Blog

ಸಕಲೇಶಪುರದಲ್ಲಿ ರಕ್ತದಾನ ಶಿಬಿರ

ವರದಿ ರಾಣಿ ಪ್ರಸನ್ನ

ಸಕಲೇಶಪುರದಲ್ಲಿ ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷವಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಿದ  ಲಯನ್ಸ್ ಸಂಸ್ಥೆ ಹಾಗು ಬಿಜೆಪಿ ವತಿಯಿಂದ ರಕ್ತದಾನ ಶಿಬಿರ. ನೂರಕ್ಕೂ ಹೆಚ್ಚು ಜನ  ಭಾಗವಹಿಸಿದ್ದರು.

ಸಕಲೇಶಪುರದ ಲಯನ್ಸ್ ಹಾಲ್ ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಲಯನ್ಸ್ ಸಂಸ್ಥೆ ಮತ್ತು ಭಾರತೀಯ ಜನತಾ ಪಾರ್ಟಿ ಸಂಯುಕ್ತಾಶ್ರಯದಲ್ಲಿ ಇಂದು ಸ 26 ಗುರುವಾರದಂದು  ಹಮ್ಮಿಕೊಂಡಿದ್ದರು.

ಒಂದು ಜೀವವ ಉಳಿಸುವ ರಕ್ತ ಸಂಗ್ರಹಣೆಗಾಗಿ ಸ್ವಯಂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಹಲವಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ರಕ್ತದಾನವನ್ನು ಸ್ವಯಂ ಪ್ರೇರಿತರಾಗಿ ಮಾಡಿದರು.

ರಕ್ತದಾನ ಶಿಬಿರವನ್ನು ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ಶಾಸಕರಾದ ಸಿಮೆಂಟ್ ಮಂಜುನಾಥ್ , ಲಯನ್ಸ್ ಸಂಸ್ಥೆ ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ,  ಬಿಜೆಪಿ ಮಂಡಲ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಡಾ. ನಾಗಲಕ್ಷ್ಮೀ, ಲಯನ್ಸ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷರಾದ ರಾಬಿ ಸೋಮಯ್ಯ, ಲಯನ್ಸ್ ರಘುಪಾಳ್ಯ, ಲಯನ್ಸ್ ಕಾರ್ಯದರ್ಶಿ ವೆಂಕಟೇಶ್, ಬಿಜೆಪಿ ಹಿರಿಯ ಮುಖಂಡ ಬ್ಯಾಕರವಳ್ಳಿ ಜಯಣ್ಣ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೊಮ್ಮನಕೆರೆ ಮಧು,ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ತಾಲೂಕು ಅಧ್ಯಕ್ಷೆ ಬಬಿತಾ ವಿಶ್ವನಾಥ್ ಸೇರಿದಂತೆ ಮುಂತಾದವರು ಹಾಜರಿದ್ದರು.

Related posts

ದೇಶದ ವ್ಯವಸ್ಥೆಯನ್ನು ಬಲ ಪಡಿಸಲು ಪತ್ರಿಕೆಗಳ ಪಾತ್ರ ಮಹತ್ತರವಾದುದು – ಶಾಸಕ ಶಿವಲಿಂಗೆ ಗೌಡರು

Bimba Prakashana

ಹೊಯ್ಸಳ ಕನ್ನಡ ಸೇನೆಯಿಂದ ಬೆಳ ಗೋಡುನಲ್ಲಿ ವಾಹನ ಮೆರವಣಿಗೆ

Bimba Prakashana

ವರ್ಧಮಾನ್ ಎಲೆಕ್ಟ್ರಾನಿಕ್ ನಲ್ಲಿ ಆಫರೋ ಆಫರ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More