Blog

ಸಕಲೇಶಪುರ ಪೊಲೀಸರ ತುರ್ತು ಕಾರ್ಯಾಚರಣೆ

ಸಕಲೇಶಪುರ ಆನೆ ಮಹಲ್ ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ವ್ಯಕ್ತಿಗಳನ್ನು ಪೊಲೀಸರು ಬೆನ್ನಟ್ಟುವ ಮೂಲಕ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ.

ಸಕಲೇಶಪುರದ ಆನೆ ಮಹಲ್ ಬಳಿ ಇರುವ ಸಾವಿರಾರು ಮಂದಿ ಭಕ್ತರ ದೇವಸ್ಥಾನಕ್ಕೆ ಕಳ್ಳರು ಒಳ ನುಗ್ಗಿದ ಬಗ್ಗೆ ಸಿ ಸಿ ಟಿ ವಿ ಯಲ್ಲಿ ಚಿತ್ರೀಕರಣ ಆಗಿತ್ತು.

ತಕ್ಷಣಕ್ಕೆ ಈ ಬಗ್ಗೆ ಮಾಹಿತಿ ಪಡೆದ ಸಕಲೇಶಪುರ ಪೊಲೀಸರು ಸಿ ಸಿ ಟಿ ವಿ ಯಲ್ಲಿರುವ ಕಳ್ಳರ ಜಾಡು ಹಿಡಿದು ಅಗಲಟ್ಟಿ ಬಳಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು ಕೂಡಾ ಈ ಕಾರ್ಯಾಚರಣೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರು

ಸಂಪೂರ್ಣ ತನಿಖೆ ಬಳಿಕ ಇನ್ನಷ್ಟು ಮಾಹಿತಿ ಸಿಗುವ ಸಂಭವ ಇದೆ.

Related posts

ಬೇಲೂರುನಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

Bimba Prakashana

ಜೆಡಿಎಸ್ ಬಲವರ್ಧನೆ – ಸೋಮವಾರ ಪೂರ್ವ ಭಾವಿ ಸಭೆ

Bimba Prakashana

ಸಕಲೇಶಪುರದಲ್ಲಿ ಜನ ಸ್ಪಂದನೆ – 986 ಅರ್ಜಿ ಸ್ವೀಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More