🔴ಸಕಲೇಶಪುರ ದಲ್ಲಿ
ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವ ಭಾವಿ
🔴ಸಮರ್ಥ ಸಾಧಕರ ಆಯ್ಕೆಗೆ ಸಲಹೆ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್*
ಸಕಲೇಶಪುರ:
ಸಕಲೇಶಪುರ ತಾಲೋಕು ಆಡಳಿತ ಸೌಧದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲುl ಪೂರ್ವಬಾವಿ ಸಭೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ *ಸಿಮೆಂಟ್ ಮಂಜು* ಕೆಂಪೇಗೌಡ ಜಯಂತಿಯನ್ನು ತಾಲೋಕು ಆಡಳಿತ ಉತ್ತಮವಾಗಿ ಮಾಡಲಿದೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು.
ಮಾಜಿ ಶಾಸಕ ವಿಶ್ವನಾಥ್ ಮಾತನಾಡಿ ಸಕಲೇಶಪುರ ತಾಲೋಕಿಗೆ ಆರ್ಥಿಕ ಶಕ್ತಿ ಹರಿದು ಬರುತ್ತಿದೆ ಆದರೆ ಸಕಲೇಶಪುರ ಪಟ್ಟಣಕ್ಕೆ ಬಂದರೆ ಹೇಸಿಗೆಯಾಗುತ್ತದೆ. ಪಟ್ಟಣದಲ್ಲಿ ಅಂಬೇಡ್ಕರ್ ಸ್ಟಾಚ್ಯು ಚಿಕ್ಕದಾದರೂ ಸುಂದರವಾಗಿದೆ. ಅದರ ಪಕ್ಕದಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಮತ್ತು ಪಟ್ಟಣದ ಪ್ರಮುಖ ಬೀದಿ ಎಲ್ಲಾ ಕಡೆ ಟೆಂಟ್ ಗಳನ್ನು ಹಾಕಿ ಸಕಲೇಶಪುರ ಸೌಂದರ್ಯ ಹಾಳುಗೆಡವಿದ್ದಾರೆ. ಕೆಂಪೇಗೌಡ ಸ್ಟಾಚ್ಯು. ಹತ್ತಿರ ಅಪಘಾತ ವಲಯ ಆಗಿ ಮಾರ್ಪಟ್ಟಿದೆ. ನಾವೆಲ್ಲ ಬಂಡವಾಳ ಹಾಕಿ ಕಷ್ಠ ಪಟ್ಟು ಕೆಂಪೇಗೌಡರ ಸ್ಟಾಚ್ಯೂ ಮಾಡಿದ್ದೇವೆ ಎಂದರೆ ಅದು ಊರಿನ ಸೌಂದರ್ಯಕ್ಕೆ ಮಾಡಿದ್ದೇವೆ. ಅದನ್ನು ಬಿಟ್ಟರೆ ಸ್ಟಾ ಚ್ಯು ನಿಮ್ಮೆಲ್ಲರ ಆಸ್ತಿ ನಾವು ಓನರ್ ಶೀಪ್ ಅದರಲ್ಲ ಎಂದರು.
ಸನ್ಮಾನ ಎಂಬುದು ಗೌರವಯುತವಾಗಿರಬೇಕು ಯಾರನ್ನೋ ಕರೆದುಕೊಂಡು ಬಂದು ಮಾಡುವುದು, ಮರಳು ಹೊಡೆಯೋರು. ಗಾಂಜಾ ಹೊಡೆಯೋರು ಕರೆದುಕೊಂಡು ಬಂದು ಸನ್ಮಾನ ಮಾಡಿದರೆ ಆ ಸನ್ಮಾನಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಸಮರ್ಥ ಸಾಧಕರನ್ನು ಆರಿಸಲು ಸಲಹೆ ನೀಡಿದರು.
ಉಪ ವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಮಾತನಾಡಿ ಕೆಂಪೇಗೌಡ ಸ್ಟಾಚ್ಯು ಹತ್ತಿರ ಶುಚಿತ್ವ ಕಾಪಾಡುವ ಕೆಲಸ ಹಾಗು ಸಲಹೆಗಳನ್ನು ಸಾಲೂ ಮಾಡುವುದಾಗಿ ಹೇಳಿದರು. ಹಾಗು ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಈ ಸಂಧರ್ಭದಲ್ಲಿ ಸನ್ಮಾನ ಮಾಡಲು ಅವಕಾಶ ಇರುತ್ತದೆ. ಸಾಧನೆ ಮಾಡಿದವರ ಪಟ್ಟಿ ಕೊಟ್ಟರೆ ಸನ್ಮಾನಿಸಲಾಗುವುದು ಎಂದರು.
ವೇದಿಕೆ ಕಾರ್ಯಕ್ರಮ ಶಿಕ್ಷಣ ಇಲಾಖೆಗೆ ವಹಿಸಿದರು.
ಗಿಡ ನಡುವ ವಿಚಾರ ತಹಸಿಲ್ದಾರ್ ಪ್ರಸ್ತಾಪಿಸಿದಾಗ ರಕ್ತಿದ್ದಿ ಪ್ರಸಾದ್ ಮಾತನಾಡಿ ಗಿಡ ನೆಡುವುದು ಮುಖ್ಯವಲ್ಲ ಗಿಡದ ರಕ್ಷಣೆ ಕೂಡ ಅಷ್ಟೇ ಅವಶ್ಯಕ ಎಂದರು
ಸಭೆಯಲ್ಲಿ ಬೈರಮುಡಿ ಚಂದ್ರಣ್ಣ.ಬೆಕ್ಕನಹಳ್ಳಿ ನಾಗರಾಜ್ .ಇಓ ಗಂಗಾಧರ್ . ಬಿಇಓ ಪುಷ್ಪ ಎಲ್ಲಾ ಅಧಿಕಾರಿಗಳು. ಒಕ್ಕಲಿಗರ ಸಂಘದ ಪಧಾಧಿಕಾರಿಗಳು ನಾಗರೀಕರು ಉಪಸ್ಥಿತರಿದ್ದರು.
ವರದಿ : ನಾಗೇಶ್ ಎಂ ಎಚ್ ಮಾಗೇರಿ
previous post
