Blog

ಕಾಡಾನೆ ಹಾವಳಿಗೆ ತಕ್ಷಣ ಸ್ಪಂದನೆ ಮಾಡಿದ ಅರಣ್ಯ ಇಲಾಖೆ

ಕಾಡಾನೆ ಹಾವಳಿಗೆ ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ: ಗ್ರಾಮಸ್ಥರಿಂದ ಮೆಚ್ಚುಗೆ

ಸಕಲೇಶಪುರ:- ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರ ಸಮಸ್ಯೆಗೆ ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿದೆ.

ಕಳೆದ ರಾತ್ರಿ ಸುಮಾರು 13 ಕಾಡಾನೆಗಳು ಗ್ರಾಮದ ಸುತ್ತಮುತ್ತ ಸಂಚರಿಸಿದ್ದು, ಮನೆಗಳ ಸಮೀಪ ಬಂದ ಆನೆಗಳು ಮೋನಿಕಾ ಹೇಮಂತ್ ಅವರ ಮನೆಯ ಬಳಿಯ ತೆಂಗಿನ ಮರವನ್ನು ಮುರಿದು ಹಾಕಿದ್ದವು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಂತರ ಬೆಳಗೋಡು ಅರಣ್ಯ ವಲಯದ ಮಂಜುನಾಥ್ ಅವರು ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ, ಹಾನಿಗೊಳಗಾದ ಸ್ಥಳವನ್ನು ಪರಿಶೀಲಿಸಿ, ಮುರಿದು ಬಿದ್ದ ತೆಂಗಿನ ಮರದ ವಿವರಗಳನ್ನು ಜಿಪಿಆರ್‌ಎಸ್ ಮೂಲಕ ದಾಖಲಿಸಿಕೊಂಡರು.

ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಬ್ಬನಹಳ್ಳಿ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದು, ಜನರ ಸುರಕ್ಷತೆಗೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ನಿಯಂತ್ರಣಕ್ಕೆ ಇಲಾಖೆ ಮುಂದಿನ ದಿನಗಳಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Related posts

ಸಕಲೇಶಪುರ ತಾಲೂಕು ಯಸಳೂರು  ಹೋಬಳಿಯ
ಹಿಜ್ಜಿನಹಳ್ಳಿ ಗ್ರಾಮದ  ಎಚ್ ಎ ಲೋಕೇಶ್  ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು.

ಅವರು ತಾಯಿ, ಪತ್ನಿ ಹಾಗೂ ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ

Bimba Prakashana

ಬೇಲೂರುನಲ್ಲಿ ಪತ್ರಕರ್ತರಿಗೆ ಸನ್ಮಾನ

Bimba Prakashana

ಬೇಲೂರು ಪುರಸಭೆಯಲ್ಲಿ ತುರ್ತು ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More