Blog

ಅರಸೀಕೆರೆ ಅಪ್ಪೇನ ಹಳ್ಳಿ ಸರಕಾರಿ ಶಾಲೆಗೆ ಕೊಠಡಿಯ ಸಮಸ್ಯೆ

🔴ಜನಮನ ಗೆದ್ದ ಅಪ್ಪೇನಹಳ್ಳಿ ಸರ್ಕಾರಿ ಶಾಲೆ – ಕೊಠಡಿಗಳದೇ ಸಮಸ್ಯೆ

🔴ವರದಿ : ಎಂ ಡಿ ನಾಸಿರ್, ಅರಸೀಕೆರೆ


ಅರಸೀಕೆರೆ: ಇಂಗ್ಲಿಷ್ ವ್ಯಾಮೋಹದಿಂದ ಪೋಷಕರು ಖಾಸಗಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ ಇದರಿಂದಾಗಿ ಸರಕಾರಿ ಕನ್ನಡ ಶಾಲೆಗಳು ಅನೇಕವು  ಮುಚ್ಚಿವೆ ಇನ್ನೂ ಮುಚ್ಚುವ ಹಂತದಲ್ಲಿ ಇದೆ. ಇದಕ್ಕೆ ಕಾರಣ ಎಂದರೆ ಇಂದು ಇಂಗ್ಲಿಷ್ ಜ್ಞಾನ ಬಹಳ ಅಗತ್ಯ ಭವಿಷ್ಯ ತಿಳಿಸಿ  ರೂಪಿಸಿಕೊಳ್ಳಲು ಇಂಗ್ಲೀಷ್ ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಪೋಷಕರು ಗುಣಮಟ್ಟದ ಶಿಕ್ಷಣಕ್ಕಾಗಿ ಇಂಗ್ಲಿಷ್ ಜ್ಞಾನಾರ್ಜನೆಯ ಬಗ್ಗೆ ಕಾಳಜಿ ತೋರುತ್ತಿದ್ದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಆರ್ಥಿಕ ಹೊರೆಯಾದರು ಅನಿವಾರ್ಯವಾಗಿ ಅನುಭವಿಸುವಂತಹ ಸ್ಥಿತಿ. 

         ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸರಕಾರಿ ಶಾಲೆಗಳಲ್ಲಿ  ಅನೇಕ ಬದಲಾವಣೆಗಳಾಗಿವೆ . ಖಾಸಗಿ ಶಾಲೆಗಳಿಂತಲೂ ಹೆಚ್ಚಿನ ಗುಣಮಟ್ಟದ ಇಂಗ್ಲಿಷ್ ಬೋಧನೆಯನ್ನು ಮಾಡುವ ಸಾಮರ್ಥ್ಯವನ್ನು  ಹೊಂದಿರುವ ಶಿಕ್ಷಕರುಗಳು ಮತ್ತು ಪ್ರಾಥಮಿಕ ಹಂತದಲ್ಲಿ ಇಂಗ್ಲೀಷನ್ನು ಪರಿಚಯಿಸಿದ್ದಾರೆ. ಕರ್ತವ್ಯ ನಿಷ್ಠೆ ಮತ್ತು ಬದ್ಧತೆಯನ್ನು ಹೊಂದಿರುವ ಶಿಕ್ಷಕರುಗಳು ಇಂದು ತಾಲೂಕಿನಲ್ಲಿ ಕೆಲವು ಶಾಲೆಗಳನ್ನು ಖಾಸಗಿ ಶಾಲೆಗಳಿಗೂ ಮೀರಿ ಮುನ್ನಡೆಸುತ್ತಿದ್ದಾರೆ. 

     ಶಾಲೆಯೊಂದು  ಉಳಿಯಬೇಕಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯವೇ ಹೊರತು ಬಿಸಿಊಟ ಬಾಳೆಹಣ್ಣು ಮೊಟ್ಟೆಗಳಿಂದ ಅಲ್ಲ  ಎಂಬುದನ್ನು ಇಂತಹ ಶಾಲೆಗಳ ಶಿಕ್ಷಕರು ನಿರೂಪಿಸಿದ್ದಾರೆ ಯಾವುದೇ ಯೋಜನೆಗಳು ಕನ್ನಡ ಶಾಲೆಗಳನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ ಆದರೆ ವಿಶೇಷ ಕಾಳಜಿ ವಹಿಸುವ ಪೋಷಕರ ನಿರೀಕ್ಷೆಗೆ ಸ್ಪಂಧಿಸಬಲ್ಲ ಶಿಕ್ಷಕರಿಂದ ಮಾತ್ರ ಸಾಧ್ಯ,  ಕೆಲವು ಶಾಲೆಗಳು ಖಾಸಗಿ ಶಾಲೆಗಳಿಗೆ ಸವಾಲಾಗಿ ನಿಲ್ಲುತ್ತಿವೆ  ಇಂತಹ ಶಾಲೆಗಳನ್ನು ಪೋಷಕರು ಸಹ ಪ್ರೋತ್ಸಾಹಿಸುತ್ತಿದ್ದಾರೆ ಕೆಲ ಶಾಲೆಗಳಿಗೆ ಖಾಸಗಿ ಶಾಲೆಯಿಂದ ತಮ್ಮ ಮಕ್ಕಳನ್ನು ತಂದು ದಾಖಲಿಸುತ್ತಿರುವುದು ಉಂಟು 

      ಇಂತಹ ಸಾಧನೆಗೆ ತಾಲೂಕಿನ ಅಪ್ಪೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಾದರಿಯಾಗಿದೆ. ಪ್ರಮುಖ ರಸ್ತೆಗೆ ತೆರಳಬೇಕೆಂದರೆ ಈ ಗ್ರಾಮದಿಂದ ಬಹುತೇಕ ಆರು ಏಳು ಕಿಲೋಮೀಟರ್ ಹೋಗಬೇಕು. ರಿಮೋಟ್ ಏರಿಯಾ ಇಂತಹ ಶಾಲೆಯಲ್ಲಿ ಸಮಾನಮನಸ್ಕ  ಶಿಕ್ಷಕರು ಇಲಾಖೆಯ ನಿಗದಿತ ವೇಳೆಗಿಂತಲೂ ಮೊದಲೇ ಶಾಲೆಗೆ ಹಾಜರಾಗುತ್ತಾರೆ. ಪ್ರಾರ್ಥನೆಗೆ ಮುನ್ನವೇ ಒಂದು ಪೀರಿಯಡ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಮಕ್ಕಳು ಇಂಗ್ಲಿಷ್ ಕನ್ನಡ ನಿರರ್ಗಳವಾಗಿ ಓದುತ್ತಾರೆ ಇಂಗ್ಲಿಷ್ನಲ್ಲಿಯೂ ಸಂಭಾಷಿಸುತ್ತಾರೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಮಗುವಿಗೆ ಒಂದು ಪಾಟ್ ನಲ್ಲಿ ಗಿಡವನ್ನು ವಹಿಸಿದ್ದಾರೆ. ಅದರ ಸಂರಕ್ಷಣೆ ಪೋಷಣೆ ಅವರದೇ ಇದರಿಂದ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡುತ್ತದೆ ಮನೆ ಮತ್ತು ಅಕ್ಕಪಕ್ಕದಲ್ಲಿ ಈ ಬಗ್ಗೆ ಆಸಕ್ತಿ ತೋರಬೇಕೆಂದು ಶಿಕ್ಷಕರು ತಾಲಿವು ಮಾಡುತ್ತಾರೆ. 

        ಎಂಟನೇ ತರಗತಿಗೆ ಬಂದರು ಕನ್ನಡ ಓದಲು ಬರೆಯಲು ಬರುವುದಿಲ್ಲ ನಾವು ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಹೇಗೆ ಫಲಿತಾಂಶ ಕೊಡುವುದು ಎಂದು ಪ್ರೌಢಶಾಲಾ ಶಿಕ್ಷಕರು ಹೇಳುವುದು ಸಾಮಾನ್ಯ ಆದರೆ ಈ ಶಾಲೆಯ ವಿದ್ಯಾರ್ಥಿ ಒಬ್ಬ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗೇಶಪುರದ ಪ್ರೌಢಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿದ್ದಾನೆ ಆ ಶಾಲಾ ಶಿಕ್ಷಕರು ಈ ಶಾಲೆಯ ಗುಣಮಟ್ಟದ ಬೋಧನೆಯನ್ನು ಶ್ಲಾಘಸಿದ್ದಾರೆ ಎಂಬುದು ಸಹ ಗಮನಾರ್ಹ, 

       ಇಲ್ಲಿನ ಶಿಕ್ಷಕರು ತಮ್ಮ ವೇತನ ಹಣದಲ್ಲಿ ಮಕ್ಕಳಿಗೆ ಕಲಿಕೋಪಕರಣಗಳಾದ ನೋಟ್ ಬುಕ್ಸ್ ಬ್ಯಾಗ್ ಪೆನ್ಸಿಲ್ ಪೆನ್ ಮೊದಲಾದವುಗಳನ್ನು ಕೊಡಿಸುತ್ತಾರೆ ದಾನಿಗಳಿಂದಲೂ ವಿದ್ಯಾರ್ಥಿಗಳಿಗೆ ನೆರವನ್ನು ಕೊಡಿಸುವ ಕೆಲಸವನ್ನು ಮಾಡುತ್ತಾರೆ ಇದು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಮೂಡಿಸುತ್ತದೆ.   ಸಹ ಶಿಕ್ಷಕರು ಮುಖ್ಯ ಶಿಕ್ಷಕರು ಎಂಬುದಿಲ್ಲ, ಸಮಾನ ಮಸ್ಕರೆ  ಇದ್ದು ಶಾಲೆ ಅತ್ತ ಸಮುದಾಯವನ್ನು ಸೆಳೆಯುತ್ತಿದ್ದಾರೆ. ಶಾಲೆಯ ಸಣ್ಣ ಪುಟ್ಟ ಖರ್ಚುಗಳಿಗಾಗಿ ಅನುದಾನವನ್ನು ಇಲಾಖೆ ಕೊಡುತ್ತದೆ. ಈ ಶಾಲಾ ಶಿಕ್ಷಕರು ಅದರಲ್ಲಿ ಮಿತವ್ಯಯ ಮಾಡಿ ಒಂದು ಡಿಜಿಟಲ್ ಟಿವಿಯನ್ನು ತಂದಿಟ್ಟಿದ್ದಾರೆ ಮಕ್ಕಳಿಗೆ ದೃಶ್ಯದ ಮೂಲಕ ಬೋಧನೆ ಮಾಡಿದಾಗ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಅವರ ಕಲ್ಪನೆಯು ಹೌದು ಒಂದು  ಚಲನಚಿತ್ರವನ್ನು ಒಮ್ಮೆ ನೋಡಿ   ಹಲವು ದಿನ ನೆನಪಿನಲ್ಲಿ ಉಳಿಯುವಂತೆ ವಿಜ್ಞಾನ ಸಮಾಜ ಇತಿಹಾಸ ಮತ್ತು ಕನ್ನಡದ ಸಾಹಿತಿಗಳು ಅವರ ಪರಿಚಯ ಕಾಡು ಪ್ರಾಣಿ ಪಕ್ಷಿ ಮೊದಲಾದವುಗಳನ್ನು ಮಕ್ಕಳಿಗೆ ತೋರಿಸಿ ಬೋಧನೆ ಮಾಡಿದಾಗ ಇನ್ನೂ ಹೆಚ್ಚಿನ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂಬುದು ಶಿಕ್ಷಕರ ಚಿಂತನೆಯಾಗಿದೆ. 

       ಎಲ್ಲಾ ಶಾಲೆಗಳಿಗೆ ಕೊಟ್ಟಂತೆ ಇಲಾಖೆ  ಶಾಲೆಗೆ ಶಾಲೆಗೂ ಒಂದು ಕಂಪ್ಯೂಟರ್ ಕೊಟ್ಟಿದೆ, ಎಲ್ಲಾ ಮಕ್ಕಳು ಕಮ್ ಬ್ಯೂಟಿ ಬಳಸುವ ಜ್ಞಾನವನ್ನು ಹೊಂದಿದ್ದಾರೆ ಕಲರ್ ಪ್ರಿಂಟ್  ತೆಗೆಯುತ್ತಾರೆ ನುಡಿ ಟೈಪ್ ಮಾಡುತ್ತಾರೆ, ಮಕ್ಕಳಿಗೆ ಕಂಪ್ಯೂಟರ್ ಸಾಮಾನ್ಯ ಜ್ಞಾನವನ್ನು ಶಿಕ್ಷಕರು ತಿಳಿಸಿಕೊಟ್ಟಿದ್ದಾರೆ.  

         ಗುಣಮಟ್ಟದ ಶಿಕ್ಷಣ ಮತ್ತು ಸಮುದಾಯದ ಮೆಚ್ಚುಗೆ ಪಾತ್ರವಾಗಿರುವ ಈ ಶಾಲೆಗೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನವೂ ಸಹಕಾರಿಯಾಗಿದೆ ಎನ್ನಬಹುದು, ಆದರೆ ಶಾಲೆ ಕೊಠಡಿಗಳ ಸಮಸ್ಯೆಯನ್ನು ಎದುರಿಸುತ್ತಿದೆ ಈಗಾಗಲೇ ನೂತನ ಕಟ್ಟಡಕ್ಕಾಗಿ ಸುಮಾರು 60 ಗುಂಟೆ , ಭೂಮಿಯನ್ನು ಶಾಲೆಗೆ ನೀಡಲಾಗಿದೆ, ಈ ಶಾಲಾ ಶಿಕ್ಷಕರ ಕಾಳಜಿ ಮತ್ತು ಸಮುದಾಯದಿಂದ ಬರುತ್ತಿರುವ ಮೆಚ್ಚುಗೆಗೆ ಮೈಸೂರು ಮಿನರಲ್ಸ್ ಸಂಸ್ಥೆಯವರು ಸುಮಾರು 15 ಲಕ್ಷ ರೂಗಳ ವೆಚ್ಚದಲ್ಲಿ ಒಂದು ಕೊಠಡಿಯನ್ನು ಕಟ್ಟಿಕೊಡಲು ಮುಂದೆ ಬಂದಿದ್ದಾರೆ.

        ಇಂತಹ ಶಾಲೆಗಳನ್ನು ಕೆಪಿಎಸ್ ಶಾಲೆಗಳ ಚಿಂತನೆಯಿಂದ ಹೊರಗಿಟ್ಟು ಶಾಲೆಗೆ ಅಗತ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಆಸಕ್ತಿ ತೋರಬೇಕಿದೆ ಶಾಸಕರು ಈ ಶಾಲೆಗೆ ಕನಿಷ್ಠ ಎರಡು ಕೊಠಡಿಗಳನ್ನು ಒದಗಿಸಿಕೊಟ್ಟಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಈ ಗ್ರಾಮದ ಸುತ್ತಲ ಮಕ್ಕಳ ಸುಂದರ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ ಆಗುತ್ತದೆ. ಶಾಲೆಯತ್ತ ಮಕ್ಕಳನ್ನು ಆಕರ್ಷಿಸುವ ಚೈತನ್ಯ ಈ ಶಿಕ್ಷಕರಲ್ಲಿದೆ ಅಗತ್ಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಸರಕಾರಿ ಶಾಲೆಗಳು ಉಳಿಯಬೇಕಾದರೆ ಶಾಲೆಗಾಗಿ ಶಿಕ್ಷಕರು ಇಡುವ ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ಸಾಧ್ಯ ಶಾಸಕರು ಈ ನಿಟ್ಟಿನಲ್ಲಿ ಸ್ಪಂದಿಸುತ್ತಾರೆ ಎಂಬ ಆಶಾಭಾವನೆಯನ್ನು ಈ ಶಾಲಾ ಸಮಿತಿ ಮತ್ತು ಗ್ರಾಮಸ್ಥರು ಹೊಂದಿದ್ದಾರೆ. 

Related posts

ಶಾಸಕರ ಅನುದಾನದಲ್ಲಿ ಚವಳ್ಳಿ ಗ್ರಾಮದ ಕುಡಿಯುವ ಬಾವಿ ಸ್ವಚ್ಛತೆ

Bimba Prakashana

ಉದ್ಯೋಗ ಮಾಹಿತಿ

Bimba Prakashana

ಪಿ ಡಿ ಓ ಚಿನ್ನ ಸ್ವಾಮಿ ವರ್ಗಾವಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More