Blog

ಆಲೂರು ಜಾತ್ರೆ – ಪೂರ್ವ ಭಾವಿ ಸಭೆ



ಆಲೂರು: ಪಾರ್ವತಮ್ಮ ಬೆಟ್ಟ.ಭರತೂರು.ಅಡಿಬೈಲು ರಂಗನಾಥನ ಬೆಟ್ಟದ ಜಾತ್ರ ಅಂಗವಾಗಿ ಶಾಸಕರು  ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದರು.

ಈ ಸಭೆಯಲ್ಲಿ ಭಕ್ತಾಧಿಗಳಿಗೆ ಯಾವುದೇ ಅಡ್ಡಿಯಾಗದಂತೆ ಸೂಕ್ತ ಸೌಲಭ್ಯದಿಂದ ಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಸಮಿತಿಗೆ ಶಾಸಕರಾದ ಸಿಮೆಂಟ್ ಮಂಜು ಅವರು ಮನವಿಯನ್ನು ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾದ ಬಳಿಕ ಮಾತನಾಡಿದ ಶಾಸಕರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜನವರಿ 30 ರಂದು ಪಾರ್ವತಮ್ಮ ಬೆಟ್ಟದ ಜಾತ್ರೆ.ಜನವರಿ 31 ರಂದು ಭರತೂರು.ಪೆಬ್ರವರಿ 1 ರಂದು ಅಡಿಬೈಲು ಬೆಟ್ಟದ ಅದ್ದೂರಿಯಾಗಿ ಜಾತ್ರ ಮಹೋತ್ಸವ ನಡೆಯುತ್ತದೆ.

ಸಾವಿರಾರು ಭಕ್ತಾದಿಗಳು ಸೇರುವ ಮುಂಜಾಗೃತಿಯಾಗಿ ಅರಣ್ಯ ಇಲಾಖೆಯಿಂದ ಇಟಿಎಫ್ ತಂಡ ನಿಗಾವಹಿಸುವಂತೆ,ಆರಕ್ಷಕ ಇಲಾಖೆಯಿಂದ ಸೂಕ್ತ ಭದ್ರತೆ ಹಾಗೂ ಸಂಚಾರ ವ್ಯವಸ್ಥೆ,ಪಿಡ್ಲ್ಯೂಡಿ ಇಂದ ರಸ್ತೆ ಹಾಗೂ ಜಂಗಲ್ ದುರಸ್ಥಿ,ಕೆಇಬಿ ಯಿಂದ ವಿದ್ಯುತ್ ವ್ಯವಸ್ಥೆ,ಆರೋಗ್ಯ ಇಲಾಖೆಯಿಂದ ಆಂಬ್ಯಲೇನ್ಸ್ ಹಾಗೂ ಪ್ರಥಮ ಚಿಕಿತ್ಸಾ ತಂಡ ಹೀಗೆ ಹಲವಾರು ಇಲಾಖೆಯ ವತಿಯಿಂದ ಸುರಕ್ಷತೆಯಿಂದ ಭಕ್ತಾದಿಗಳು ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡುವಂತೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು,ದೇವಸ್ಥಾನದ ಸೇವಾ ಸಮಿತಿ ಸದಸ್ಯರು.ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು

Related posts

ತ್ವರಿತ ಕೆಲಸ ಮಾಡಿ – ಅಧಿಕಾರಿಗಳಿಗೆ ಶಾಸಕರ ಸೂಚನೆ

Bimba Prakashana

ಸರಕಾರಿ ಜಾಗ ಒತ್ತುವರಿ ಮಾಡಲು ಹೊರಟ ವಿಶ್ವ ಪ್ರೌಢ ಶಾಲೆ

Bimba Prakashana

ಪ್ರವಾಸೋದ್ಯಮ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More