ವಿದ್ಯಾರ್ಥಿ ಸಾವಿಗೆ ಕಾರಣರಾದ ಕಡೂರು ಕ್ಷೇತ್ರದ ಶಿಕ್ಷಣಾಧಿಕಾರಿಯನ್ನು ವಿಚಾರಣೆಗೊಳಪಡಿಸಿ ತನಿಖೆ ನಡೆಸುವಂತೆ ಒತ್ತಾಯ*
ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳoಬಳಸೇ ಗ್ರಾಮದ ಗ್ರಾಮದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ವೈ ಎ ಗಾನವಿ ಇವರ ಮನೆಗೆ ರಾತ್ರಿ 9:00 ಸಮಯದಲ್ಲಿ ಕಡೂರು ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಪೋಷಕರ ಬಳಿ ನಿಮ್ಮ ಮಗಳು ಸರಿಯಾಗಿ ಓದುತ್ತಿಲ್ಲ ಮತ್ತು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆಂದು ದೂರಿದ್ದಲ್ಲದೆ ಬೆದರಿಕೆಯ ಮಾತುಗಳನ್ನು ಆಡಿ ಮಲಗಿದ್ದ ಮಗಳನ್ನು ಎಬ್ಬಿಸಿ ವಿದ್ಯಾರ್ಥಿನಿಯೊಂದಿಗೆ ಫೋಟೋವನ್ನು ತೆಗೆಸಿಕೊಂಡಿದ್ದಾರೆ .
ರಾತ್ರಿ ವೇಳೆ ಸರ್ಕಾರಿ ವಾಹನದಲ್ಲಿ ಏಕಾಏಕಿ ಗಗನ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದ್ದರಿಂದ ವಿದ್ಯಾರ್ಥಿನಿ ಗಾನವಿ ಮತ್ತು ಆಕೆಯ ಪೋಷಕರು ಗಾಬರಿಗೊಂಡು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ .
ಇದಾದ ನಂತರ ವಿದ್ಯಾರ್ಥಿನಿ ವೈ ಎ ಗಾನವಿ ಎರಡು ದಿನಗಳ ಕಾಲ ಊಟ ತಿಂಡಿ ಏನು ತ್ಯಜಿಸಿ ಖಿನ್ನತೆಗೆ ಒಳಗಾಗಿದ್ದಾಳೆ ನಂತರ ದಿನಾಂಕ 29ರಂದು ಆತ್ಮಹತ್ಯೆ ಶರಣಾಗಿದ್ದಾಳೆ
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಶಿಕ್ಷಣಾಧಿಕಾರಿ ತಿಮ್ಮಯ್ಯ ಇವರಿಗೆ ವಿಚಾರಣೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಡಿಎಸ್ಎಸ್ ಅಂಬೇಡ್ಕರ್ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಲ್ ಸಿ ವಸಂತ ಕುಮಾರಿ ಹಾಗೂ ರಾಜ್ಯ ಅಧ್ಯಕ್ಷರಾದ ಜಿತೇಂದ್ರ ಬಾಬು ಕಡೂರಿನಲ್ಲಿ ಒತ್ತಾಯಿಸಿದರು ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್ . ಕಡೂರು ಕ್ಷೇತ್ರದ ಶಾಸಕ ಕೆ ಎಸ್ ಆನಂದ್ ರವರು ಸರ್ಕಾರದ ಮೇಲೆ ಒತ್ತಡ ತಂದು ಆತ್ಮಹತ್ಯೆಗೆ ಒಳಗಾದ ವಿದ್ಯಾರ್ಥಿನಿ ಗಾನವಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕಡೂರು ತಾಲೂಕು ಮಡಿವಾಳ ಸಮಾಜದ ಸಂಘಟನಾ ಕಾರ್ಯದರ್ಶಿಗಳಾದ ಷಡಕ್ಷರಿ ಸಹ ಒತ್ತಾಯಿಸಿದ್ದಾರೆ
ಕಡೂರು ತಾಲೂಕು ಮಡಿವಾಳ ಮಾಚಿದೇವ ಸಂಘದಿಂದ ಸೂಕ್ತ ತನಿಖೆಗೆ ಒತ್ತಾಯ
ಮಡಿವಾಳ ಸಮುದಾಯ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಸಂಘಟನಾತ್ಮಕವಾಗಿ ಹಿಂದುಳಿದಿದ್ದು ಇಂತಹ ಪುಟ್ಟ ಸಮುದಾಯ ಹಾಗೂ ಸೌಮ್ಯ ಸಮುದಾಯದ ಮಡಿವಾಳ ಸಮುದಾಯದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣರಾಗಿರುವ ಕಡೂರು ತಾಲೂಕು ಶಿಕ್ಷಣಾಧಿಕಾರಿ ತಿಮ್ಮಯ್ಯ ರವರನ್ನು ಸೂಕ್ತ ವಿಚಾರಣೆ ಗೊಳಿಸಿ ತನಿಖೆ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ರಾಜ್ಯದ ಸರ್ಕಾರದ ಗೃಹ ಸಚಿವರಿಗೂ ಸಹ ಈಗಾಗಲೇ ಈ ದೂರು ನೀಡಲಾಗಿದೆ ಎಂದು ಕಡೂರು ತಾಲೂಕು ಮಡಿವಾಳ ಮಾಚಿದೇವ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಷಡಕ್ಷರಿ ಕಡೂರು ತಾಲೂಕಿನ ಡಿ ಎಸ್ ಎಸ್ ಅಂಬೇಡ್ಕರ್ ಧ್ವನಿ ಸಂಘಟನೆಯ ಕಚೇರಿಯಲ್ಲಿ ಪ್ರತಿಕ್ರಿಯಿಸಿದರು
