Blog

ಬೀದಿ ಬದಿ ವ್ಯಾಪಾರಿಗಳ ಹಿತ ಕಾಪಾಡಲು ಬದ್ದ – ಶಾಸಕ ಸಿಮೆಂಟ್ ಮಂಜು



ಆಲೂರು: ಬೀದಿಬದಿ ವ್ಯಾಪಾರಿಗಳು ಶ್ರಮಜೀವಿಗಳಾಗಿದ್ದು ಬಿಸಿಲು,ಮಳೆ ಲೆಕ್ಕಿಸದೇ ಸ್ವಾಭಿಮಾನ ಬದುಕು ಕಟ್ಟಿಕೊಂಡಿದ್ದಾರೆ.ಅವರ ಸಮಸ್ಯೆಗೆ ಸ್ಪಂದಿಸುವುದು ಅವಶ್ಯಕ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು

ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಪಟ್ಟಣ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷಿನ್ ಅಭಿಯಾನದ ವತಿಯಿಂದ ನಡೆದ ಛತ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪುಟ್‌ಪಾತ್ ವ್ಯಾಪಾರಿಗಳು ಪಾದಚಾರಿ ಮಾರ್ಗ ಹಾಗೂ ರಸ್ತೆ ಅತಿಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ ಎಂಬ ಒತ್ತಡ ನನಗೆ ಬಂತು. ಆದರೆ, ನಿಮ್ಮ ಬದುಕಿಗೆ ತೊಂದರೆಯಾಗದಂತೆ ಮಾನವೀಯತೆ ದೃಷ್ಟಿಯಿಂದ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದೇವೆ.

ವ್ಯಾಪಾರಿಗಳು ಸ್ವಚ್ಛತೆಗೆ ಒತ್ತು ನೀಡಬೇಕು. ತಾವಿರುವ ಜಾಗವನ್ನು ಒತ್ತುವರಿ ಮಾಡಬಾರದು. ಶಾಶ್ವತ ಅಂಗಡಿಯ ಕಟ್ಟಡ ನಿರ್ಮಿಸದೆ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಅದಕ್ಕಾಗಿ, ವ್ಯಾಪಾರದ ಸ್ಥಳದಲ್ಲಿ ಪಟ್ಟಿ ಹಾಕಲಾಗುತ್ತದೆ. ಅದನ್ನು ಮೀರಿದರೆ ಕ್ರಮ ಖಚಿತ. ಹಾಗಾಗಿ ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗದಂತೆ ವ್ಯಾಪಾರ ನಡೆಸಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂತ ಹಂತವಾಗಿ ಹಲವು ಸವಲತ್ತುಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪ.ಪಂ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ,ವ್ಯಾಪಾರಿಗಳು ಮತ್ತು ವಾಹನ ಸವಾರರಿಗೆ
ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಅಲ್ಲಿ ಬೀದಿ ವ್ಯಾಪಾರಿಗಳು ನಿತ್ಯ ವ್ಯಾಪಾರ ವಹಿವಾಟು ನಡೆಸಲು ಸದ್ಯದಲ್ಲೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್,ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ,ನಗರ ಅಧ್ಯಕ್ಷ ಲೋಹಿತ್,ಎಸ್ಸಿ ಮೋರ್ಚಾ ಅಧ್ಯಕ್ಷ ಜೆಸಿಬಿ ಲೋಕೇಶ್,ನಂಜುoಡಪ್ಪ ದಡದಹಳ್ಳಿ.ನವೀನ್ ದಡದಹಳ್ಳಿ.ದೊರೆಗೌಡ ಹೊಸೂರು.ಪಟ್ಟಣ ಪಂಚಾಯಿತಿ ನಾಮ ನಿರ್ದೇಶಕ ಸದಸ್ಯರಾದ ರಮೇಶ್ ಹಳೆಯ ರಮೇಶ್ ಹಳೆಆಲೂರು,ನಾಗರಾಜ್ ಕ್ಯಾಂಟೀನ್,ಬಿಜೆಪಿ ಮುಖಂಡರಾದ ಹೇಮಂತ್,ಹರೀಶ್ ಸೇರಿದಂತೆ ಮುಂತಾದವರು ಹಾಜರಿದ್ದರು.

Related posts

ರಂಗಸ್ವಾಮಿ ನಿಧನ

Bimba Prakashana

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ

Bimba Prakashana

ದ್ರುವ ಸರ್ಜಾ ಚಲನಚಿತ್ರ ವೀಕ್ಷಣೆ ಮಾಡಲು 500 ಮಂದಿಗೆ ಅವಕಾಶ ಮಾಡಿ ಕೊಟ್ಟ ಸಾಗರ್ ಜಾನೇ ಕೆರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More