್ಕಿ ತಂಡ ಅಭಿನಂದಿಸುತ್ತದೆ. ಇವರ ಪರಿಶ್ರಮದಲ್ಲಿ ಉಚಿತವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತ್ವರಿತವಾಗಿ ಮೂಡಿಬಂದ ಕೆಲವು ಚಿತ್ತಾರಗಳನ್ನು ನೋಡಿ ಸಂಭ್ರಮಿಸೋಣ.

Related posts

ಪಾಳ್ಯದ ಯಶವಂತರಿಗೆ ಪ್ರಶಸ್ತಿ ನೀಡಿದ ರಾಜ್ಯ ಸರಕಾರ

Bimba Prakashana

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana

ಛಾಯಾಗ್ರಾಹಕರ ಮೇಲೆ ಹಲ್ಲೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More