ಆಲೂರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಾಲಾ ಶಿಕ್ಷಣ ಇಲಾಖೆ, ಆಲೂರು ತಾಲ್ಲೂಕು,ಘೋಷವಾಕ್ಯ ” ಸಮಗ್ರ ಸುಸ್ಥಿರ ಭವಿಷ್ಯಕ್ಕಾಗಿ ವಿಶ್ವೇಷ ಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ಹಾಗೂbವಿಶ್ವ ವಿಶೇಷ ಚೇತನರ ದಿನ ಮತ್ತು ಪರಿಸರ ನಿರ್ಮಾಣ ಕಾರ್ಯಕ್ರಮವನ್ನು ಬೈರಾಪುರ ಸರ್ಕಾರಿ ಹಿರಿಯ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನೆರವೇರಿಸಲಾಯಿತು.
ನಂತರ ಮಾತನಾಡಿದ ನವೀನ್ ಬೈರಾಪುರ ವಿಶೇಷ ಚೇತನರು ಕೂಡಾ ಮನುಷ್ಯರು, ಅವರಿಗೂ ಭಾವನೆಗಳಿವೆ. ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವಡೆ ಕಾಣಿಸುತ್ತಿದೆ. ಕೆಲವಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು, ವಿಶೇಷ ಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ,ಆರ್ಥಿಕ,ಶೈಕ್ಷಣಿಕ,ಮಾಹಿತಿ ತಂತ್ರಜ್ಞಾನ,ಮನೋರಂಜನೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿಡಲಾಗಿದೆ. ಆದುವೇ ಡಿಸೆಂಬರ್ 03ರಂದು ಜಗತ್ತಿನೆಲ್ಲೆಡೆ ವಿಶ್ವ ವಿಶೇಷ ಚೇತನರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಮಾತನಾಡಿದಲ್ಲದೆ
ಮೂಲತಃ ಈ ದಿನವನ್ನು ಆರಂಭಿಸಿದ್ದು ವಿಶ್ವಸಂಸ್ಥೆ 1992ರಲ್ಲಿ ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಈ ದಿನದಂದು ಜಗತ್ತಿನಲ್ಲಿರುವ ಆನೇಕ ವಿಶೇಷ ಚೇತನರ ಯಶೋಗಾಥೆಗಳನ್ನು ಹಂಚಿಕೊಳ್ಳಲಾಗುತ್ತದೆ.
ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ‘ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಸಮುದಾಯ, ಪೋಷಕರು ಮತ್ತು ಅವರ ಸುತ್ತಮುತ್ತಲಿನ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ಈ ನಿಟ್ಟಿನಲ್ಲಿ ವಿಶೇಷ ಚೇತನ ಮಕ್ಕಳನ್ನು ಗುರುತಿಸುವುದು, 6 ರಿಂದ 18ರ ವಯೋಮಾನದ ಎಲ್ಲಾ ಮಕ್ಕಳಿಗೆ ಶೈಕ್ಷಣಿಕ ಅವಕಾಶ ನೀಡುವುದು, ನ್ಯೂನ್ಯತೆ ವಿಧಗಳು, ವಿವಿಧ ಸೌಲಭ್ಯಗಳು, ಶಾಲಾ ಕಾಲೇಜು ಮುಖ್ಯಸ್ಥರು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡುವುದರ ಮೂಲಕ ಜನಜಾಗೃತಿ ಮತ್ತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಮಾತನಾಡಿದ ವಿಶ್ವ ವಿಶೇಷ ಚೇತನದ ಅಧಿಕಾರಿಗಳಾದ ಪರಮೇಶ್ ಮಾತನಾಡಿ ದಿವ್ಯಾಂಗ ವ್ಯಕ್ತಿಗಳ ಹಕ್ಕು ಅಧಿನಿಯಮ 2016 ರ ಪ್ರಕಾರ 21 ವಿವಿಧ ನ್ಯೂನ್ಯತೆಗಳು ಪೂರ್ಣ ದೃಷ್ಟಿದೋಷ.ಭಾಗಶಃ ದೃಷ್ಟಿದೋಷ. ಶ್ರವಣ ನ್ಯೂನ್ಯತೆ ಮಾತು ಮತ್ತು ಸಂವಹನ ತೊಂದರೆ.
ದೈಹಿಕ ನ್ಯೂನ್ಯತೆ.. ಮಾನಸಿಕ ಖಿನ್ನತೆ
ನಿರ್ಧಿಷ್ಟ ಕಲಿಕಾ ನ್ಯೂನ್ಯತೆಮೆದುಳುವಾತ ಸ್ವಲೀನತೆ (ಆಟಿಸಂ).ಬಹು ಅಂಗವಿಕಲತೆ
ಕುಷ್ಠರೋಗದಿಂದ ಗುಣಮುಖರಾದವರು
ಬುದ್ದಿಮಾಂದ್ಯತೆ.ಮಾಂಸಖಂಡಗಳ ದುರ್ಬಲತೆ.ದೀರ್ಘಕಾಲದ ನರಸಂಬಂಧಿತ ಸ್ಥಿತಿ.ಮಲ್ಟಿಪಲ್ ಫೀರೋಸಿಸ್
ತಲಸೇಮಿಯ.ಹಿಮೋಫಿಲಿಯಾ.ಸಿಕಲ್‌ಸೆಲ್ ಡಿಸೀಸಸ್.ಆಸಿಡ್ ಅಟ್ಯಾಕ್ ವಿಕ್ಟಿಮ್ಸ್
ನಡುಕುರೋಗ (ಪಾರ್ಕಿನ್‌ಸನ್). ವಿವಿಧ ನ್ಯೂನತೆ ಇರುವವರು ದಯಮಾಡಿ ನಮ್ಮ ಇಲಾಖೆಗೆ ಬಂದು ಅರ್ಜಿಯನ್ನು ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಮಾತನಾಡಿದರು.
ವಿಶೇಷ ಚೇತನ ಮಕ್ಕಳಿಗೆ ಇರುವ ಸೌಲಭ್ಯಗಳ ಕುರಿತಾಗಿ ಮಾತನಾಡಿದ ಶಾಂತಮ್ಮ ನಮ್ಮಲ್ಲಿ ಮಕ್ಕಳಿಗೆ ಸಾರಿಗೆ ಭತ್ಯೆ* ಕ್ರೀಡೆ ಮತ್ತು ಕ್ಷೇತ್ರ ಭೇಟಿ (ಶೈಕ್ಷಣಿಕ ಪ್ರವಾಸ)ಬೆಂಗಾವಲು ಭತ್ಯೆಉಚಿತ ಫಿಜಿಯೋಥೆರಪಿ ವ್ಯವಸ್ಥೆ.10ನೇ ತರಗತಿ ಮಕ್ಕಳಿಗೆ ಪರೀಕ್ಷೆಯಲ್ಲಿ ಓದುಗರ /ಬರಹಗಾರರ ಸೌಲಭ್ಯ.ಹೆಣ್ಣುಮಕ್ಕಳ ವಿಶೇಷ ಭತ್ಯ* ಗೃಹಾಧಾರಿತ ಶಿಕ್ಷಣ ಕೆಳಮಹಡಿಯಲ್ಲಿ ಸೂಕ್ತ ಆಸನ ವ್ಯವಸ್ಥೆ ರೀಡರ್ ಭತ್ಯ ಶಾಲಾ ಸಿದ್ಧತಾ ಕೇಂದ್ರ,ಗ್ರೀನ್ ಸ್ಟಿಕ್ಕರ್ ಅಳವಡಿಕೆ ಉಚಿತ ವೈದ್ಯಕೀಯ ತಪಾಸಣೆ ಯುಡಿಐಡಿ ಕಾರ್ಡ್ ಸೌಲಭ್ಯ ಆರೈಕೆದಾರರಿಗೆ ಭತ್ಯೆ.ಸಾಧನ ಸಲಕರಣೆಗಳ ವಿತರಣೆ* ಪರಿಸರ ನಿರ್ಮಾಣ ಕಾರ್ಯಕ್ರಮ
* ನಿರಾಮಯ ಆರೋಗ್ಯ ವಿಮೆ ಮತ್ತು ಇತರೆ ಇಲಾಖೆ
ಸೌಲಭ್ಯಗಳುವಿದ್ಯಾರ್ಥಿ ವೇತನ. ಎಲ್ಲಾ ಸೌಲಭ್ಯಗಳು ಇವೆ ಎಂದು ಮಾತನಾಡಿದರು. ವಿಶೇಷ ಚೇತನರಿಗೆ ಎಲ್ಲರೂ ಸಹಾಯ ಮಾಡೋಣ ಸರ್ಕಾರ ಕೂಡ ವಿಶೇಷಚೇತನರ ಕ್ಷೇಮಾಭಿವೃದ್ಧಿಗೆ ವಿಶೇಷ ಸವಲತ್ತುಗಳನ್ನು ಒದಗಿಸುತ್ತಿದೆ.ಇವನ್ನೆಲ್ಲ ಸದುಪಯೋಗ ಪಡಿಸಿಕೊಂಡು ವಿಶೇಷಚೇತನರು ಸಹ ಸಾಮಾನ್ಯರಂತೆ ಸುಖ ಸಂತೋಷ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ . ಎಂದು ಮಾತನಾಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು, ರವಿಕುಮಾರ್. ಉದ್ಘಾಟನೆಯನ್ನು ದೈಹಿಕ ಪರಿವೀಕ್ಷಕ ಕರಿ ಬಸವರಾಜು ನೆರವೇರಿಸಿದರು. ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರು . ಶಿಕ್ಷಕರು ವಿಶೇಷವಾಗಿ ವಿಶೇಷ ಚೇತನ ಮಕ್ಕಳು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
