Blog

ಹಾನು ಬಾಳುನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ವರದಿ ರಾಣಿ ಪ್ರಸನ್ನ

ಸಕಲೇಶಪುರದಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿಯ ಲಾಭ ಸರ್ಕಾರಕ್ಕಿದೆ.  ಆದ್ದರಿಂದ  ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನವನ್ನು ನೀಡುವ ನಿಟ್ಟಿನಲ್ಲಿ   ಸಹಕಾರ ನೀಡಬೇಕು. ಇಲಾಖಾ ವತಿಯಿಂದ  ಸರ್ಕಾರದ ಗಮನಕ್ಕೆ ತರಬೇಕು.ಈ ನಿಟ್ಟಿನಲ್ಲಿ  ನನ್ನ ಸಂಪೂರ್ಣ ಸಹಕಾರ ಇರುತ್ತದೆ 

—ಶಾಸಕ ಸಿಮೆಂಟ್ ಮಂಜು

ಕಾರ್ಯಕ್ರಮಕ್ಕೂ ಮೊದಲು ದೇವಾಲದಕೆರೆ  ದೇವಾಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  ಇದರಲ್ಲಿ ಬೈಕ್ ರೈಡರ್ಸ್ ಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಹಾನುಬಾಳುವಿನಲ್ಲಿ  ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮಪಂಚಾಯತಿ ವ್ಯಾಪ್ತಿಯ ಪೆಬ್ಬಲ್ಸ್ ಬೀನ್ ರೆಸಾರ್ಟ್ ನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ, ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಸಂಘ ಸಕಲೇಶಪುರ ತಾಲ್ಲೂಕು ಹಾಸನ ಜಿಲ್ಲೆ ರವರ ಸಂಯುಕ್ತ ಆಶ್ರಯದಲ್ಲಿ 2024ನೇ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಯನ್ನು ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು  ಹೋಮ್ ಸ್ಟೇ ಹಾಗು ರೆಸಾರ್ಟ್ ಮಾಲಿಕರು ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವಲ್ಲಿ ಹೆಚ್ಚಿನ ಶ್ರಮವನ್ನು ಪಡುತ್ತಿದ್ದಾರೆ. ಸಕಲೇಶಪುರದ ಅರಣ್ಯ ಇಲಾಖೆ ಅವರು ಸಹ  ಪ್ರವಾಸೋದ್ಯಮವನ್ನು  ಅಭಿವೃದ್ದಿ ಪಡಿಸುವಲ್ಲಿ ಸಹಕರಿಸಬೇಕು.  ಮುಂದಿನ ದಿನಗಳಲ್ಲಿ  ಆಚರಿಸುವ  *ಸಕಲೇಶಪುರ ವೈಭವ* ಏನು ಕಾರ್ಯಕ್ರಮವನ್ನು ಮಾಡುತ್ತಿದ್ದೀರಾ ಆ ಕಾರ್ಯಕ್ರಮಕ್ಕೆ ಉನ್ನತ ಅಧಿಕಾರಿಗಳನ್ನು, ಸಚಿವರನ್ನು , ಮಂತ್ರಿಗಳನ್ನು  , ಉನ್ನತ ಮಟ್ಟದ ಅರಣ್ಯ ಅಧಿಕಾರಿಗಳನ್ನು,  ಆಹ್ವಾನಿಸಿ  ನಮ್ಮ ಸಕಲೇಶಪುರದ ಪ್ರವಾಸೋದ್ಯಮದ ಸಮಸ್ಯೆಗಳನ್ನು  ಮುಂದಿಟ್ಟು  ಪರಿಹರಿಸುವ ಕುರಿತು ಚರ್ಚಿಸೋಣ ಎಂದರು .

ಪ್ರವಾಸೋದ್ಯಮದ  ಮತ್ತು ಶಾಂತಿಯ ಮಹತ್ವ ಹಾಗು ವಿಶೇಷ ಉಪನ್ಯಾಸಗಳ ಮೂಲಕ ಪ್ರವಾಸೋದ್ಯಮವನ್ನು ಹೇಗೆ ಬೆಳೆಸಬೇಕು.  ಪ್ರವಾಸಿಗರಿಗೆ  ನಮ್ಮ ಆತಿಥ್ಯ ಸಂರಕ್ಷಣೆ ತುಂಬಾ ಅಗತ್ಯವಾಗಿರುತ್ತದೆ ಇತರ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ನಮ್ಮ ಪ್ರಯತ್ನವೂ ಸಹ ಇರುತ್ತದೆ ಎಂದು  ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕರು  ತಿಪ್ಪೇಸ್ವಾಮಿ ತಿಳಿಸಿದರು.

ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಶತ್ರುವಾಗಿ ಕಾಡುತ್ತಿದೆ. ಸುಮಾರು 15ಕ್ಕೂ  ಹೆಚ್ಚು ಪ್ರವಾಸಿ ತಾಣಗಳಿಗೆ ಪ್ರವೇಶ ಇಲ್ಲದಂತೆ ಮಾಡಿದ್ದಾರೆ. ಕೇವಲ ಶೇ 30 ರಷ್ಟು ಪ್ರವಾಸಿಗರು ಮಾತ್ರ ಆಗಮಿಸುತ್ತಿದ್ದಾರೆ, ಇದಕ್ಕೆ ಕಾರಣ  ಭೂಕುಸಿತದ ಕುರಿತು ಬೆಂಗಳೂರು ಮಾಧ್ಯಮಗಳು ಬಿಂಬಿಸಿದ ರೀತಿ .  ಹಲವು ರೆಸಾರ್ಟ್ ಗಳಿಂದಲೇ ಗುಡ್ಡ ಕುಸಿತಕ್ಕೆ ಕಾರಣ ಪ್ರವಾಸೋದ್ಯಮಕ್ಕೆ ಪೆಟ್ಟು ಕೊಟ್ಟಿದೆ. ಹಾಗೆಯೇ ಅಧಿಕಾರಿಗಳು, ಮಂತ್ರಿಗಳು ,  ಕಾರ್ಯಕ್ರಮಕ್ಕೆ ಹಾಜರಾಗದಿಲ್ಲದಿರುವುದು ನಮಗೆ ಬೇಸರ ತಂದಿದೆ ಎಂದು ರೆಸಾರ್ಟ್  ಮಾಲೀಕರ ಸಂಘದ ಅಧ್ಯಕ್ಷರು ಮಸ್ತಾರೆ ಲೋಕೇಶ್ ಹೇಳಿದರು.

ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್  ಮಾತನಾಡಿ ಹೊರಗಿನಿಂದ ಬಂದ ಉದ್ಯಮಿಗಳಿಂದ ಪರಿಸರ ಹಾಳಾಗುತ್ತಿದೆಯೇ ಹೊರತು ನಮ್ಮ ಸಕಲೇಶಪುರ ಜನತೆಯಿಂದಲ್ಲ  ಸಕಲೇಶಪುರದಲ್ಲಿ ಹಲವಾರು ಸಮಸ್ಯೆಗಳಿವೆ  ಆನೆ ಮತ್ತು ಮಾನವ ಸಂಘರ್ಷ, ಇದರಿಂದ ರೈತರಿಗೆ  ಹೆಚ್ಚಾಗಿ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.

ಹೋಂಸ್ಟೇ  ಮಾಲೀಕರ ಸಂಘ ಅಧ್ಯಕ್ಷರಾದ ಕುಮಾರಸ್ವಾಮಿ ಅವರು ಮಾತನಾಡಿ ಪ್ರವಾಸೋದ್ಯಮದಿಂದ ಮಾತ್ರ ಎಲ್ಲಾ ಗ್ರಾಮಗಳು ತಾಲ್ಲೂಕುಗಳು  ಅಭಿವೃದ್ದಿ ಕಾಣಲು ಸಾಧ್ಯ  ಈ ನಿಟ್ಟಿನಲ್ಲಿ ಸರಕಾರವು ಸಹ  ಯೋಚಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೆಸಾರ್ಟ್ ಮಾಲಿಕರ ಸಂಘದ ಅಧ್ಯಕ್ಷರಾದ ಮಸ್ತಾರೆ ಲೋಕೇಶ್, ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ, ತಿಪ್ಪೇಸ್ವಾಮಿ ಹಾಸನ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಮಾಜಿ ಶಾಸಕರಾದ ಎಚ್ ಎಮ್ ವಿಶ್ವನಾಥ್, ರೆಸಾರ್ಟ್ ಮಾಲೀಕರ ಸಂಘದ ಕಾರ್ಯದರ್ಶಿ ಕಾಡುಮಕ್ಕಿ ಹರೀಶ್, ಹಾನುಬಾಳು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸಂತೋಷ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.

Related posts

ಮಾರನ ಹಳ್ಳಿ ಗ್ರಾಮದಲ್ಲಿ ನಿಷ್ಕ್ರಿಯ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕ

Bimba Prakashana

ಸಕಲೇಶಪುರ ಮಾಧ್ಯಮ ಪತ್ರಕರ್ತರ ಸಂಘದ ಕ್ಯಾಲೆಂಡರ್ ಬಿಡುಗಡೆ

Bimba Prakashana

ಅಕ್ಟೋಬರ್ 26ರಂದು ಕೆಂಚಾಂಬ ಚಿಕ್ಕ ಜಾತ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More