Blog

ಹೆತ್ತೂರು ಗ್ರಾಮಸಭೆಗೆ ಜನರ ಬಹಿಷ್ಕಾರ

ಇಂದು ನಡೆದ ಹೆತ್ತೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಯನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿ ಹೊರ ನಡೆದಿದ್ದಾರೆ.

ಇಂದು ಬೆಳಿಗ್ಗೆ ಗ್ರಾಮಸಭೆ ನಿಗದಿ ಆಗಿತ್ತು ಆದರೆ ಈ ಗ್ರಾಮ ಸಭೆ ಬಗ್ಗೆ ತೃಪ್ತರಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ

1. ಸಭೆಗೆ ಚುನಾಯಿತ ಆದ ಕೆಲ ಸದಸ್ಯರು ಬಾರದೆ ಇದ್ದದ್ದು.
2.  57 ಇಲಾಖೆ ಅವರಿಗೆ ಆಹ್ವಾನ ಕೊಟ್ಟು ಕೇವಲ 4 ರಿಂದ 5 ಇಲಾಖೆ ಅಧಿಕಾರಿಗಳು ಬಂದಿದ್ದು.
3.  ಸಭೆಗೆ ಬಂದ ಅಧಿಕಾರಿಗಳಿಗೆ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಗಳಿಗೆ ಸರಿಯಾದ ಸ್ವಾಗತ ಮಾಡದೇ ಇರುವುದು.
4. ಯಾವುದೇ ಕೆಲಸಗಳು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು.


5ವಾರ್ಡ್ ಸಭೆ ಅಲ್ಲಿ ನೀಡಿದ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಸಭೆಗೆ ಬಂದಿದ್ದು.
ಹಾಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ಕುಂದು ಕೊರತೆಗಳ ಬಗ್ಗೆ ಪಂಚಾಯ್ತಿ ಅವರು ಅಸಡ್ಡೆ ಮಾಡಿರುವುದು .
ಬೀದಿ ದೀಪಗಳು, ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದೆ ಇರುವುದು, ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳು, ಹಲವು ಊರುಗಳಿಗೆ ರಸ್ತೆಯ ಇಲ್ಲದಿರುವುದು, ಕಾಡು ಪ್ರಾಣಿಗಳು ಮತ್ತು ಆನೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, JJM ಹೆಸರಿನಲ್ಲಿ ಇದ್ದ ರಸ್ತೆಗಳನ್ನು ಬಗೆದು ಸರಿಯಾದ ನಿರ್ವಾಣೆ ಮಾಡದೆ ಮಳೆಗಾಲದಲ್ಲಿ ಅಲ್ಲಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ತಮ್ಮ ಊರಿನ ಸಮಸ್ಯೆ ಹಾಗೂ ತಮ್ಮ ಸಮಸ್ಯೆ ಬಗ್ಗೆ ಅರ್ಜಿ ಕೊಡಲು ಹೋದಾಗ ತಮ್ಮ ವಾರ್ಡಿನ ಗೆದ್ದು ಬಂದ ಸದಸ್ಯ ಕನಿಷ್ಠ ವಾರದ ದಿನವೂ, ಅತವಾ ತಿಂಗಳಿಗೆ ಒಮ್ಮೆಯೂ ಪಂಚಾಯತಿಗೆ ಬರದೆ ಇರುವುದು ಹೀಗೆ ಹಲವಾರು ಆರೋಪಗಳನ್ನು ಮಾಡಲಾಯಿತು.

Related posts

ಲಕ್ಕುಂದ ಗ್ರಾಮದಲ್ಲಿ ಕಾರ್ತಿಕೋತ್ಸವ

Bimba Prakashana

ಸಕಲೇಶಪುರ ಪೊಲೀಸರ ತುರ್ತು ಕಾರ್ಯಾಚರಣೆ

Bimba Prakashana

ಅರಸೀಕೆರೆ ಅಪ್ಪೇನ ಹಳ್ಳಿ ಸರಕಾರಿ ಶಾಲೆಗೆ ಕೊಠಡಿಯ ಸಮಸ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More