ಆಲೂರು : ಕಟ್ಟೆ ಗದ್ದೆ ನಾಗರಾಜ್ ಹುಟ್ಟುಹಬ್ಬ : ಅಭಿಮಾನಿಗಳಿಂದ ತಾಲೂಕಿನಲ್ಲಿ ಅದ್ದೂರಿ ಆಚರಣೆ.
ತಾಲೂಕಿನ ಮಗ್ಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಮಾಜ ಸೇವಕ ಬಿಜೆಪಿ ಯುವ ಮುಖಂಡ ಕಟ್ಟೆ ಗದ್ದೆ ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ಕಟ್ಟೆಗದ್ದೆ ನಾಗರಾಜ್‍ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಶುಭ ಹಾರೈಸಲಾಯಿತು.
ಕೆ ಹೊಸಕೋಟೆ ಹೋಬಳಿಯ ರೈತ ಬಳಗದ ವತಿಯಿಂದ, ಬಾಳ್ಳುಪೇಟೆ ಪೇಟೆಯ ಸ್ನೇಹಿತರ ಬಳಗದ ವತಿಯಿಂದ ಪಾಳ್ಯ ಗ್ರಾಮ, ಆಲೂರಿನ ಗೆಳೆಯರ ಬಳಗದ ವತಿಯಿಂದ,ಕಟ್ಟೆಗದ್ದೆ ಗ್ರಾಮ, ಜಮ್ಮನಹಳ್ಳಿ, ಮಾರನಾಯಕನಹಳ್ಳಿ, ಕಾಡ್ಲೂರು, ಕರಿಗುಡ್ಡನಹಳ್ಳಿ ಗ್ರಾಮದಲ್ಲಿ ಪಟಾಕಿಸಿ ಶುಭ ಹಾರೈಸಿದರು.
ಸಮಾಜ ಸೇವಕ ಬಿಜೆಪಿ ಯುವ ಮುಖಂಡ ಕಟ್ಟೆ ಗದ್ದೆ ನಾಗರಾಜ್ ಮಾತನಾಡಿ ನನ್ನ ಮೇಲೆ ಇಷ್ಟೊಂದು ಪ್ರೀತಿ ವಿಶ್ವಾಸ ಅಭಿಮಾನವಿಟ್ಟು ತಾಲೂಕಿನಲ್ಲೆಡೆ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೀರಾ ಎಂದರೆ ನಿಮ್ಮೆಲ್ಲರ ಪ್ರೀತಿ ಅಭಿಮಾನವನ್ನು ನಾನು ನನ್ನ ಕೊನೆಯ ಉಸಿರಿರುವ ತನಕ ಚಿರಋಣಿಯಾಗಿರುತ್ತೇನೆ ಎಂದರು.
ನಾವೆಲ್ಲರೂ ಒಟ್ಟಾಗಿ ಸೇರಿ ಒಂದಾಗಿ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸೋಣ, ಬಡವರ,ರೈತರ, ಪರವಾದಂತ ಕೆಲಸಗಳಿಗೆ ಮುಂದೆ ನಿಂತು ಹೋರಾಟ ಮಾಡೋಣ. ಪಕ್ಷಾತೀತವಾಗಿ ಜಾತ್ಯಾತೀತವಾಗಿ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಕಟ್ಟೆ ಗದ್ದೆ ನಾಗರಾಜ ಹುಟ್ಟು ಹಬ್ಬದ ಪ್ರಯುಕ್ತ ಹಾಸನದ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮಿಯವರ ಸ್ವಾಮಿ ಅವರ ಆಶೀರ್ವಾದ, ಕಾಜುರವಳ್ಳಿ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಕ ಶ್ರೀ ಸಂಸ್ಥಾನ ಹಿರೇಮಠದ ಶ್ರೀ. ಷ. ಬ್ರ. ಸದಾಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ, ಕೊಡ್ಲಿಪೇಟೆಯ ಕಿರಿ ಕೊಡ್ಲಿ ಮಠದ ಶ್ರೀ ಶ್ರೀ ಸದಾಶಿವ ಸ್ವಾಮಿ ಅವರ ಆಶೀರ್ವಾದ ಪಡೆದರು.



