Blog

ಮರಳು ಮಾಫಿಯಾ – ತಹಸೀಲ್ದಾರ್ ಪೊಲೀಸ್ ಜಂಟಿ ದಾಳಿ

ಸಕಲೇಶಪುರದ ಹೆನ್ನಲಿ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ಹಾಗೂ ಅದರ ಶೇಖರಣಾ ಘಟಕದ ಮೇಲೆ ಕಂದಾಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಸುಮಾರು ಏಳು ಟಿಪ್ಪರ್ ಲಾರಿಗಳಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ.


ಸಕಲೇಶಪುರದ ಹೆನ್ನಲಿ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳನ್ನು ಶೇಖರಣೆ ಮಾಡಿ ಇರಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಸಿಲ್ದಾರ್ ಸುಪ್ರೀತ್ ಅವರ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿತು. .


ದಾಳಿಯ ಸಂದರ್ಭದಲ್ಲಿ  ಅಕ್ರಮವಾಗಿ ಶೇಖರಿಸಲಾಗಿದ್ದ ಅಪಾರ ಪ್ರಮಾಣದ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಏಳು ಟಿಪ್ಪರ್ ಮರಳನ್ನು ತಾಲೂಕು ಕಚೇರಿಯ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಇನ್ಸೆಕ್ಟ‌ರ್ ವನರಾಜು, ಕಂದಾಯ ನಿರೀಕ್ಷಕ ದಾನ್ ಪ್ರಕಾಶ್, ಗ್ರಾಮ ಆಡಳಿತಾಧಿಕಾರಿ ಶಿಲ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

ಸಕಲೇಶಪುರದಲ್ಲಿ ದರೋಡೆ ತಂಡ

Bimba Prakashana

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana

ವನಗೂರುನಲ್ಲಿ ಕನ್ನಡ ರಾಜ್ಯೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More