Blog

ಆಲೂರು ಮಣಿಪುರದಲ್ಲಿ ದರೋಡೆ

ಆಲೂರುನಲ್ಲಿ ನಿನ್ನೆ ತಡರಾತ್ರಿ ಒಂಟಿಮನೆ ನುಗ್ಗಿ ದರೋಡೆ ಮಾಡಲಾಗಿದೆ.

ಆಲೂರು. ತಾ.ಮಣಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತಹಸೀಲ್ದಾರ್ ರ ಕಾರು ಚಾಲಕರಾಗಿ ನಿವೃತ್ತಿ ಹೊಂದಿದ್ದ ಚಂದ್ರ ಶೇಖರಯ್ಯ ರ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಮಣಿಪುರ ಗ್ರಾಮದ ಒಂಟಿಮನೆಯಲ್ಲಿ ಈ ಕೃತ್ಯ ನಡೆದಿದೆ.

ಮನೆಗೆ ದರೋಡೆಕೋರರು ನುಗ್ಗಿದಾಗ  ಮನೆ ಮಾಲಿಕ ಚಂದ್ರಶೇಖರಯ್ಯ ಏರ್ ಗನ್ ತೋರಿಸಿ ಬೆದರಿಸಿದ್ದಾರೆ.

ಈ ವೇಳೆ ಗನ್ ಸಮೇತ ಮನೆ ಮಾಲಿಕ ಚಂದ್ರಯ್ಯ ನನ್ನ ಕೋಣೆ ಒಳಗೆ  ದರೋಡೆ ಕೋರರು ಕೂಡಿ ಹಾಕಿದ್ದಾರೆ..

ನಂತರ ಪತ್ನಿ  ಮತ್ತು ಮೊಮ್ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ದರೋಡೆಕೋರರನ್ನು ಕಂಡು
ಪೊಲೀಸ್ ಬಂದ್ರು ಎಂದು  ಚಂದ್ರುಶೇಖರಯ್ಯ ಪತ್ನಿ ಚಂದ್ರಕಲಾ ಕಿರುಚಾಟ ಮಾಡಿದ್ದಾರೆ.

ನಂತರ ಕೈಗೆ ಸಿಕ್ಕ ಚಿನ್ನ ಮತ್ತು ಹಣ ದರೋಡೆ ಮಾಡಿದ ಖದೀಮರು ಪರಾರಿಯಾಗಿದ್ದಾರೆ.

ಹಿಂದಿನ ಬಾಗಿಲು ಒಡೆದು ಒಳನುಗ್ಗಿದ ಮೂವರು  ದರೋಡೆಕೋರರಿಂದ ಕೃತ್ಯ ನಡೆದಿದೆ.

ದರೋಡೆ ಕೋರರ ಚಲನವಲನ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಸುಮಾರು 25 ಲಕ್ಷಕ್ಕೂ ಹೆಚ್ಚಿನ ಚಿನ್ನಾಭರಣ, ಎರಡು ಲಕ್ಷಕ್ಕೂ ಹೆಚ್ಚಿನ ನಗದು ದೋಚಿ ಪರಾರಿಯಾಗಿದ್ದಾರೆ

ಸ್ಥಳಕ್ಕೆ ಆಲೂರು ಪೊಲೀಸ್ ಶ್ವಾನ ದಳ ಡಿವೈಎಸ್ಪಿ ಮಾಲತೇಶ್ ಆಗಮನ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಆಲೂರಿನಲ್ಲಿ ಎರಡನೇ ದರೋಡೆ ಪ್ರಕರಣ ಇದಾಗಿದೆ

ಕಳೆದ ಒಂದು ತಿಂಗಳ ಹಿಂದೆ ಬೈರಾಪುರ ಪೆಟ್ರೋಲ್ ಬಂಕ್  ಖದೀಮರು ದರೋಡೆ ಮಾಡಿದ್ದರು.

Related posts

ಕುನಿಗನ ಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಗಿರೀಶ್

Bimba Prakashana

ಬೇಲೂರುನಲ್ಲಿ ಪವರ್ ವಾರ್

Bimba Prakashana

ಮಳಲಿಯಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More